ಬೆಂಗಳೂರು: ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದ ಬೆನ್ನಲ್ಲೇ ಚಂದನ್ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹಾಗೇ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಚಂದನ್ ಸಂದರ್ಶನವೊಂದರಲ್ಲಿ ʻʻನಮ್ಮ ತಂದೆ-ತಾಯಿ ದಾಂಪತ್ಯ ನೋಡಿ ಅವರಂತೆ ನಾವು ಬದುಕಬೇಕು ಎನ್ನುವುದು ಈ ಜನರೇಷನ್‌ಗೆ ಸಾಧ್ಯವಿಲ್ಲ. ಎಲ್ಲವೂ ಬದಲಾಗಿದೆʼʼಎಂದು ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ ಚಂದನ್ ಶೆಟ್ಟಿ ಮತ್ತೆ ಮದುವೆ ಆಗ್ತಾರಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದು ಹೀಗೆ. ʻʻಸದ್ಯಕ್ಕೆ ಆ ಪ್ಲ್ಯಾನ್ ಇಲ್ಲ. ನನ್ನ ಸಾಧನೆ ಕಡೆ ಗಮನ ಕೊಡಬೇಕು. ಅಷ್ಟು ಫಾಸ್ಟ್ ಇಲ್ಲ ನಾನು. ಇದೇನು ಕಾರ್ ತೆಗೆದುಕೊಂಡಂತೆ ಅಲ್ಲ. ಸ್ವಲ್ಪ ಸಮಯ ಬೇಕುʼʼಎಂದಿದ್ದಾರೆ.
ಹಾಗೇ ಡಿವೋರ್ಸ್ ಕುರಿತಾಗಿ ಮಾತನಾಡಿ ʻʻನಿವೇದಿತಾ ನಾವು ನಮ್ಮ ಕೆಲಸಗಳಲ್ಲಿ ಬ್ಯುಸಿ ಆದ್ವಿ. ಒಂದು ವರ್ಷದ ಹಿಂದೆ ಭಿನ್ನಾಭಿಪ್ರಾಯ ಇತ್ತು. ನಮ್ಮ ತಂದೆ-ತಾಯಿ ದಾಂಪತ್ಯ ನೋಡಿ ಅವರಂತೆ ನಾವು ಬದುಕಬೇಕು ಎನ್ನುವುದು ಈ ಜನರೇಷನ್‌ಗೆ ಸಾಧ್ಯವಿಲ್ಲ. ಬಹಳ ಬದಲಾಗಿದೆ. ಆಗೆಲ್ಲ ನನ್ನ ತಾಯಿ ಹೌಸ್‌ವೈಫ್ ಆಗಿದ್ದರು. ಹಾಗೇ ಈಗ ಎಲ್ಲ ಹೆಣ್ಣು ಮಕ್ಕಳು ಇಂಡಿಪೆಂಡೆಂಟ್ ಆಗಿದ್ದಾರೆ. ನಿವೇದಿತಾ ಸಾಕಷ್ಟು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿ ದುಡಿಯುತ್ತಿದ್ದಾರೆ.ನಿಹೀಗಿರುವಾಗ ಆಕೆಗೆ ಮನೆ ಜವಾಬ್ದಾರಿ ತಗೋ ಎಂದು ಹೇಳೋಕ್ಕಾಗಲ್ಲ”ಎಂದರು.
ʻಹಾಗೇ ಈಗ ಪ್ರಪಂಚ ಚೇಂಜ್ ಆಗಿದೆ. ನಾವು ಹೆಣ್ಣು ಮಕ್ಕಳ ಮೇಲೆ ಕೈ ಮಾಡುವಂತಿಲ್ಲ. ಬೈಯ್ಯುವಂತಿಲ್ಲ. ದೌರ್ಜನ್ಯ, ದಬ್ಬಾಳಿಕೆ ಮಾಡೋಕ್ಕಾಗಲ್ಲ. ನಾನು ನಿವೇದಿತಾ ಬಳಿಕ ಇಬ್ಬರೂ ಒಪ್ಪಿ ಒಬ್ಬರೇ ವಕೀಲರ ಬಳಿ ಹೋದ್ವಿ. ಅವರು ಕೌನ್ಸಲಿಂಗ್ ಮಾಡಿದ್ರು. ಆದರೂ ಸಾಧ್ಯವಾಗಲಿಲ್ಲ. ಬಳಿಕ ಡಿವೋರ್ಸ್ ಅರ್ಜಿ ಹಾಕಿದ ಮರುದಿನವೇ ಡಿವೋರ್ಸ್ ಸಿಕ್ತುʼʼಎಂದರು.
ಇದನ್ನೂ ಓದಿ: Chandan Shetty: ಮುಂಚೆ ನಾನು ಗನ್ ತರ ಇದ್ದೆ, ಯಾವುದಕ್ಕೂ ಹೆದರ್ತಾ ಇರಲಿಲ್ಲ; ಹೀಗ್ಯಾಕೆ ಅಂದ್ರು ಚಂದನ್ ಶೆಟ್ಟಾ
ಡಿವೋರ್ಸ್ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ!
ಅರುಣ್ ಅಮುಕ್ತ ನಿರ್ದೇಶನದ ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಚಿತ್ರದ ಸ್ಟೂಡೆಂಟ್ ಪಾರ್ಟಿ ವೀಡಿಯೊ ಸಾಂಗ್ ಬಿಡುಗಡೆಗೊಂಡಿದೆ ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈಗ ಬಿಡುಗಡೆಗೊಂಡಿರೋ ಹಾಡು ರ್ಯಾಪ್ ಶೈಲಿಯಲ್ಲಿ ಮೂಡಿ ಬಂದಿದೆ. ಚೇತನ್ ಕುಮಾರ್ ಸಾಹಿತ್ಯಕ್ಕೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಇದು ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಅವರುಗಳ ಎರಡನೇ ಸಮಾಗಮ.