ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ (Kannada New Movie) ʻಬಿಸಿಬಿಸಿ-ice creamʼ ಸಿನಿಮಾದ ʻಜವಾರಿʼ ಹಾಡು ಬಿಡುಗಡೆಯಾಗಿದೆ. ʻಉಜ್ಜಾಡ್ಬಿಟ್ಳುʼ ಎಂಬ ʻಜವಾರಿʼ ಸಿಂಗಿಂಗ್ ಮಸ್ತಿಗೆ ನಿರ್ದೇಶಕ ಅರವಿಂದ್ ಶಾಸ್ತ್ರೀ ಸಾಹಿತ್ಯ ಬರೆದಿದ್ದು, ಪ್ರೀತಿಯ ಪರಿವಾಳ ಖ್ಯಾತಿಯ ರಮೇಶ ಕುರುಬಗಟ್ಟಿ ಮತ್ತು ರಾಮ ಹಡಪದ ಧ್ವನಿಯಾಗಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ಶ್ರಮ ಹಾಡಿಗಿದೆ. ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಈ ಜವಾರಿ ಸಾಂಗ್‌ವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
‘ಬಿಸಿ-ಬಿಸಿ Ice-Cream’ ಕಥೆಯನ್ನ ಕನ್ನಡಿಗರ ಎದುರು ಹೇಳೋದಿಕ್ಕೆ ಸಿದ್ದವಾಗ್ತಿದ್ದಾರೆ ಅರವಿಂದ್ ಶಾಸ್ತ್ರೀ. ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ, ಈ ಚಿತ್ರದಲ್ಲಿ ಅರವಿಂದ್ ಐಯ್ಯರ್ ಮತ್ತು ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವುದು ಗಮನ ಸೆಳೆದಿದೆ. ವಿಭಿನ್ನವಾದ ಸಿನಿಮಾ ಕೊಡಲು ಈ ತಂಡ ಸಿದ್ಧವಾಗಿದೆ.
ಅರವಿಂದ್ ಶಾಸ್ತ್ರಿ ಒಂದು ಗ್ಯಾಪ್ ನಂತರ ಈಗ ಮತ್ತೆ ಕಂಬ್ಯಾಕ್ ಮಾಡ್ತಿದ್ದಾರೆ. 4 ವರ್ಷದ ನಂತರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅರವಿಂದ್ ಶಾಸ್ತ್ರಿ, ಒಂದೊಳ್ಳೆ ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕ ಪ್ರಭು ಎದುರು ಹಾಜರಾಗುತ್ತಿದ್ದಾರೆ. ಇನ್ನ ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಈ ಚಿತ್ರಕ್ಕೆ ಇದ್ದು. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷರ ಭಾರಧ್ವಾಜ್ ‘ಬಿಸಿ-ಬಿಸಿ Ice-Cream’ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
ಇದನ್ನೂ ಓದಿ: Kannada New Movie: ನ್ಯಾಷನಲ್ ಇಶ್ಯೂ ʻರವಿಕೆ ಪ್ರಸಂಗʼದ ಟ್ರೈಲರ್ ಔಟ್!
Happy to release #Ujjadbitlu from Bisi-Bisi Ice-Cream, composed by @NakulAbhyankar.https://t.co/qbsikwKMVEhttps://t.co/GX7xQs0ul7
— Anirudh Ravichander (@anirudhofficial) January 27, 2024
Best wishes team @arvindsastry @aksharaBwaj @aravinndiyer @SiriRavikumar
ಬಿಸಿ ಬಿಸಿ ಐಸ್ ಕ್ರೀಮ್, ಅನಾರೋಗ್ಯದಲ್ಲಿರುವ ಕ್ಯಾಬ್ ಡ್ರೈವರ್ ಜೀವನದಲ್ಲಿ ನಿಗೂಢ ಮಹಿಳೆಯೊಬ್ಬಳು ಬಂದಾಗ, ಅವಳು ಅವನ ದುಃಖಗಳಿಗೆ ಔಷಧ ಮತ್ತು ಅನೇಕ ಸಾಹಸಗಳಿಗೆ ನಾಂದಿಯಾಗುತ್ತಾಳೆ ಎಂಬ ಕಥೆ ಎಳೆಯನ್ನು ಇಟ್ಟುಕೊಂಡು ಅರವಿಂದ್ ಶಾಸ್ತ್ರೀ ಸಿನಿಮಾ ಮಾಡಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಮಾರ್ಚ್‌ನಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.