Site icon Vistara News

Ashwini Puneeth Rajkumar: ಐಶಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್

Ashwini Puneeth Rajkumar

ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಅವರು ಆಡಿ ಕ್ಯೂ7 ಕಾರು ಖರೀದಿ ಮಾಡಿದ್ದಾರೆ. ಗ್ರೇ ಬಣ್ಣದ ಆಡಿ ಕ್ಯೂ 7 ಕಾರು ಇದಾಗಿದ್ದು, ಕಾರಿನ ಬೆಲೆ ಬೆಂಗಳೂರಿನಲ್ಲಿ 1.10 ಕೋಟಿ ರೂ. ಇಂದ 1.20 ಕೋಟಿ ರೂ.ಗಳಿವೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ನಿರ್ಮಾಪಕಿ. ಜತೆಗೆ ಸಿನಿಮಾಗಳ ಪ್ರಚಾರ ಕಾರ್ಯದಲ್ಲಿಯೂ ಭಾಗಿಯಾಗುತ್ತಿದ್ದಾರೆ.

ಈ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 14 ಕಿ.ಮೀವರೆಗೂ ಮೈಲೇಜ್ ನೀಡುತ್ತದೆ. ಕಾರಿನ ಒಳ ವಿನ್ಯಾಸ ಕೂಡ ಅದ್ಭುತವಾಗಿದೆ.

ಇದನ್ನೂ ಓದಿ: Ashwini Puneeth Rajkumar: ಈ ವಾರ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ನಿರ್ಮಾಣದ ʻಆಚಾರ್​ ಆ್ಯಂಡ್​ ಕೋʼ ಸಿನಿಮಾ ತೆರೆಗೆ!

ಪುನೀತ್ ರಾಜ್​ಕುಮಾರ್ ಅವರಿಗೂ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇತ್ತು. ಹಲವು ಐಶಾರಾಮಿ, ದುಬಾರಿ ಕಾರುಗಳನ್ನು ಪುನೀತ್ ರಾಜ್​ಕುಮಾರ್ ಖರೀದಿ ಮಾಡಿದ್ದರು.

ಸದ್ಯ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣದ ‘O2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Exit mobile version