Site icon Vistara News

Blink Movie: ಹಾಫ್ ಸೆಂಚುರಿ ಬಾರಿಸಿದ ʻಬ್ಲಿಂಕ್ ʼ ಸಿನಿಮಾ; ಒಟಿಟಿಯಲ್ಲಿಯೂ ʻಬಹುಪರಾಕ್ʼ!

Blink Movie in half centuru with good in OTT

ಬೆಂಗಳೂರು: ಶ್ರೀನಿಧಿ ಬೆಂಗಳೂರು ನಿರ್ದೇಶನದ ಟೈಮ್‌ ಟ್ರಾವೆಲ್‌ ಸಿನಿಮಾ “ಬ್ಲಿಂಕ್‌” (Blink Movie) ಅಮೆಜಾನ್ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಸಿನಿಮಾದ ಕುರಿತು ಜನ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಟಿಟಿಗೂ ಎಂಟ್ರಿ ಕೊಟ್ಟಿರುವ ಚಿತ್ರವೀಗ ಯಶಸ್ವಿಯಾಗಿ 50 ದಿನ ಪೂರೈಸಿದೆ. ಕನ್ನಡ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ ಎಂಬ ಅಪವಾದದ ನಡುವೆ ʻಬ್ಲಿಂಕ್ʼ ಆಫ್ ಸೆಂಚುರಿ ಬಾರಿಸಿರುವುದು ಇಡೀ ತಂಡಕ್ಕೆ ಖುಷಿ ಕೊಟ್ಟಿದೆ. ಈ ಕ್ಷಣಗಳನ್ನು ಚಿತ್ರತಂಡ ಮಾಧ್ಯಮದವರೊಟ್ಟಿಗೆ ಹಂಚಿಕೊಂಡಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರವಿಚಂದ್ರ ಎ ಜೆ ಮಾತನಾಡಿ, ʻʻಸಿನಿಮಾ ಈ ಲೆವೆಲ್‌ಗೆ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಮನೆಯವರು ಖುಷಿಯಾಗಿದ್ದಾರೆ. ತಂಡ ಖುಷಿಯಾಗಬೇಕು ಎಂದರೆ ಅಂದುಕೊಂಡಿರುವ ದೊಡ್ಡ ಬರಬೇಕು. ಇಡೀ ಸಿನಿಮಾ ತಂಡ ಪ್ರಾಮಾಣಿಕವಾಗಿ ದುಡಿದಿದೆ. ಅವರಿಗೆಲ್ಲಾ ಮುಂದೆ ಒಳ್ಳೆ ಸಿನಿ ಕರಿಯರ್ ಸಿಗಬೇಕು. ಆದಷ್ಟು ಬೇಗ ತೆಲುಗಿಗೂ ಡಬ್ ಮಾಡಿಸುತ್ತೇವೆ. ತಮಿಳು ಡಬ್ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಿನಿಮಾಗೆ ಭಾಷೆಯ ಎಲ್ಲೆ ಇಲ್ಲʼʼ ಎಂದರು.

ಇದನ್ನೂ ಓದಿ: Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ʻʻಬಹಳ ಖುಷಿಯಾಗುತ್ತಿದೆ. ಎಷ್ಟೋ ವರ್ಷಗಳ ನಂತರ ಹೊಸಬರ ತಂಡ 50 ದಿನಗಳ ಕಾಲ ಸಿನಿಮಾವನ್ನು ಥಿಯೇಟರ್‌ನಲ್ಲಿ ಉಳಿಸಿಕೊಂಡಿದ್ದೇವೆ. ನಮಗೆ ನಂಬಲು ಆಗುತ್ತಿಲ್ಲ. ಮೊದಲ ದಿನದಿಂದ ಇಲ್ಲಿವರೆಗೂ ಬಹಳಷ್ಟು ಹೋರಾಟ ಮಾಡಿದ್ದೇವು. ನಾವು ಜನರನ್ನು ಕರೆದುಕೊಂಡು ಥಿಯೇಟರ್ ತುಂಬಿಸುತ್ತಿದ್ದೇವೆ ಎಂದು ಒಂದಷ್ಟು ಜನ ಮಾತಾನಾಡಿಕೊಂಡರು. ಹಾಗೇ ಹೇಳಿದವರಿಗೆ ಉತ್ತರ 50 ದಿನ. ಸಿನಿಮಾ ಅಷ್ಟು ಕೋಟಿ ಮಾಡಬೇಕು. ಇಷ್ಟು ಕೋಟಿ ಮಾಡಬೇಕು ಎನ್ನುವುದು ನನ್ನ ತಲೆಯಲ್ಲಿ ಇರಲಿಲ್ಲ. ನಿರ್ಮಾಪಕರು ಗೆಲ್ಲಬೇಕು. ನಿಲ್ಲಬೇಕು ಅನ್ನುವುದಷ್ಟೇ ಇತ್ತು. ಹಾಕಿದ ಬಂಡವಾಳ ವಾಪಸ್ ಬರುವುದರಲ್ಲಿದೆ. ಹೀಗಾಗಿ ಖುಷಿ ಇದೆ ಎಂದು ಭಾವಿಸಿದ್ದೇನೆ. ಈ ಗೆಲುವಿಗೆ ಕಾರಣರಾದ ಇಡೀ ತಂಡಕ್ಕೆ ಧನ್ಯವಾದʼʼ ತಿಳಿಸಿದರು.

ಹೊಂದಿಸಿ ಬರೆಯಿರಿ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ , ಐವತ್ತು ಬರೀ ನಂಬರ್ ಅಷ್ಟೇ ಅಲ್ಲ. ಅದಕ್ಕೂ ಮೀರಿ ಸಿನಿಮಾವನ್ನು ಚಿತ್ರತಂಡ ತೆಗೆದುಕೊಂಡು ಹೋದ ರೀತಿ ನಾವು ಹೊಂದಿಸಿ ಬರೆಯಿರಿ ಮಾಡುವ ಟೈಮ್ ನಲ್ಲಿ ಮಾಡಿದ ರೀತಿ ಇತ್ತು. ಆ ಜರ್ನಿಯೇ ರೋಚಕ. ಬ್ಲಿಂಕ್ ಸಿನಿಮಾ ನೋಡಿದಾಗ ಇದು ಬೇರೆನೇ ಇದೆ ಎನಿಸಿತು. ಮೂರು ವರ್ಷ ಟ್ರಾವೆಲ್ ಆಗಿ ಸಿನಿಮಾ ಮಾಡುವುದು ಒಂದು ಜರ್ನಿಯಾದರೆ. ಸಿನಿಮಾ ತಲುಪಿಸಲು ಅಷ್ಟೇ ಟ್ರಾವೆಲ್ ಆಗಬೇಕು. ಸಿನಿಮಾ ಮಾಡಿ ಸುಮ್ಮನೇ ಆಗಬಾರದು. ಸಿನಿಮಾ ಚೆನ್ನಾಗಿ ಇದ್ದಾಗ ನಿಲ್ಲಿಸಲು ಓಡಾಡಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.

ಒಟಿಟಿಯಲ್ಲಿಯೂ ಬ್ಲಿಂಕ್‌ಗೆ ಬಹುಪರಾಕ್

ಥಿಯೇಟರ್‌ನಲ್ಲಿಯೂ ಭರಪೂರ ಮೆಚ್ಚುಗೆ ಪಡೆದಿದ್ದ ಬ್ಲಿಂಕ್ ಸಿನಿಮಾ ಒಟಿಟಿಯಲ್ಲಿಯೂ ಸದ್ದು ಮಾಡಿದೆ. ಅಮೇಜಾನ್ ಪ್ರೈಮ್ ಗೆ ಎಂಟ್ರಿ ಕೊಟ್ಟು 3 ದಿನದಲ್ಲಿಯೇ 7 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದು, 4ನೇ ದಿನ 10 ಮಿಲಿಯನ್ ಮಿನಿಟ್ಸ್ ರೀಚ್ ಆಗಿದೆ. ಹೊಸಬರ ಚಿತ್ರಕ್ಕೆ ಇಷ್ಟು ಒಳ್ಳೆ ರೆಸ್ಪಾನ್ಸ್ ಸಿಕ್ಕಿರುವುದು ಖುಷಿ.

‘ಬ್ಲಿಂಕ್’ ಚಿತ್ರಕ್ಕೆ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿದ್ದಾರೆ. ರವಿಚಂದ್ರ ಎ.ಜೆ. ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಚೈತ್ರಾ ಆಚಾರ್, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.

ಶಿವರಾತ್ರಿ ಹಬ್ಬದಂದು ಸೂಪರ್ ಸ್ಟಾರ್ಸ್ ಸಿನಿಮಾಗಳ ಮಧ್ಯೆ ತೆರೆಗೆ ಬಂದ ‘ಬ್ಲಿಂಕ್’ ಸಿನಿಮಾಗೆ ಪ್ರಾರಂಭದಲ್ಲಿ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದು ಮೂರರಲ್ಲಿ ಮತ್ತೊಂದು ಸಿನಿಮಾ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಆರಂಭದ ದಿನಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು, ಸಿನಿಮಾದ ಬಗ್ಗೆ ಮಾತನಾಡಿ ಆದ ಮೌತ್ ಪಬ್ಲಿಸಿಟಿಯಿಂದ ‘ಬ್ಲಿಂಕ್’ ಶೋಗಳು ಏರಿಕೆಯಾಗುತ್ತಾ ಹೋದವು. ಕನ್ನಡ ಸಿನಿಮಾಗಳಿಗೆ ಶೋ ಸಿಕ್ತಿಲ್ಲ ಎಂಬ ಆಪವಾದದ ನಡುವೆ 8 ಶೋಗಳಿಂದ 82 ಶೋ ಬ್ಲಿಂಕ್ ಪಾಲಾಗಿತ್ತು. ಹೀಗಾಗಿ ಶೋ ಹೆಚ್ಚಳದಿಂದ ಪ್ರೇಕ್ಷಕರ ಪ್ರೀತಿಯೂ ಪಡೆದ ಬ್ಲಿಂಕ್ ಸಿನಿಮಾ ಆಫ್ ಸೆಂಚುರಿ ಬಾರಿಸಿದೆ.

Exit mobile version