Site icon Vistara News

Chandan Shetty: ಮುಂಚೆ ನಾನು ಗನ್‌ ತರ ಇದ್ದೆ, ಯಾವುದಕ್ಕೂ ಹೆದರ್ತಾ ಇರಲಿಲ್ಲ; ಹೀಗ್ಯಾಕೆ ಅಂದ್ರು ಚಂದನ್‌ ಶೆಟ್ಟಿ?

Chandan Shetty shares before fame life in interview

ಬೆಂಗಳೂರು:  ಕನ್ನಡದ ರ್‍ಯಾಪರ್‌ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದ ಬೆನ್ನಲ್ಲೇ ಚಂದನ್‌ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹಾಗೇ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಚಂದನ್‌ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ ಬಗ್ಗೆ, ಹಾಗೇ ಕರಿಯರ್‌ ಕುರಿತಾಗಿ ಹಲವಾರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ʻಫೇಮ್‌ ಬರುವ ಮುಂಚೆ ನಾನು ಗನ್‌ ತರ ಇದ್ದೆ. ಯಾವುದಕ್ಕೂ ನಾನು ಹೆದರುತ್ತ ಇರಲಿಲ್ಲ. ಫ್ರೀ ಬರ್ಡ್‌ ಆಗಿದ್ದೆʼʼಎಂದು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಆಗಿನ ಚಂದನ್‌ ಜೀವನ ಹೇಗಿತ್ತು ಎಂಬ ಪ್ರಶ್ನೆಗೆ ಚಂದನ್‌ ಶೆಟ್ಟಿ ಮಾತನಾಡಿದ್ದು ಹೀಗೆ. ʻʻಹಿಂದೆ ಏನು ಮಾಡಿದ್ದೆ ಎನ್ನುವ ಅಹಂಕಾರಕ್ಕಿಂತ ಮುಂದೆ ಏನು ಮಾಡಬೇಕು ಎನ್ನುವ ಭಯ ತುಂಬ ಇದೆ. ಅವತ್ತು ನಾನು ಗನ್‌ ತರ ಇದ್ದೆ. ಯಾವುದಕ್ಕೂ ನಾನು ಹೆದರುತ್ತ ಇರಲಿಲ್ಲ. ಲಿರಿಕ್ಸ್‌ ಬರೆಯುವಾಗ ಫ್ರೀ ಆಗಿ ಬರೆಯುತ್ತಿದ್ದೆ. ಒಟ್ಟಿನಲ್ಲಿ ಫ್ರೀ ಬರ್ಡ್‌ ಆಗಿದ್ದೆ. ಆಗ ನಾನು ಯಾರು ಅಂತ ಎಷ್ಟೋ ಜನರಿಗೆ ಗೊತ್ತಿರ್ಲಿಲ್ಲ. ನಾವು ಯಾರು ಅಂತ ಗೊತ್ತಾದ ಮೇಲೆ ಕಷ್ಟ ಬರೋದು ಜಾಸ್ತಿ. ನಾನು ಫೇಮ್‌ ಬರುವ ಮುಂಚಿನ ದಿನಗಳಲ್ಲಿ ಏನೇ ಅಂದುಕೊಂಡಿದ್ದರೂ ಲಿರಿಕ್ಸ್‌ ಬರೆಯುತ್ತಿದ್ದೆ. ʻಹಾಳಾಗ್‌ ಹೋದೆʼ ಅಂತ ಒಂದು ಹಾಡು ಬರೆದಿದ್ದೆ. ನಾನು ಯಾಕೆ ಆ ತರ ಹಾಡು ಬರೆದೆ ಅಂತ ಇದುವೆರೆಗೆ ಗೊತ್ತಿಲ್ಲ. ಯಾವ ಹಾಡು ಹಿಟ್‌ ಆಗತ್ತೆ, ಆಗಲ್ಲ ಅನ್ನೋದು ಗೊತ್ತಾಗಲ್ಲ. ಅವರೇಜ್‌ ಅಂತ ಅಂದುಕೊಂಡಿದ್ದ ಹಾಡುಗಳು ಕೆಲವೊಮ್ಮೆ ಸೂಪರ್‌ ಡೂಪರ್‌ ಹಿಟ್‌ ಆಗತ್ತೆ. ʻಖರಾಬುʼ ಸಾಂಗ್‌ ಮಾಡ್ದಾಗ ರೆಜೆಕ್ಟ್‌ ಆಗುತ್ತೆ ಎಂದೇ ಭಾವಿಸಿದ್ದೆ. ಆದರೆ ಆಮೇಲೆ ಧ್ರುವ ಸರ್ಜಾ ಅವರು ಇಷ್ಟ ಪಟ್ಟರುʼʼಎಂದರು.

ಇದನ್ನೂ ಓದಿ: Chandan Shetty: ಡಿವೋರ್ಸ್‌ ಬೆನ್ನಲ್ಲೇ ಗುಡ್‌ ನ್ಯೂಸ್‌ ಕೊಟ್ಟ ಚಂದನ್‌ ಶೆಟ್ಟಿ!

ಮಾತು ಮುಂದುವರಿಸಿ ʻʻ ಮ್ಯೂಸಿಕ್‌ನಲ್ಲಿ ನಾನು ಮುಂದೆ ಬರಬೇಕು ಅಂದರೆ ತುಂಬ ಕಷ್ಟ. ಕಾಂಪಿಟೇಶನ್‌ ಜಾಸ್ತಿ ಆಗುತ್ತಿದೆ. ಹಾಗೇ ಜೀವನದಲ್ಲಿಯೂ ಹಾಗೇ ಇವತ್ತು ಬದುಕ್ಕಿದ್ದೀಯಾ, ಅಷ್ಟೇ ನಾಳೆ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ. ಇರುವಷ್ಟು ದಿನ ನಾಲ್ಕು ಜನ ಮುಂದೆ ಚೆನ್ನಾಗಿ ಇರಬೇಕು. ನೀವು ಜೀವನದಲ್ಲಿ ಮುಂದೆ ಬರುತ್ತಿದ್ದಂತೆ ಹಿಂದೆ ಬೈಕೊಂಡು ಬರೋರು ಬರ್ತಾನೆ ಇರ್ತಾರೆ. ಮನುಷ್ಯರ ಜೀವನ ಕೂಡ ಪ್ರಕೃತಿ ತರ. ಒಂದೊಂದು ಸಲ ಖುಷಿ, ಒಂದೊಂದು ಸಲ ಬೇಜಾರು ಎಲ್ಲ ಇರುತ್ತದೆʼʼಎಂದು ಹೇಳಿದರು.

ಡಿವೋರ್ಸ್‌ ಬೆನ್ನಲ್ಲೇ ಗುಡ್‌ ನ್ಯೂಸ್‌ ಕೊಟ್ಟ ಚಂದನ್‌ ಶೆಟ್ಟಿ!

ಅರುಣ್ ಅಮುಕ್ತ ನಿರ್ದೇಶನದ ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಚಿತ್ರದ ಸ್ಟೂಡೆಂಟ್ ಪಾರ್ಟಿ ವೀಡಿಯೊ ಸಾಂಗ್ ಬಿಡುಗಡೆಗೊಂಡಿದೆ ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈಗ ಬಿಡುಗಡೆಗೊಂಡಿರೋ ಹಾಡು ರ್ಯಾಪ್ ಶೈಲಿಯಲ್ಲಿ ಮೂಡಿ ಬಂದಿದೆ. ಚೇತನ್ ಕುಮಾರ್ ಸಾಹಿತ್ಯಕ್ಕೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಇದು ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಅವರುಗಳ ಎರಡನೇ ಸಮಾಗಮ.

Exit mobile version