Site icon Vistara News

Ashok Kashyap | ಛಾಯಾಗ್ರಾಹಕ ಅಶೋಕ್‌ ಕಶ್ಯಪ್‌ ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷ

Ashok Kashyap

ಬೆಂಗಳೂರು: ಕನ್ನಡದ ಖ್ಯಾತ ಸಿನಿಮಾಟೋಗ್ರಾಫರ್‌ ಅಶೋಕ್‌ ಕಶ್ಯಪ್‌ (Ashok Kashyap) ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಅವರನ್ನು ನೇಮಿಸಿದೆ. ಇವರು ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸುನೀಲ್ ಪುರಾಣಿಕ್ ಅವರಿಂದ ತೆರವಾಗಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹುದ್ದೆಯನ್ನು ಅಶೋಕ್‌ ಕಶ್ಯಪ್‌ ವಹಿಸಿಕೊಂಡಿದ್ದಾರೆ.

ಅಶೋಕ್‌ ಕಶ್ಯಪ್‌ ಅವರು ಹಲವು ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಅಶೋಕ್‌ ಅವರು ಕರ್ನಾಟಕ ಚಲನಚಿತ್ರ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ʻತಲೆದಂಡʼ ಸಿನಿಮಾಗೆ ಅಶೋಕ್‌ ಕಶ್ಯಪ್‌ ಅವರು ಛಾಯಾಗ್ರಹಣ ಮಾಡಿದ್ದರು. ಜಗ್ಗೇಶ್‌, ಉಪೇಂದ್ರ ಸೇರಿ ಹಲವು ಸ್ಟಾರ್‌ ನಟರ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಅನೇಕ ಧಾರಾವಾಹಿಗಳಿಗೆ ಕೆಲಸ ಕೂಡ ಮಾಡಿದ್ದಾರೆ. ಇವರದ್ದೇ ನಿರ್ಮಾಣ ಸಂಸ್ಥೆಯಿಂದ ಧಾರಾವಾಹಿಗಳು ಕೂಡ ನಿರ್ಮಾಣವಾಗಿವೆ.

ಇದನ್ನೂ ಓದಿ | Award | ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ; ಗಣೇಶ ಕೊಲೆಕಾಡಿ ಸೇರಿ ಸಾಧಕರಿಗೆ ಗೌರವ

Exit mobile version