Site icon Vistara News

Bangalore Kambala: ಬೆಂಗಳೂರು ಕಂಬಳಕ್ಕೆ ರಕ್ಷಿತ್ ಶೆಟ್ಟಿ ಸಪೋರ್ಟ್‌; ತಾರೆಯರ ಸಮಾಗಮ!

Rakshith shetty In Bangalore Kambala

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bangalore Kambala) ವೀಕೆಂಡ್‌ ಹಬ್ಬವಾಗಿ ಬೆಂಗಳೂರು ಕಂಬಳ ಕಳೆಕಟ್ಟಿಕೊಟ್ಟಿದೆ. ಎಲ್ಲಿ ನೋಡಿದರೂ ಜನವೇ ಜನ. ಕರಾವಳಿಯ ಸಾಂಪ್ರದಾಯಿಕ ಕಲೆಗೆ (Traditional art of the coastal Karnataka) ಬೆಂಗಳೂರಿಗರು ಅಕ್ಷರಶಃ ಮಾರು ಹೋಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಸಾಗರವೇ ಸೇರಿದೆ. ಜತೆಗೆ ತಾರೆಯರು ಕೂಡ ಭಾಗಿಯಾಗಿದ್ದಾರೆ. ರಕ್ಷಿತ್‌ ಶೆಟ್ಟಿ, ಬೃಂದಾ ಆಚಾರ್ಯ, ರಮೇಶ್‌ ಅರವಿಂದ್‌, ಉಪೇಂದ್ರ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ನಟ ನಟಿಯರು ಕಂಬಳದಲ್ಲಿ ಸಾಕ್ಷಿಯಾದರು.

ರಕ್ಷಿತ್‌ ಶೆಟ್ಟಿ ಮಾತನಾಡಿ ʻʻವರ್ಷ ವರ್ಷ ಹೀಗೆ ಕಂಬಳ ಹೀಗೆ ಮಾಡಿ. ಸಪ್ತ ಸಾಗರ ಸಿನಿಮಾ ಚಿತ್ರಮಂದಿರದಲ್ಲಿ ನೋಡಿʼʼಎಂದರು. ಬೆಂಗಳೂರು ಕಂಬಳದ (Bangalore Kambala) ಉತ್ಸವಕ್ಕೆ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇಲ್ಲಿರುವ ತುಳುನಾಡಿನ ಬಹುತೇಕ ಮಂದಿ ಇದು ನಮ್ಮ ಹಬ್ಬ ಎಂಬಂತೆ ಭೇಟಿ ನೀಡುತ್ತಿದ್ದಾರೆ. ಕೋಣಗಳ ಓಟವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಖಾದ್ಯಗಳನ್ನು ಸವಿದು ಆನಂದಿಸುತ್ತಿದ್ದಾರೆ. ಬೆಂಗಳೂರಿನಲ್ಲಿದ್ದುಕೊಂಡೇ ಕಂಬಳದ ಅಲೆಯಲ್ಲಿ ಒಮ್ಮೆ ಕರಾವಳಿಗೆ ಹೋಗಿ ಬಂದಿದ್ದಾರೆ! ಎರಡನೇ ದಿನವಾದ ಭಾನುವಾರವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿರುವುದು ಕಂಬಳದ ಸಂಭ್ರಮವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಇದನ್ನೂ ಓದಿ: Bangalore Kambala : ಬೆಂಗಳೂರಿನಲ್ಲಿ ಕಳೆಗಟ್ಟಿದ ಕಂಬಳದ ವೈಭವ: ಸಂಜೆ ಮ್ಯೂಸಿಕ್‌ ಬೀಟ್‌, ವಿಜೇತರಿಗೆ ಬಹುಮಾನ

ಭಾನುವಾರ ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje), ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (Former Prime Minister HD DeveGowda) ಸೇರಿದಂತೆ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಕರಾವಳಿಯ ಸಂಭ್ರಮವನ್ನು ಬೆಂಗಳೂರಿಗರಿಗೆ ತೋರಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಇದು ಪ್ರತಿ ವರ್ಷವೂ ಆಗಬೇಕು. ನಾವು ಬಾಲ್ಯದಲ್ಲಿ ಕಂಬಳವನ್ನು ನೋಡಲು ಹೋಗುತ್ತಿದ್ದವು ಎಂದು ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version