Site icon Vistara News

Bipasha Basu: ಮಗಳು ದೇವಿ ಜತೆ ಸುಂದರ ಕ್ಷಣ ಅನುಭವಿಸಿದ ಬಿಪಾಶಾ ಬಸು!

Bipasha Basu enjoys sunset with daughter Devi

ಬೆಂಗಳೂರು: ಬಿಪಾಶಾ ಬಸು (Bipasha Basu) ಇತ್ತೀಚೆಗೆ ತಮ್ಮ ಮಗಳು ದೇವಿಯೊಂದಿಗೆ ಗೋವಾ ಬೀಚ್‌ನಲ್ಲಿ ಸುಂದರ ಕ್ಷಣಗಳನ್ನು ಅನುಭವಿಸಿದ್ದಾರೆ. ಬೀಚ್‌ನಲ್ಲಿ ಫ್ಯಾಮಿಲಿ ಜತೆ ಸಖತ್‌ ಎಂಜಾಯ್‌ ಮಾಡಿದ್ದಾರೆ ನಟಿ. “ಗಾರ್ಜಿಯಸ್ ಸನ್‌ಸೆಟ್‌” ಎಂದು ಮಗಳ ಜತೆ ಆಡಿದ ವಿಡಿಯೊ ಹಂಚಿಕೊಂಡಿದ್ದಾರೆ ನಟಿ.

ಇನ್ನೊಂದು ವಿಡಿಯೊದಲ್ಲಿ ಕರಣ್ ಸಿಂಗ್ ಗ್ರೋವರ್ ಮಗಳಿಂದ ಮೇಕಪ್‌ ಮಾಡಿಸಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಿಪಾಶಾ ಬಸು (Bipasha Basu) ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಮುಂಚೆ ಮಗಳ ಕುರಿತಾಗಿ ನಟಿ ಭಾವುಕರಾಗಿದ್ದರು. ಮಗಳು ಹುಟ್ಟಿದ ಮೂರೇ ದಿನಕ್ಕೆ ಅವಳ ಹಾರ್ಟ್‌ನಲ್ಲಿ ರಂಧ್ರವಿರುವ ವಿಚಾರ ಗೊತ್ತಾದ ಸಂಗತಿ ನೆನೆಸಿಕೊಂಡು ಅವರು ದುಃಖ ವ್ಯಕ್ತಪಡಿಸಿದ್ದರು. ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ನಟಿ ನೇಹಾ ಧೂಪಿಯಾ ಅವರೊಂದಿಗೆ ಮಾತನಾಡಿದ ಬಿಪಾಶಾ, ಮಗಳೂ ದೇವಿ ಮೂರು ತಿಂಗಳ ಮಗುವಾಗಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು.

ʻʻದೇವಿಗೆ ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್‌ ಇರುವುದು ಪತ್ತೆಯಾಯಿತು ಎಂದು ಬಿಪಾಶಾ ಬಸು ತಿಳಿಸಿದ್ದಾರೆ. ವಿಎಸ್‌ಡಿ ಎಂದರೇನು ಎಂಬುದು ನಮಗೆ ಅರ್ಥವಾಗಲಿಲ್ಲ. ಅದೊಂದು ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್. ಈ ವಿಚಾರ ಗೊತ್ತಾದಾಗ ನಾವು ನಮ್ಮ ಮನೆಯವರೊಂದಿಗೆ ಈ ಬಗ್ಗೆ ಚರ್ಚಿಸಲಿಲ್ಲ. ಮೊದಲ ಐದು ತಿಂಗಳು ನಮಗೆ ತುಂಬಾ ಕಷ್ಟಕರವಾಗಿತ್ತು. ಮಗುವಿನ ಹೃದಯದಲ್ಲಿ ರಂಧ್ರಗಳಿರುವ ವಿಚಾರ ಮೂರು ದಿನಗಳ ನಂತರ ನಮಗೆ ತಿಳಿಯಿತು. ಸರಿ ಆಗಬಹುದು ಎಂದು ಕಾದೆವು. ಆದರೆ, ಆಗಲಿಲ್ಲ. ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ತುಂಬಾ ಕಷ್ಟ. ಕೊನೆಗೂ ನಾವು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡೆವು. ಬಳಿಕ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡಿದರು ಎಂದು ನಟಿ ಬಿಪಾಶಾ ತಿಳಿಸಿದರು. ಮಗಳು ಆಪರೇಷನ್ ಥಿಯೇಟರ್‌ನಲ್ಲಿದ್ದ ಆ 6 ಗಂಟೆ ನನ್ನ ಪ್ರಾಣವೇ ನಿಂತು ಹೋದಂತೆ ಭಾಸವಾಗಿತ್ತು. ದೇವಿ (Devi) ಈಗ ಆರಾಮಾಗಿದ್ದಾಳೆ. ದೇವಿ ಆರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆಯಲ್ಲಿದ್ದಳು. 40 ದಿನ ನಾನು ನಿದ್ದೆ ಮಾಡಿಲ್ಲ . ನಾನು ಸುಳ್ಳು ಹೇಳುತ್ತಿಲ್ಲ. ನಾನು ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆʼʼ ಎಂದಿದ್ದರು. ತಮ್ಮ ಮಗಳಿಗೆ ದೇವಿಯ ಆಶೀರ್ವಾದ ಎಂದು ಕರೆಯುವ ಬಿಪಾಶಾ ಮಗಳಿಗೆ ‘ದೇವಿ’ ಎಂದೂ ನಾಮಕರಣ ಮಾಡಿದ್ದರು.

ಇದನ್ನೂ ಓದಿ: Bipasha Basu: ಮಗಳ ಕುರಿತಾಗಿ ಕಣ್ಣೀರಿಟ್ಟ ಖ್ಯಾತ ನಟಿ ಬಿಪಾಶಾ ಬಸು!

ಬಿಪಾಶಾ ಬಸು ಸ್ವಲ್ಪ ಸಮಯದಿಂದ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ನಟ ಕರಣ್ ಸಿಂಗ್ ಗ್ರೋವರ್ ಕೊನೆಯದಾಗಿ ಹೃತಿಕ್ ರೋಷನ್-ನಟಿಸಿದ ಫೈಟರ್ ಚಿತ್ರದಲ್ಲಿ ಕಾಣಿಸಿಕೊಂಡರು.

Exit mobile version