ಬೆಂಗಳೂರು: ಬಿಗ್ ಬಾಸ್ʼನಿಂದ ಹೆಚ್ಚು ಜನಪ್ರಿಯರಾಗಿರುವ ಆ್ಯಂಕರ್ ಚೈತ್ರಾ ವಾಸುದೇವನ್ (Chaitra Vasudevan) ಅವರು ತಮ್ಮ ದಾಂಪತ್ಯಕ್ಕೆ ವಿಚ್ಛೇದನ ನೀಡಿರುವುದು ಗೊತ್ತೇ ಈದೆ. ಚೈತ್ರಾ ಅನೌನ್ಸ್ ಮಾಡಿದ ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಯಿತು. ಈವೆಂಟ್‌ವೊಂದರಲ್ಲಿ ಚೈತ್ರಾ ಅವರನ್ನ ನೋಡಿ ಉದ್ಯಮಿ ಸತ್ಯ ನಾಯ್ಡು (Sathya Naidu) ಅವರು ಇಷ್ಟಪಟ್ಟು ಹಿರಿಯರನ್ನ ಒಪ್ಪಿಸಿ, 2017ರಲ್ಲಿ ಮದುವೆಯಾದರು. ಆದರೆ ಜೋಡಿ ತಮ್ಮ ಮಧ್ಯೆ ಇರುವ ಸಮಸ್ಯೆಯನ್ನ ಸರಿಪಡಿಸಿಕೊಳ್ಳಲು ಪ್ರಯತ್ನಪಟ್ಟಿತ್ತು. ಆದರೆ ಅದು ಸಾಧ್ಯವಾಗದ ಕಾರಣ ಯೋಚಿಸಿ, ಇಬ್ಬರ ಸಮ್ಮತಿಯ ಮೇರೆಗೆ ಡಿವೋರ್ಸ್ ಪಡೆದುಕೊಂಡರು. ಇದೀಗ ಸಂದರ್ಶನವೊಂದರಲ್ಲಿ ಚೈತ್ರಾ ಅವರು ನೋವು ತೋಡಿಕೊಂಡಿದ್ದಾರೆ.
ಚೈತ್ರಾ ಮಾತನಾಡಿ ʻʻನಾನು ಈ ಬಗ್ಗೆ ಅನೌನ್ಸ್ ಮಾಡುವೆ ಮೊದಲೇ ಡಿವೋರ್ಸ್ ಮಾಡಿದ್ದೆ. ಈ ಬಗ್ಗೆ ನಾನು ಎಲ್ಲಿಯೂ ಹೇಳಲು ಇಷ್ಟ ಪಟ್ಟಿರಲಿಲ್ಲ. ನನ್ನ ತಂದೆ ತಾಯಿ ಕೂಡ ಆಗ ನನ್ನ ಜತೆ ನಿಂತು, ನಿನ್ನ ಜವಾಬ್ದಾರಿ ಅಂದಿದ್ದರು. ಬೇರೆಯವರ ಕರ್ಮ ಅವರು ಅನುಭವಿಸುತ್ತಾರೆ. ಎಲ್ಲೂ ಕಂಪ್ಲೇನ್ ಮಾಡಬೇಡು ಎಂದು ತಂದೆ ತಾಯಿ ಹೇಳಿದ್ದರು. ಕ್ಷುಲ್ಲಕ ಕಾರಣಕ್ಕೆ ಸಪ್‌ರೇಟ್ ಆದರು ಎನ್ನುವ ಗಾಸಿಪ್ ಹರಡಿತ್ತು. ಆದರೆ ರಿಯಲ್ ರೀಸನ್ ಬೇರೆ ಇದೆ. ನನ್ನ ಕುಟುಂಬ ಅಂದರೆ ನಾನು, ನನ್ನ ತಂದೆ ತಾಯಿ, ಸೇರಿ ಮೋಸ ಹೋದೆವು. ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಮೋಸ ಹೋದೆವು. ಆದರೆ ನಾನು 5 ವರ್ಷಗಳ ಕಾಲ ಕಾದೆ. ಎನೋ ಒಂದು ಆಗತ್ತೆ ಅಂತ. ನಾನು ಸಿಲ್ಲಿ ಹುಡುಗಿ ಅಲ್ಲ. ಏನೋ ಅಚೀವ್ ಮಾಡಬೇಕು..ಏನೋ ಮಾಡಬೇಕು ಎಂದು ದುಡ್ಡು ದುಡೀಬೇಕು ಎಂಬ ಕಾರಣಕ್ಕೆ ಸಪ್‌ರೇಟ್ ಆಗ್ತೀನಿ ಎನ್ನುವ ಸಿಲ್ಲಿ ಹುಡುಗಿ ನಾನಲ್ಲ. ನಾನು ಪ್ಲ್ಯಾನ್ ಮುಂಚೆ ಹೇಗ್ ಮಾಡಿದ್ದೆ ಅಂದರೆ, ನನ್ನ ಕುಟುಂಬ, ನನ್ನ ಫ್ಯಾಮಿಲಿ, ಅತ್ತೆ ಮಾವ ಹೀಗೆ ಜತೆಗೆ ಇರಬೇಕು, ಮಕ್ಕಳು ಇರಬೇಕು ಎಂದು ಬಯಸಿದ್ದೆ. ಆದರೆ ಕನಸು ನನಸಾಗಿಲ್ಲ. ಕಳೆದ ಎರಡು ವರ್ಷದ ಹಿಂದೆ ಏನು ಮಾಡಕ್ಕೆ ಆಗದೇ ಸುಮ್ಮನೇ ಇದ್ದೆ. ಕೆಟ್ಟ ದಿನಗಳು ಆಗಿದ್ದವು. ಯಾರಾದರೂ ಬಂದು ನನ್ನ ಸೇವ್ ಮಾಡ್ತಾರಾ ಎನ್ನುವ ಪರಿಸ್ಥಿತಿ ಇತ್ತು. ಆ ತರ ನಾನು ಹಾತೊರೆಯುತ್ತಿದ್ದೆ. ಪ್ರೀತಿ ಮಾಡಿ, ಆದರೆ ನಿಜ ಹೇಳಿ. ಆದರೆ ಯಾರಿಗೂ ಮೋಸ ಮಾಡಬೇಡಿ. ಆದರೆ ನಾನು ಯಾರಿಗೂ ಮೋಸ ಮಾಡಿಲ್ಲ. ಆದರೆ ನನಗೆ ಹೀಗ್ ಆಯ್ತುʼʼಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Chaitra Vasudevan: ಅಹಂಕಾರದಿಂದ ಬೇರೆಯಾಗಿಲ್ಲ ಎಂದು ಡಿವೋರ್ಸ್ ಅಸಲಿ ಕಾರಣ ತಿಳಿಸಿದ ಆ್ಯಂಕರ್ ಚೈತ್ರಾ!
ಕುಂದಾಪುರದ ಹುಡುಗಿ ಚೈತ್ರಾ ಜತೆ ಸತ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿನಿಮಾ ಕಾರ್ಯಕ್ರಮದ ನಿರೂಪಣೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಚೈತ್ರಾ ಅಭಿಮಾನಿಗಳ ಗಮನ ಸೆಳೆದರು.
ಡಿವೋರ್ಸ್ ಪೋಸ್ಟ್ ಹಂಚಿಕೊಂಡಿದ್ದ ಚೈತ್ರಾ
‘ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನು ಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಚೈತ್ರಾ ಬರೆದುಕೊಂಡಿದ್ದರು.
ಆ್ಯಂಕರ್ ಆಗಿದ್ದ ಚೈತ್ರಾ ‘ಬಿಗ್ ಬಾಸ್ (big boss) ಕನ್ನಡ ಸೀಸನ್ 7’ರ ಸ್ಪರ್ಧಿಯಾಗಿದ್ದರು. ಚೈತ್ರಾ ವಾಸುದೇವನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಚೈತ್ರಾ ತಮ್ಮದೇ ಆದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದಾರೆ.