Site icon Vistara News

Sanjay Dutt: ʻಅಧೀರʼನ ಜತೆ ಕಾಣಿಸಿಕೊಂಡ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌!

Challenging Star Darshan Meets Sanjay Dutt Special Meeting

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಬಾಲಿವುಡ್‌ನ ಖ್ಯಾತ ನಟ ಸಂಜಯ್‌ ದತ್‌ (Sanjay Dutt) ಭೇಟಿಯಾಗಿದ್ದು, ಒಟ್ಟಿಗೆ ಪೋಸ್‌ ಕೊಟ್ಟಿದ್ದಾರೆ.

ನಟ ಸಂಜಯ್ ದತ್ ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.ಈ ಫೋಟೋಗಳನ್ನು ʻಕೆಡಿʼ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್‌ ಹಂಚಿಕೊಂಡಿದೆ.

ಸಂಜಯ್‌ ದತ್‌ ಅವರು ಜೋಗಿ ಪ್ರೇಮ್‌ ನಿರ್ದೇಶನದ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ʻಕೆಡಿʼ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ʻಕೆಡಿʼ ಚಿತ್ರದ ತಂಡದ ಜತೆ ಸಂಜಯ್‌ ದತ್‌ ಇದ್ದಾರೆ.ಸಂಜಯ್‌ ದತ್‌, ದರ್ಶನ್‌, ರಕ್ಷಿತಾ, ಪ್ರೇಮ್‌ ಎಲ್ಲರೂ ಜತೆಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಇದು ʻವಿಶೇಷ ಭೇಟಿ ಮತ್ತು ವಿಶೇಷ ಕ್ಷಣಗಳುʼ ಎಂದು ಕೆವಿಎನ್‌ ಪ್ರೊಡಕ್ಷನ್‌ ಸಂಸ್ಥೆ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದೆ.

ಸಂಜಯ್ ದತ್ ಅವರಿಗಾಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ಈ ಭೇಟಿ ನಡೆದಿದೆ ಎನ್ನಲಾಗುತ್ತಿದೆ.‘ಕೆಡಿ’ ಸಿನಿಮಾದ ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ ಪ್ರೇಮ್, ‘ಕೆಡಿ’ ನಿರ್ಮಾಪಕರು ಒಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.

ಇದನ್ನೂ ಓದಿ: Rakshit Shetty: ನಿನ್ನ ಹೆಸರು ಕೆಡಿಸಲು ಸಂಚು ಮಾಡ್ತಿದ್ದಾರೆ, ಬೆನ್ನೆಲುಬಾಗಿ ನಾನಿರುವೆ; ರಕ್ಷಿತ್‌ಗೆ ದೈವ ಅಭಯ!

ನಿರ್ದೇಶಕ ಪ್ರೇಮ್‌ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ‘ಕೆಡಿ’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಾಣವಾಗುತ್ತಿದೆ. ಪ್ರೇಮ್ ಅವರು ದರ್ಶನ್​ಗಾಗಿ ಸಿನಿಮಾ ಒಂದನ್ನು ನಿರ್ದೇಶನ ಮಾಡುವವರಿದ್ದಾರೆ ಎಂದು ವರದಿಯಾಗಿದೆ. ಸಂಜಯ್ ದತ್ ಕೆಲವು ದಿನಗಳ ಹಿಂದಷ್ಟೆ ನಡೆದ ಧ್ರುವ ಸರ್ಜಾರ ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದರು.

Exit mobile version