Site icon Vistara News

Anirudh Jatkar: ʻಜೊತೆ ಜೊತೆಯಲಿ’ ಧಾರಾವಾಹಿಯ ವಿವಾದದ ಬಗ್ಗೆ ಬೇಸರ ಹೊರ ಹಾಕಿದ ಅನಿರುದ್ಧ್!

Anirudh Jatkar again rise on voice jote joteyali serial issue

ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾಗಿರುವ ಅನಿರುದ್ಧ್ (Kannada New Movie)​ ಜತ್ಕರ್ ನಾಯಕನಾಗಿ ನಟಿಸಿರುವ, ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ “Chef ಚಿದಂಬರ” ಚಿತ್ರ ಜೂನ್ 14ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂದರ್ಶನವನ್ನು ನೀಡುತ್ತಿದ್ದಾರೆ ಅನಿರುದ್ಧ್. ಈ ವೇಳೆ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಅವರ ‘ಜೊತೆ ಜೊತೆಯಲಿ’ ಧಾರಾವಾಹಿ ವಿವಾದದ ಕುರಿತು ಮತ್ತೆ ಧ್ವನಿ ಎತ್ತಿದ್ದಾರೆ. ಯಶಸ್ವಿ ಧಾರಾವಾಹಿಯ ನಿರ್ದೇಶಕ ಹೀಗೆಲ್ಲ ಹೇಗೆ ಹೇಳುವುದಕ್ಕೆ ಸಾಧ್ಯ ಎಂದು ಅನಿರುದ್ಧ್ ಬೇಸರ ಹೊರ ಹಾಕಿದ್ದಾರೆ.

ಅನಿರುದ್ಧ್‌ ಮಾತನಾಡಿ ʻʻಪ್ರತಿ ಮನೆಯಲ್ಲೂ ಜಗಳ ಆಗುತ್ತದೆ. ಭಿನ್ನಾಭಿಪ್ರಾಯ ಬಂದೇ ಬರುತ್ತದೆ. ಹಾಗೇ ಕಿರುತೆರೆಯಲ್ಲಿಯೂ ಇದ್ದಿದ್ದೆ. ಆದರೆ ನಮಗಿಂತ ದೊಡ್ಡದು ಪ್ರಾಜೆಕ್ಟ್‌. ಆಗಿದ್ದು ಆಗೋಯ್ತು. ಮತ್ತೆ ಧಾರಾವಾಹಿಗೆ ಕರೀರಿ ಎಂದೆ. ನಿರ್ದೇಶನ ಕೂಡ ಅವರೇ ಮಾಡಲಿ ಎಂದೆ. ಆ ನಿರ್ದೇಶಕರ ಮುಂದೆ ಮಾಡಬೇಡಿ ಎಂದರು ತುಂಬ ಜನ. ಆದರೂ ನಾನು ಅದೆಲ್ಲ ಮರೆತು ಮುಂದೆ ಸಾಗಬೇಕು ಎಂದಿದ್ದೆ. ಆದರೆ ನನ್ನ ಬಗ್ಗ ಹೀಗೆ ಎಲ್ಲ ಕಡೆ ಅಪ್ರಪಚಾರ ಮಾಡಿಕೊಂಡು ಬಂದರು. ನಿರ್ದೇಶಕರು ಮಾಧ್ಯಮಗಳ ಮುಂದೆ ಏನೆಲ್ಲ ಮಾತನಾಡಿದ್ರೂ ನಾನು ನೋಡೇ ಇಲ್ಲ. ನನಗೆ ಬೇಕಾಗಿರಿಲ್ಲ. ಕ್ಲೈ ಮ್ಯಾಕ್ಸ್‌ ಕೂಡ ಆಗ ಶೂಟ್‌ ಆಗಿತ್ತು. ಇಷ್ಟೆಲ್ಲ ಆದಮೇಲೆ ಇದೆಲ್ಲ ಬೇಕಾಗಿತ್ತ ಅನ್ನಿಸತು. ಯಶಸ್ಸಿನ ಬೆಲೆ ನಿರ್ದೇಶಕರಿಗೆ ಗೊತ್ತಿರಲಿಲ್ಲ. ಇದನ್ನು ನಾನು ಬಹಳಷ್ಟು ಬಾರಿ ಗಮನಿಸಿದ್ದೀನಿ, ಬೇಜಾರು ಮಾಡಿಕೊಂಡಿದ್ದೀನಿ. ಅವರಿಗೆ ಹೇಳಿದ್ದೀನಿ ಕೂಡ. ಹಿಂದೆ ಒಂದಿಷ್ಟು ಧಾರಾವಾಹಿಗಳನ್ನು ಮಾಡಿದ್ದೀನಿ. ಮುಂದೆ ಒಂದಿಷ್ಟು ಮಾಡುತ್ತೀನಿ ಅನ್ನುವ ಧೋರಣೆ ಅಲ್ಲಿತ್ತು.” ಎಂದಿದ್ದಾರೆ.

ʻಜೊತೆ ಜೊತೆಯಲಿ ಧಾರಾವಾಹಿ ಪ್ರತಿ ವಾಕ್ಯ ಜನರಿಗೆ ಗೊತ್ತಿತ್ತು. ಅಷ್ಟೂ ಫೇಮಸ್‌ ಆಗಿತ್ತು. ಜೊತೆ ಜೊತೆಯಲಿ ಧಾರಾವಾಗಿ ಆಗುವಾಗ ನಾನು ತುಂಬ ಪರಫೆಕ್ಷನ್‌ ಅಲ್ಲಿ ಇರುತ್ತಿದ್ದೆ. ನನಗೆ ಅಪ್ರೋಚ್‌ ಕೂಡ ಚೆನ್ನಾಗಿ ಇರಬೇಕು. ಮತ್ತೆ ಸಮಯ ಕೂಡ ಸರಿಯಾಗಿರಬೇಕು. ಆದರೆ ಇದೆಲ್ಲ ನೋಡಿ ನನ್ನ ಗುಣ ಇಗೋ ಥರ ಇದೆ ಎಂದರೆ ಅದಕ್ಕೆ ನಾನೇನು ಮಾಡಲಿಕ್ಕೆ ಆಗಲ್ಲ. ಆ ಸೀರಿಯಲ್‌ನಲ್ಲಿ ಅವರದ್ದೇ ಹೆಸರು ಇರೋದು. ಅವಾರ್ಡ್ ತೆಗೆದುಕೊಳ್ಳುವುದು ಕೂಡ ಅವರೇ. ಡೈರೆಕ್ಷನ್ ಮಾಡುವುದಕ್ಕೆ ಬರೋದಿಲ್ಲ ಅವರು. ಸಂಚಿಕೆ ನಿರ್ದೇಶಕರು ಡೈರೆಕ್ಟ್ ಮಾಡುತ್ತಾರೆ.ನಿರ್ದೇಶನವೇ ಮಾಡದೆ ಅದು ಹೇಗೆ ಅವಾರ್ಡ್ ತೆಗೆದುಕೊಳ್ಳುತ್ತಾರೆ?” ʼʼಎಂದಿದ್ದಾರೆ.

ಶೂಟಿಂಗ್‌ ಸೆಟ್‌ನಲ್ಲಿ ನಿರ್ದೇಶಕರಿಗೆ ಅನಿರುದ್ಧ್‌ ಅವರು ನಿಂದಿಸಿ ಸೆಟ್‌ನಿಂದ ಹೊರಗೆ ನಡೆದಿದ್ದಾರೆ. ಸೆಟ್‌ನಲ್ಲಿ ಸ್ಕ್ರಿಪ್ಟ್‌ ವಿಚಾರಕ್ಕೆ ಅವರು ಪದೇಪದೆ ಜಗಳವಾಡುತ್ತಿದ್ದರು. ಇದರಿಂದಾಗಿ ನಿರ್ಮಾಪಕ ಆರೂರು ಜಗದೀಶ್‌ ತೀವ್ರ ನೊಂದಿದ್ದಾರೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಮುಂದೆ ಅನಿರುದ್ಧ ಬಗ್ಗೆ ದೂರು ದಾಖಲಾಗಿತ್ತು. ಆ ಬಳಿಕ ಕಿರುತೆರೆಯಿಂದ ಅನಿರುದ್ಧ ಅವರನ್ನು ಬ್ಯಾನ್‌ ಕೂಡ ಮಾಡಲಾಯ್ತು.

Exit mobile version