Site icon Vistara News

Chandan Shetty: ಡಿವೋರ್ಸ್‌ ಬಳಿಕ ಚಂದನ್‌-ನಿವೇದಿತಾ ಒಟ್ಟಿಗೆ ಕೈ ಕೈ ಹಿಡಿದುಕೊಂಡು ಬಂದಿದ್ದೇಕೆ?

Chandan Shetty Nivedita come together holding hands after the divorce

ಬೆಂಗಳೂರು:  ಕನ್ನಡದ ರ್‍ಯಾಪರ್‌ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದ ಬೆನ್ನಲ್ಲೇ ಚಂದನ್‌ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹಾಗೇ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಚಂದನ್‌ ಸಂದರ್ಶನವೊಂದರಲ್ಲಿ ಈ ಮುಂಚೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದರು. ಇದೀಗ ವಿಸ್ತಾರ ನ್ಯೂಸ್‌ ಜತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಡಿವೋರ್ಸ್‌ ಆದ ದಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಒಬ್ಬರನ್ನೊಬ್ಬರು ಕೈ ಕೈ ಹಿಡಿದು ಹೋಗಿದ್ದೇಕೆ ಎಂಬುದನ್ನು ರಿವೀಲ್‌ ಮಾಡಿದ್ದಾರೆ.

ಚಂದನ್‌ ಶೆಟ್ಟಿ ಮಾತನಾಡಿ ʻʻ ಡಿವೋರ್ಸ್‌ ಎನ್ನುವ ವಿಚಾರ ಖುಷಿಯಿಂದ ಆಗುವಂತದಲ್ಲ. ತುಂಬ ಕಷ್ಟ. ಡಿವೋರ್ಸ್‌ ಅಂದಾಕ್ಷಣ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಎನ್ನುವುದು ಅಲ್ಲ. ಅವತ್ತು ಆಕೆ ಜತೆ ಯಾರೂ ಇರಲಿಲ್ಲ. ಒಬ್ಬಳೇ ಇದ್ದಳು. ಇಬ್ಬರೇ ಫ್ಯಾಮಿಲಿ ಕೋರ್ಟ್‌ಗೆ ಹೋಗಿದ್ದೇವು. ಅವಳನ್ನ ಮನೆಗೆ ಯಾರು ತಲುಪಿಸುತ್ತಿದ್ದರು. ಮಾನವೀಯತೆ ದೃಷ್ಟಿಯಿಂದ ಅಂದು ನಿವೇದಿತಾ ಅವರ ಕೈ ಹಿಡಿದು ನಾನು ಕರೆದುಕೊಂಡು ಹೋದೆ. ಅಂದು ಮಾಧ್ಯಮಗಳು ಇದ್ದವು. ಅಂತಹ ಸಂದರ್ಭದಲ್ಲಿ ಒಬ್ಬರೇ ಬಿಟ್ಟು ಬರುವುದು ಸರಿಯಲ್ಲ ಅನ್ನಿಸಿತು. ಇಷ್ಟು ವರ್ಷ ಜತೆಗೆ ಇದ್ದಿದ್ದಕ್ಕೆ ಅವರನ್ನ ಸೇಫ್‌ ಮಾಡುವುದು ನನ್ನ ಕರ್ತವ್ಯ. ಇನ್ನು ಇಬ್ಬರ ಇದ್ದಾಗ ಸಾಕಷ್ಟು ನಿರೀಕ್ಷೆ ಕೂಡ ಇತ್ತು. ಆದರೆ ಅದರ ಬಗ್ಗೆ ಹೇಳಲು ನಾನು ಇಷ್ಟ ಪಡುವುದಿಲ್ಲ ಎಂದರು.

ʻʻಇನ್ನು ಡಿವೋರ್ಸ್‌ ಮುಂಚೆ ಇದ್ದ ಬದುಕಿನಿಂದ ಹೊರಗೆ ಬಂದಿದ್ದೇನೆ. ಸದ್ಯಕ್ಕೆ ನಾನು ಯಾರನ್ನ ನಂಬಬೇಕು? ಯಾರನ್ನ ನಂಬಬಾರದು ಎಂಬ ಗೊಂದಲದಲ್ಲಿದ್ದೇನೆ. ಸಿನಿಮಾ ಮಾಡಿದ್ದೇನೆ. ಭವಿಷ್ಯ ಏನು ಎಂದು 19ಕ್ಕೆ ಗೊತ್ತಾಗತ್ತೆ. ಮುಂದೆ ಸಿನಿಮಾ ಮಾಡಲಾ? ಹಾಡು ಮಾಡಲಾ? ಎಂಬ ಯೋಚನೆ ಇದೆ.

ಹಾಗೇ ನಿವೇದಿತಾ ಬೇರೆ ಯಾರನ್ನಾದರೂ ಮದುವೆಯಾದರೆ ನಿಮ್ಮ ಅಭಿಪ್ರಾಯ ಏನು? ಎಂಬ ಪ್ರಶ್ನೆಗೆ ಚಂದನ್‌ ಮಾತನಾಡಿ ʻʻಅದು ಅವರ ವೈಯಕ್ತಿಕ ನಿರ್ಧಾರ. ನನಗೆ ಅದಕ್ಕೂ ಸಂಬಂಧ ಇಲ್ಲʼʼಎಂದು ನೇರವಾಗಿಯೇ ಹೇಳಿದರು.

ಇದನ್ನೂ ಓದಿ: Chandan Shetty: ಚಂದನ್‌ ಶೆಟ್ಟಿಗೆ ಒಳ್ಳೆ ಹುಡುಗಿ ಜತೆ ಮದುವೆಯಾಗುವ ಕನಸು ಏನೋ ಇತ್ತಂತೆ ಆದರೆ….

ಡಿವೋರ್ಸ್‌ ಬೆನ್ನಲ್ಲೇ ಗುಡ್‌ ನ್ಯೂಸ್‌ ಕೊಟ್ಟ ಚಂದನ್‌ ಶೆಟ್ಟಿ!

ಅರುಣ್ ಅಮುಕ್ತ ನಿರ್ದೇಶನದ ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಚಿತ್ರದ ಸ್ಟೂಡೆಂಟ್ ಪಾರ್ಟಿ ವೀಡಿಯೊ ಸಾಂಗ್ ಬಿಡುಗಡೆಗೊಂಡಿದೆ ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈಗ ಬಿಡುಗಡೆಗೊಂಡಿರೋ ಹಾಡು ರ್ಯಾಪ್ ಶೈಲಿಯಲ್ಲಿ ಮೂಡಿ ಬಂದಿದೆ. ಚೇತನ್ ಕುಮಾರ್ ಸಾಹಿತ್ಯಕ್ಕೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಇದು ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಅವರುಗಳ ಎರಡನೇ ಸಮಾಗಮ.

Exit mobile version