Site icon Vistara News

Chandan Shetty: 3ನೇ ವ್ಯಕ್ತಿ ಜತೆ ನಿವೇದಿತಾ ಸಂಬಂಧದ ಕುರಿತು ಚಂದನ್‌ ಹೇಳಿದ್ದೇನು?

Chandan Shetty Niveditha gowda roumers on srujan lokesh

ಬೆಂಗಳೂರು: ಕನ್ನಡದ ರ್‍ಯಾಪರ್‌ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದ ಬೆನ್ನಲ್ಲೇ ಕೆಲವರು ನಟ ಸೃಜನ್ ಲೋಕೇಶ್ ಹೆಸರು ಎಳೆದುತಂದು ಟ್ರೋಲ್ ಮಾಡಿದ್ದರು. ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಒಂದು ವಿಡಿಯೊ ಶೇರ್ ಮಾಡಿ ಶುಭ ಕೋರಿದ್ದರು. ಅದರಲ್ಲಿ ನಿವೇದಿತಾ ಜತೆಗಿನ ಒಂದಷ್ಟು ಫೋಟೊಗಳನ್ನು ಹಾಕಿದ್ದರು. ಇದಕ್ಕೆ ಮನಬಂದಂತೆ ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು. ಆ ಬಗ್ಗೆ ಮಾಜಿ ದಂಪತಿ ಸ್ಪಷ್ಟನೆ ನೀಡಿದ್ದಾರೆ.ಒಬ್ಬ ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿಗೆ ಸೇರಿಸಿ ಸಂಬಂಧ ಕಲ್ಪಿಸಿದ್ದು ನನ್ನ ಮನಸ್ಸಿಗೆ ತುಂಬ ಬೇಸರ ಆಗಿದೆ ಎಂದಿದ್ದಾರೆ ಚಂದನ್‌.

ಮೂರನೇ ವ್ಯಕ್ತಿಯನ್ನು ಸಂಬಂಧಿಸಿ ಸಂಬಂಧ ಕೂಡ ಕಲ್ಪಿಸುತ್ತಿದ್ದಾರೆ. ಆದರೆ ಅವರು ನಮಗೆ ಫ್ಯಾಮಿಲಿ ತರ. ಆ ವ್ಯಕ್ತಿ ಜತೆ ಹೆಸರು ಸೇರಿಸಿದ್ದು ಸರಿಯಲ್ಲ. ಇದು ಕನ್ನಡಿಗರಾಗಿ ನಮಗೆ ಶೋಭೆ ಅಲ್ಲ. ಯಾಕೆಂದರೆ ಆ ವ್ಯಕ್ತಿಯ ಮನೆಗೆ ನಾನು ಕೂಡ ಅನೇಕ ಬಾರಿ ಹೋಗಿದ್ದೇನೆ. ತುಂಬ ಒಳ್ಳೆಯ ಕುಟುಂಬ ಅವರದ್ದುʼʼಎಂದರು ಚಂದನ್‌.

ಇನ್ನು ನಿವೇದಿತಾ ಕೂಡ ʻʻಆ ರೀತಿಯ ಪೋಸ್ಟ್​ಗಳನ್ನು ನೋಡಿದಾಗ ನನಗೆ ನೋವಾಯಿತು. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್​. ಪ್ರತಿ ವರ್ಷ ಅವರು ನನ್ನ ಜನ್ಮದಿನಕ್ಕೆ ವಿಶ್​ ಮಾಡುತ್ತಾರೆ. ನಾನು ಕೂಡ ಅವರಿಗೆ ವಿಶ್​ ಮಾಡುತ್ತೇನೆ. ಈ ವರ್ಷವೇ ಈ ರೀತಿ ವದಂತಿ ಹಬ್ಬಿದ್ದು ಯಾಕೆ ಅಂತ ಗೊತ್ತಿಲ್ಲ. ಇದರಿಂದ ಅವರ ಫ್ಯಾಮಿಲಿಯವರಿಗೆ ತುಂಬ ನೋವಾಗುತ್ತದೆ. ಫ್ಯಾಮಿಲಿ ಎಲ್ಲರಿಗೂ ಇರತ್ತೆ, ಬೇರೆಯವರ ಇಮೋಷನ್‌ ಹರ್ಟ್‌ ಮಾಡಬೇಡಿ. ಬೇಸ್‌ಲೆಸ್‌ ಆಗಿ ಏನೇನೊ ಹೇಳಬಾರದು. ನಾವಿಬ್ಬರೂ ಒಮ್ಮತದಿಂದ ನಿರ್ಧಾರ ಮಾಡಿಯೇ ಡಿವೋರ್ಸ್‌ ಪಡೆದುಕೊಂಡಿದ್ದೇವೆ. ನಾವು ಸೆಲೆಬ್ರಿಟಿಯಾಗಿ ನಮ್ಮ ಫಾಲ್ಲೋವರ್ಸ್ ಯಾರಿಗೂ ಡಿವೋರ್ಸ್ ಕೊಡಿ ಎಂದು ಪ್ರಚೋದನೆ ಕೊಡುತ್ತಿಲ್ಲ ʼʼಎಂದರು.

ಇದನ್ನೂ ಓದಿ: Richa Chadha: ಖ್ಯಾತ ನಿರ್ದೇಶಕ ಸೆಟ್‌ನಲ್ಲಿ ಮದ್ಯ ಸೇವಿಸಿ ಫಜೀತಿಗೆ ಒಳಗಾದ ರಿಚಾ ಚಡ್ಡಾ!

ಕೊನೆಯದಾಗಿ ಚಂದನ್‌ ಮಾತನಾಡಿ ʻʻನಾನು ಮಾರ್ನಿಂಗ್ ಪರ್ಸನ್, ನಿವೇದಿತಾ ನೈಟ್ ಪರ್ಸನ್ ಇಲ್ಲಿಂದಲೇ ಸಮಸ್ಯೆ ಶುರುವಾಗಿತ್ತು. ನಾನು ಬೆಳಗ್ಗೆ ಬೇಗ ಎದ್ದೇಳ್ತಿನಿ, ನಿವೇದಿತಾ ಲೇಟ್ ಆಗಿ ಎದೆಳ್ತಾಳೆ. ಇಬ್ರಿಗೂ ಟೈಮ್ ಕೊಡೋಕೆ ಆಗುತ್ತಿರಲಿಲ್ಲ. 1 ವರ್ಷದಿಂದ ದೂರ ಆಗುವ ಬಗ್ಗೆ ಮಾತುಕಥೆ ಇತ್ತು. ಕ್ಯಾಂಡಿ ಕ್ರಶ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಒಂದು ದಿನದ ಶೂಟಿಂಗ್‌ ಬಾಕಿ ಇದೆ. ಇಬ್ಬರೂ ಭಾಗಿ ಆಗ್ತೇವೆ. ವೈಯಕ್ತಿಯ ಸಮಸ್ಯೆಯನ್ನು ಪ್ರೊಫೆಷನಲ್‌ಗೆ ತರೋದಿಲ್ಲʼʼಎಂದರು ಚಂದನ್‌.

Exit mobile version