ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್ (Darshan Arrested) ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ಎರಡು ದಿನ ಪೊಲೀಸ್ ಕಸ್ಟಡಿಗೆ ವಹಿಸಿದೆ. ನಟ ದರ್ಶನ್ (Actor Darshan) ಮನೆಯಲ್ಲಿ ಬುಧವಾರ (ಜೂನ್ 19) ಪೊಲೀಸರು 37.40 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಇದೀಗ ಕೊಲೆ ಆರೋಪದ ಜತೆಗೆ ದರ್ಶನ್‌ಗೆ ಐಟಿ ಸಂಕಷ್ಟ ಎದುರಾಗಿದೆ.
ಮೂಲಗಳ ಪ್ರಕಾರ ದರ್ಶನ್ ನಿವಾಸದ ಬೆಡ್‌ರೂಮ್‌ನ ಕಬೋಡ್‌ನಲ್ಲಿ ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬ್ಯಾಗ್‌ನಲ್ಲಿ ಇಟ್ಟಿದ್ದ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿಜಯಲಕ್ಷ್ಮೀ ಮನೆಯಲ್ಲಿ 3 ಲಕ್ಷ ರೂಪಾಯಿಯನ್ನೂ ವಶಪಡಿಸಿಕೊಂಡಿದ್ದಾರೆ. ಅಲ್ಲಿಗೆ, ಪ್ರಕರಣದಲ್ಲಿ ಪೊಲೀಸರು ಇದುವರೆಗೆ 70.40 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದಂತಾಗಿದೆ. ಜಪ್ತಿಯಾದ ಹಣದ ಕುರಿತು ಕೂಡ ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿ, ದರ್ಶನ್ ಅವರನ್ನು ಕಸ್ಟಡಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯಲ್ಲಿ 37ಲಕ್ಷ ರೂ, ಆರೋಪಿಗಳಿಗೆ 30ಲಕ್ಷ ರೂ. ಹಣ ಮೂಲ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಕೊಲೆ ಆರೋಪ ಬೆನ್ನಲ್ಲೆ ಆದಾಯ ತೆರೆಗಿ(ಐಟಿ) ಇಲಾಖೆ ದರ್ಶನ್ ಬೆನ್ನು ಹತ್ತುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್ ಮನೆಯಲ್ಲಿ 37ಲಕ್ಷ ನಗದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಕೊಲೆ ನಂತರ ಸರಂಡರ್ ಆಗಲು 30ಲಕ್ಷ ನಗದು ನೀಡಿದ್ದಾರೆ. ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಎರಡು ಲಕ್ಷದವರೆಗೂ ನಗದನ್ನ ಇಟ್ಟು ಕೊಳ್ಳಬಹುದು. ಆದರೆ ದರ್ಶನ್ ಸುಮಾರು 70ಲಕ್ಷ ರೂ. ಹಣ ಇಟ್ಟುಕೊಂಡಿರುವುದರಿಂದ ತನಿಖೆ ಆಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: Darshan Arrested: ಇದು ʻಸಪ್ತ ಶೆಡ್ಡಿನಾಚೆ SSE side ‘D’! ಟ್ರೋಲ್ ಆದ್ರು ದರ್ಶನ್-ಪವಿತ್ರಾ!
ಈ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಆದಾಯ ತೆರಿಗೆ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಿದ್ದಾರೆ. ದರ್ಶನ್ ಸಿನಿಮಾ ಅಡ್ವಾನ್ಸ್ , ಅಥವಾ ಸಿನಿಮಾ ಹಣ ಅಂತ ಹೇಳಿದ್ದರೂ ಇಷ್ಟು ಕ್ಯಾಶ್ ಯಾಕೆ ಇಟ್ಟುಕೊಂಡಿದ್ರು, ಆ ಹಣಕ್ಕೆ ಟ್ಯಾಕ್ಸ್ ಕಟ್ಟಿದ್ದಾರಾ? ಎಂದು ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ಟ್ಯಾಕ್ಸ್ ಕಟ್ಟಿಲ್ಲ ಅಂದರೆ ದರ್ಶನ್ ಜತೆಗೆ ದರ್ಶನ್ ಹಣ ನೀಡಿದವರಿಗೂ ಸಂಕಷ್ಟ ಎದುರಾಗಲಿದೆ. ಮೋಹನ್ ರಾಜ್ ಎಂಬ ವ್ಯಕ್ತಿ ದರ್ಶನ್‌ಗೆ ಹಣ ನೀಡಿರುವ ಬಗ್ಗೆ ಪೊಲೀಸಿರಿಗೆ ಮಾಹಿತಿಯೂ ಸಿಕ್ಕಿದೆ. ದರ್ಶನ್‌ಗೆ ಸ್ನೇಹಿತ ಆಗಿರುವ ರಾಮ್ ಮೋಹನ್ ರಾಜು ಅವರಿಂದ ದರ್ಶನ್ 40ಲಕ್ಷ ರೂ ಹಣ ಪಡೆದಿದ್ದಾರಂತೆ. ಸದ್ಯ ಈ ಮೋಹನ್ ರಾಜ್‌ಗೂ ನೋಟೀಸ್ ನೀಡಿ ವಿಚಾರಣೆ ನಡೆಸಲು ಪೊಲೀಸರ ಸಿದ್ಧತೆ ನಡೆಸುತ್ತಿದ್ದಾರೆ.
ಯಾರು ಈ ರಾಮ್ ಮೋಹನ್ ರಾಜು?
ಹಣ ಕೊಟ್ಟಿರುವ ಮೋಹನ್ ರಾಜ್ ಶಾಸಕರೊಬ್ಬರ ಆಪ್ತ. ಹೆಸರು ಹೊರಗಡೆ ಬರುತ್ತಿದ್ದಂತೆ ಪೋನ್ ಸ್ವೀಚ್ ಆಫ್ ಮಾಡಿಕೊಂಡಿದ್ದಾರೆ. ಮೋಹನ್ ರಾಜ್ ಪೋನ್ ಸ್ವೀಚ್ ಆಪ್ ಆಗಿರುವುದರಿಂದ ಕಾಮಾಕ್ಷಿ ಪಾಳ್ಯ ಪೊಲೀಸರು ಅವರ ಮನೆಗೆ ಹೋಗಿ ನೋಟಿಸ್ ನೀಡಲು ಮುಂದಾಗಿದ್ದಾರೆ. 2018ರರಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಮೋಹನ್ ರಾಜ್ಆ ತ್ಮಹತ್ಯೆಗೆ ಯತ್ನಿಸಿದ್ದರು. ಜಮೀನು ವಿಚಾರವಾಗಿ ಕಿರುಕುಳ ಕೊಡ್ತಿದ್ದಾರೆಂದು ಆರೋಪಿಸಿ ಬೊಮ್ಮನಹಳ್ಳಿ ಸಮೀಪದ ಫಾರ್ಮ್ ಹೌಸ್‌ನಲ್ಲಿ ಪೊಲೀಸ್ ಸಿಬ್ಬಂದಿ ಎದುರೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಮೋಹನ್ ರಾಜ್ ಬೊಮ್ಮನಹಳ್ಳಿ ವಾರ್ಡ್ ಕಾರ್ಪೋರೇಟರ್ ಆಗಿದ್ದರು .