ಬೆಂಗಳೂರು: ಫೆ.16ರಂದು ದರ್ಶನ್ (Challenging Star Darshan) ಅವರ ಜನುಮದಿನ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಸಿನಿರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಕಳೆದಿವೆ. ಲೈಟ್ ಮ್ಯಾನ್, ಕ್ಯಾಮೆರಾಮನ್ ಆಗಿ ಚಿತ್ರರಂಗದಲ್ಲಿ ಕೆಲಸ ಆರಂಭಿಸಿದ ದರ್ಶನ್, ಸೀರಿಯಲ್ಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಗಿಟ್ಟಿಸಿಕೊಳ್ಳಲು ಪರದಾಡಿದ ದಿನಗಳು ಇವೆ. ಅದರ ಜತೆಗೆ ವೈಯಕ್ತಿಕ ಕಾರಣಗಳಿಂದಲೂ ಇವರು ಸುದ್ದಿಯಾಗಿದ್ದು ಹೆಚ್ಚು.
ದರ್ಶನ್ ಸಿನಿ ಪಯಣ
ನಾಯಕನಾಗಿ ಸಿನಿ ಪಯಣ ಶುರು ಮಾಡಿದ ದರ್ಶನ್, ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆದಿದ್ದಾರೆ. ದರ್ಶನ್ ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. 2001ರಲ್ಲಿ ಬಿಡುಗಡೆಯಾದ ʻಮೆಜೆಸ್ಟಿಕ್ʼ ಚಿತ್ರದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ಕರಿಯ (2003) , ನಮ್ಮ ಪ್ರೀತಿಯ ರಾಮು (2003), ಕಲಾಸಿಪಾಳ್ಯ (2005), ಗಜ (2008), ಸಾರಥಿ (2011) ಮತ್ತು ಬುಲ್ ಬುಲ್ (2013)ನಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ (2012) ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದರು. ‘ವಲ್ಲರಸು’ ಚಿತ್ರದಲ್ಲೂ ಅವರು ನಟಿಸಿದರು. ಇದು ತಮಿಳು ಸಿನಿಮಾ. ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ಸಂಪಾದಕೀಯ2003ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ ಕರಿಯ ಚಿತ್ರ ನಟ ದರ್ಶನ್ ಜನಪ್ರಿಯತೆಯನ್ನು ದುಪ್ಪಟ್ಟು ಮಾಡಿತು.
ಇದನ್ನೂ ಓದಿ; Challenging Star darshan: ದರ್ಶನ್ ಫ್ಯಾನ್ಸ್ ನಿಯಂತ್ರಣಕ್ಕೆ 300 ಪೊಲೀಸರು; ಅಭಿಮಾನಿಗಳಿಗೆ ಊಟ, ರಕ್ತದಾನ ಶಿಬಿರ
2004ರಲ್ಲಿ ತೆರೆಕಂಡ `ಕಲಾಸಿಪಾಳ್ಯʼ ಸಿನಿಮಾ ಕೂಡ ಸೂಪರ್ ಹಿಟ್ ಆಯ್ತು. ರಕ್ಷಿತಾ-ದರ್ಶನ್ ಜೋಡಿ ಹಿಟ್ ಜೋಡಿಯಾಗಿ ಬದಲಾಯ್ತು. ಇತ್ತೀಚಿಗೆ ತೆರೆಕಂಡ ದರ್ಶನ್ ʻಕಾಟೇರʼ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. ಕನ್ನಡದಲ್ಲಿ ಮಾತ್ರ ʻಕಾಟೇರʼ ಸಿನಿಮಾ ರಿಲೀಸ್ ಆಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಹೆಮ್ಮೆಯ ವಿಚಾರ ದರ್ಶನ್ ಅವರಿಗೆ ಈ ಹಿಂದೆ ತರುಣ್ ಸುಧೀರ್ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ದರ್ಶನ್ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದರು. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಿದ್ದಾರೆ.
ಹಲವು ವಿವಾದದಲ್ಲಿ ದರ್ಶನ್
ಕೈಯಲ್ಲಿ ಲಾಂಗ್
ʻಕಾಟೇರ; ಸಿನಿಮಾದ (Katera Movie) ಪ್ರಮೋಷನ್ ಮತ್ತು ಇತ್ತೀಚೆಗೆ ನಾಯಿಯೊಂದು ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣದಲ್ಲಿ ಸುದ್ದಿಯಾಗಿದ್ದ ದರ್ಶನ್, ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೈಯಲ್ಲಿ ಲಾಂಗ್ ಹಿಡಿದು ಪೋಸ್ (Darshan poses with long in hand) ನೀಡಿರುವುದು ಚರ್ಚೆಗೆ ಕಾರಣವಾಗಿತ್ತು. ದರ್ಶನ್ ಯಾವತ್ತಿದ್ದರೂ ಅಭಿಮಾನಿಗಳ ಪಾಲಿನ ಪ್ರೀತಿಯ ನಟ. ಅವರಿಗೆ ಅತ್ಯಂತ ದೊಡ್ಡ ಫ್ಯಾನ್ ಬೇಸ್ ಇದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಅವರ ಮನೆ ಬಳಿಯೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ. ದರ್ಶನ್ ಯಾವ ಅಭಿಮಾನಿಗೂ ನಿರಾಸೆ ಆಗಲು ಬಿಡುವುದಿಲ್ಲ. ದಾರಿಯಲ್ಲಿ ಹೋಗುವಾಗಲೂ ಯಾರಾದರೂ ನಿಲ್ಲಿಸಿದರೆ ಮಾತನಾಡಿಸಿ ಹೋಗುವ ಜಾಯಮಾನ ಅವರದು. ಅಭಿಮಾನಿಗಳು ಎಲ್ಲೇ ಕಾರ್ಯಕ್ರಮ ಆಯೋಜಿಸಿದರೂ ಅವರು ತಪ್ಪಿಸಿಕೊಳ್ಳುವುದು ಕಡಿಮೆ. ಇಂಥ ಅಭಿಮಾನ ಹೊಂದಿರುವ ನಟ ದರ್ಶನ್ ಅಭಿಮಾನಿಗಳಿಗೆ ಬೇಸರ ಆಗಬಾರದು ಎಂಬ ಕಾರಣಕ್ಕೆ ಕೈಯಲ್ಲಿ ಲಾಂಗ್ ಹಿಡಿದು ಸಂಕಷ್ಟಕ್ಕೆ ಸಿಲುಕಿದ್ದರು. ಹುಲಿಯ ಉಗುರಿನ ಪೆಂಡೆಂಟ್ (Tiger nail pendent) ಧರಿಸಿದ ಕಾರಣಕ್ಕೆ ಕೆಂಗಣ್ಣಿಗೆ ಗುರಿಯಾದ್ದರು ದರ್ಶನ್.
ಇದನ್ನೂ ಓದಿ: Gold Rate Today: ಬಜೆಟ್ ದಿನ ಬಂಗಾರದ ಬೆಲೆ ಸ್ವಲ್ಪ ಏರಿಕೆ, ರಾಜಧಾನಿಯಲ್ಲಿ ದರ ಹೀಗಿದೆ ನೋಡಿ
ಪತ್ನಿ ವಿಜಯಲಕ್ಷ್ಮಿ- ಪವಿತ್ರಾ ಗೌಡ ವಿವಾದ
ಪವಿತ್ರಾ ಗೌಡ – ವಿಜಯಲಕ್ಷ್ಮಿ ವಾರ್ ಗೊತ್ತಿರುವ ಸಂಗತಿ. ತೆರೆ ಮರೆಯಲ್ಲಿ ನಡೆಯುತ್ತಿದ್ದ ವಾಗ್ವಾದ ನಂತರ ಬಹಿರಂಗವಾಯಿತು. ಕಾಟೇರ ಯಶಸ್ಸಿನಲ್ಲಿ ಇದ್ದ ದರ್ಶನ್ ಮೊದಲ ಬಾರಿಗೆ ಕೌಟುಂಬಿಕ ಕಲಹ ಇರಸುಮುರಸು ಮಾಡಿತ್ತು ಮಾಡೆಲ್ ಪವಿತ್ರ ಗೌಡ ಅವರು ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್ (Darshan Thoogudeepa) ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಇದಾದ ಮೇಲೆ ಆ ಪೋಸ್ಟ್ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದರು. ಇದಾದ ಮೇಲೆ ಪವಿತ್ರಾ ಗೌಡ ಅಸಮಾಧಾನ ಹೊರಹಾಕಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಟ್ಯಾಗ್ ಮಾಡಿ, ಎಚ್ಚರಿಕೆಯ ಸಂದೇಶವನ್ನು ಬರದು ಪೋಸ್ಟ್ ಮಾಡಿದ್ದರು.
‘ಬೆಳ್ಳಿ ಪರ್ವ’ ಆಚರಣೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಸಿನಿರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳು ಕಳೆದಿವೆ. ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ‘ಬೆಳ್ಳಿ ಪರ್ವ’ ಆಚರಣೆಗೆ ಮುಂದಾಗಿದ್ದಾರೆ. ಅದ್ಧೂರಿಯಾಗಿ ಈ ಕಾರ್ಯಕ್ರಮ ಫೆಬ್ರವರಿ 17ರಂದು ನಡೆಯಲಿದೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.
ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಫೆಬ್ರವರಿ 17ರ ಸಂಜೆ 5ಕ್ಕೆ ಈ ಕಾರ್ಯಕ್ರಮ ಆರಂಭ ಆಗಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ. ಇವೆಲ್ಲ ಕಾರ್ಯಗಳ ಉಸ್ತುವಾರಿಯನ್ನು ದರ್ಶನ್ ಅವರ ಆತ್ಮೀಯರಾದ ಎಸ್.ಸಚ್ಚಿದಾನಂದ ಇಂಡುವಾಳು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.