Site icon Vistara News

’ಸತ್ಯಮಂಗಳ’ನಾಗಿ ಬಂದ ‘ಅಗ್ನಿಸಾಕ್ಷಿ’ ಖಳನಾಯಕ; ಮುನಿಕೃಷ್ಣ ಚಿತ್ರಕ್ಕೆ ರಾಗಿಣಿ ಸಾಥ್‌

sathyamangala

sathyamangala

ಬೆಂಗಳೂರು: ಹೀರೋ ಅಂದ್ರೆ ಹ್ಯಾಂಡ್ಸಮ್ ಆಗಿ ಇರಬೇಕು, ಜಿಮ್ ಮಾಡಿ ಫಿಟ್ ಆಗಿ ಇರಬೇಕು. ಈ ಗುಣಗಳಿದ್ದವರು ಮಾತ್ರ ಹೀರೋ ಆಗೋದಿಕ್ಕೆ ಸಾಧ್ಯ ಎಂಬ ಕಾಲವೆಲ್ಲ ಹೋಗಿ ಆಯ್ತು. ಈಗ ನಟನಾ ಪ್ರತಿಭೆ ಇರುವವರು ಯಾರು ಬೇಕಾದರೂ ಹೀರೋ ಆಗಬಹುದು. ಈಗ ಯಾಕೆ ಈ ಮಾತು ಅಂತೀರಾ? ʼಅಗ್ನಿಸಾಕ್ಷಿʼ ಧಾರಾವಾಹಿಯಲ್ಲಿ ಖಳನಾಯಕ ಮುರುಗನ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಮುನಿಕೃಷ್ಣ ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತಿದ್ದಾರೆ. ʼಕೊಡೆ ಮುರುಗʼ ಎಂಬ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಅವರೀಗ ʼಸತ್ಯಮಂಗಳʼ (Sathyamangala) ಸಿನಿಮಾದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ.

ಮುನಿಕೃಷ್ಣ ಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದನ್ನು ನಿರ್ದೇಶಕ ಆರ್ಯನ್ ಪ್ರತಾಪ್ ತಿಳಿಸಿದ್ದಾರೆ. ಪ್ರತಿ ಸೂಪರ್ ಸ್ಟಾರ್ ಅವರ ಮೊದಲ ಸಿನಿಮಾಕ್ಕೆ ನಿರ್ದೇಶಕರು ಬೆಂಬಲ ಕೊಟ್ಟಿದ್ದಕ್ಕೆ ಅವರ ಆ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತದೆ. ಅದೇ ರೀತಿ ಮುನಿಕೃಷ್ಣ ಅವರ ಸಿನಿಮಾ ಮೇಲಿನ ಪ್ರೀತಿ, ಡೆಡಿಕೇಷನ್ ದೊಡ್ಡದಿದೆ. ಹೀಗಾಗಿ ಅವರಿಗೆ ಅವಕಾಸ ನೀಡಿದೆ ಎಂದು ಹೇಳಿದ್ದಾರೆ

ʼಸತ್ಯಮಂಗಳʼ ಸಿನಿಮಾದ ಟೈಟಲ್ ಬಿಡುಗಡೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಚಿಕ್ಕ ಹಳ್ಳಿಯೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಗಿಣಿ ವಿಶೇಷ ಅತಿಥಿಯಾಗಿ ಆಗಮಿಸಿ, ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಕೋರಿದರು. ʼಕಾರಂಜಿʼ ಹಾಗೂ ʼಚೆಲುವೆಯೇ ನಿನ್ನ ನೋಡಲುʼ ಚಿತ್ರಗಳಿಗೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರುವ ಆರ್ಯನ್ ಪ್ರತಾಪ್, ಕನ್ನಡ 90/11, ತಮಿಳಿನ ಹೇರ್ ಕೆನಾರ್ ಕಿರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಏಳು ಅಂತಾರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದೆ. ಮಣಿರತ್ನಂ ಸಾರಥ್ಯದ ʼಅಲೈ ಪಾಯುತೇʼ, ʼರಾವಣ್ʼಗೆ ಅಸಿಸ್ಟೆಂಟ್ ಡೈರೆಕ್ಷರ್ ಆಗಿ, ಹಾಲಿವುಡ್ ವಿಲ್ ಸ್ಮಿತ್ ಬಳಗದಲ್ಲಿಯೂ ದುಡಿದಿರುವ ಆರ್ಯನ್ ಪ್ರತಾಪ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ʼಸತ್ಯಮಂಗಳʼ ಸಿನಿಮಾಕ್ಕೆ ಅ ಕಥೆವರೇ ಬರೆದಿರುವುದು ವಿಶೇಷ. ಫಸ್ಟ್ ಫಿಲ್ಮಂ ಎವರ್ ಮೇಡ್ ಸ್ಕ್ರಿಪ್ಟ್ ಸೀನ್ ಸಾಹಸಕ್ಕೆ ಗಿನ್ನಿಸ್ ಬುಕ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಅಡ್ವೆಂಚರ್ಸ್ ಥ್ರಿಲ್ಲಿಂಗ್ ಕಹಾನಿಯ ʼಸತ್ಯಮಂಗಳʼ ಸಿನಿಮಾದಲ್ಲಿ ದಿ ಗ್ರೇಟ್ ಖಲಿ, ಬಾಲಿವುಡ್ ಅರ್ಬಾಜ್ ಖಾನ್, ಕನಕ್ ಪಾಂಡೆ, ಶರಣ್ಯ, ಸಂಜಯ್ ಕುಮಾರ್ ರವಿ ಕಹಳೆ, ವಿಜಯ್ ಚಿಂದೂರ್, ಮಂತೇಶ್ ಹಿರೇಮಠ್, ಜಿಜಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹೂವಿನ ಹಡಗಲಿ ಶಾಸಕ ಕೃಷ್ಣ ನಾಯಕ್ ಅರ್ಪಿಸುವ ಈ ಚಿತ್ರವನ್ನು ಎಎಸ್‌ಎ ಪ್ರೊಡಕ್ಷನ್ ಮತ್ತು ಐರಾ ಪ್ರೊಡಕ್ಷನ್‌ ಅಡಿ ಶಂಕರ್ ಬಿ. ಹಾಗೂ ಮುನಿಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರಶೇಖರ್ ಕೆ.ಎಸ್. ಕ್ಯಾಮೆರಾ, ವೀರ್ ಸಮರ್ಥ್ ಸಂಗೀತ, ಎಂ.ಎನ್. ವಿಶ್ವ ಸಂಕಲನ, ಪೀಟರ್ ಹೈನ್ಸ್ ಸ್ಟಂಟ್, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

ಇದನ್ನೂ ಓದಿ: Milana Nagaraj: ನೀರೊಳಗೆ ಪೃಥ್ವಿ ಅಂಬಾರ್ -ಮಿಲನಾ ನಾಗರಾಜ್ ಡ್ಯುಯೆಟ್‌!

ʼಸತ್ಯಮಂಗಳʼ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ದಾಂಡೇಲಿ, ಮಲೆ ಮಹಾದೇಶ್ವರ ಬೆಟ್ಟ, ಶ್ರೀಲಂಕಾ, ಕಟ್ಮುಂಡು, ಬ್ಯಾಂಕಾಕ್‌ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಚಿತ್ರತಂಡ 10 ದಿನಗಳ ಕಾಲ ಬ್ಯಾಂಕಾಕ್‌ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದೆ. ವಿಶೇಷ ಅಂದರೆ ʼಸತ್ಯಮಂಗಳʼ ಸಿನಿಮಾದಲ್ಲಿ ಪಾಂಡಿಚೇರಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ನಟಿಸಿದ್ದಾರೆ. ಯಾವ ಪಾತ್ರ ಅನ್ನೋದನ್ನು ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version