ಬೆಂಗಳೂರು: ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅವರಿಬ್ಬರೂ ಒಂದೇ ಕಾರಿನಲ್ಲಿ ಒಟ್ಟಿಗೆ ಬಂದು ಅರ್ಜಿ ಸಲ್ಲಿಸಿ ಕೈಕೈ ಹಿಡಿದುಕೊಂಡು ವಾಪಸ್ ಹೊರಟಿದ್ದರು. ಚಂದನ್ ಹಾಗೂ ನಿವೇದಿತಾ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ಧ್ರುವ ಸರ್ಜಾ ಹಾಗೂ ಚಂದನ್ ಮಧ್ಯೆ ಆಪ್ತತೆ ಇದೆ.ಹೀಗಾಗಿ ಧ್ರುವ ಅವರು ಇದಕ್ಕೆ ಮಧ್ಯಸ್ಥಿಕೆ ವಹಿಸಲೇಬೇಕು ಎಂದು ಪ್ರಥಮ್ ಹೇಳಿದರು.
ಈ ಬಗ್ಗೆ ಪ್ರಥಮ್ ಮಾಧ್ಯಮವೊಂದರ ಮುಂದೆ ಮಾತನಾಡಿ ʻʻನನ್ನ , ಚಂದನ್ ಹಾಗೂ ಧ್ರುವ ಅವರ ಸಂಬಂಧ ಬಿಡಿಸಲಾಗದೇ ಇರುವಂತದ್ದು. ಧ್ರುವ ಅವರು ಸ್ನೇಹಿತರ ಜತೆ ಸದಾ ನಿಲ್ಲುತ್ತಾರೆ. ಧ್ರುವ ಅವರ ಮಾತನ್ನು ಚಂದನ್ ತೆಗೆದುಹಾಕಲ್ಲ ಅಂದುಕೊಳ್ಳುತ್ತೇನೆ. ಇವತ್ತು ಧ್ರುವ ಹತ್ತಿರ ಮಾತನಾಡಿಸುತ್ತೇನೆ. ಚಂದನ್, ನಿವೇದಿತಾ ಬೇರೆ ಆದರೆ ಅಯ್ಯೋ ಎನ್ನುವರಿಗಿಂತ ಸಂಭ್ರಮಿಸುವವರು ತುಂಬ ಜನ ಇರುತ್ತಾರೆ. ಕೂತು ಮಾತನಾಡಿದರೆ ಎಲ್ಲವೂ ಪರಿಹಾರ ಆಗುತ್ತದೆ. ನಾನು ಚಂದನ್ ಬಳಿ ಮಾತನಾಡುತ್ತೇನೆ. ಧ್ರುವ ಹಾಗೂ ಚಂದನ್ ಮಧ್ಯೆ ಆಪ್ತತೆ ಇದೆ. ಪೊಗರು ಚಿತ್ರಕ್ಕೆ ಚಂದನ್ ಅವರೇ ಬೇಕು ಎಂದು ಹಠ ಹಿಡಿದಿದ್ದರು. ಹೀಗಾಗಿ ಧ್ರುವ ಅವರು ಇದಕ್ಕೆ ಮಧ್ಯಸ್ಥಿಕೆ ವಹಿಸಲೇಬೇಕುʼʼ ಎಂದರು.
ಇದನ್ನೂ ಓದಿ: Chandan Shetty: ತಂಗಿ ತಂಗಿ ಎಂದೇ ಮದುವೆಯಾಗಿದ್ದ ಚಂದನ್! ಇವರ ಬಾಳಲ್ಲಿ ವಿಲನ್ ಆಗಿದ್ದು ಯಾರು?
ಡಿವೋರ್ಸ್ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡ ನಿವೇದಿತಾ-ಚಂದನ್
ʻʻಈ ದಿನ., ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೂಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ನಿವೇದಿತಾ ಗೌಡ ಬರೆದುಕೊಂಡಿದ್ದಾರೆ.
ವಿದೇಶಕ್ಕೆ ಹೋಗುವ ಸಾಧ್ಯತೆ
ಫ್ಯಾಮಿಲಿ ಕೋರ್ಟ್‌ನಲ್ಲಿ ಜೂನ್ 6ರಂದು ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಮಿಡಿಯೆಟರ್ ಸಂಧಾನಕ್ಕೆ ಕೊನೆಗೂ ದಂಪತಿ ಒಪ್ಪಿಲ್ಲ. ಡಿವೋರ್ಸ್ ಪಡೆದುಕೊಂಡರೂ ಜೀವನಾಂಶ ಬೇಡ ಎಂದಿದ್ದಾರೆ ನಿವೇದಿತಾ. ಡಿವೋರ್ಸ್ ಸಿಕ್ಕ ನಂತರ ನಿವೇದಿತಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಪ್ರಪೋಸ್ ಮಾಡಿದ್ದೂ ವಿವಾದಕ್ಕೆ ಕಾರಣವಾಗಿತ್ತು. ಸಾಕಷ್ಟು ಮಂದಿ ಇದಕ್ಕೆ ಟೀಕೆ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಐದನೇ ಸೀಸನ್‌ನಲ್ಲಿ ಚಂದನ್ ಗೌಡ ಹಾಗೂ ನಿವೇದಿತಾ ಗೌಡ ಮೊದಲ ಬಾರಿಗೆ ಭೇಟಿಯಾಗಿದ್ದರು. ಮೊದಲಿಗೆ ಬಿಗ್‌ಬಾಸ್‌ನಲ್ಲಿ ನಿವೇದಿತಾಳನ್ನು ತನ್ನ ತಂಗಿ ಎಂದೇ ಹೇಳುತ್ತಿದ್ದ ಚಂದನ್ ಗೌಡ ಬಳಿಕ ಮದುವೆಯಾಗಿದ್ದರು.