ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ, ವಿನಯ್, ಪವನ್ ಸೇರಿ ಹಲವರು ಅರೆಸ್ಟ್ (Darshan Arrested) ಆಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್ ಕಳುಹಿಸಿದ ಎನ್ನುವ ಕಾರಣಕ್ಕೆ ದರ್ಶನ್ ಹಾಗೂ ಗ್ಯಾಂಗ್ ಇದೀಗ ಅರೆಸ್ಟ್ ಆಗಿದೆ. ಕಾಲೇಜು ದಿನಗಳಲ್ಲೇ ಬಣ್ಣದ ಜಗತ್ತಿನ ಕ್ರೇಜ್ ಹತ್ತಿಸಿಕೊಂಡು ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು ಪವಿತ್ರಾ. ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿ ಮಾಡ್‌ಲಿಂಗ್ ಕ್ಷೇತ್ರಕ್ಕೆ ಬಂದರು. ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡವರು ಪವಿತ್ರಾ. ಪವಿತ್ರಾ ಗೌಡ ಅಭಿನಯಿಸಿದ್ದ ʻಅಗಮ್ಯʼ ಚಿತ್ರದ ನಿರ್ದೇಶಕ ಉಮೇಶ್ ಎಂ ಗೌಡ ಇದೀಗ ಪವಿತ್ರಾ ಗೌಡ ಬಗ್ಗೆ ವಿಸ್ತಾರ ಜತೆ ಮಾತನಾಡಿದ್ದಾರೆ. ಅಸಲಿಗೆ ಕನ್ನಡ ಸಿನಿಮಾದಲ್ಲಿ ನಟಿಸೋಕೆ ಪವಿತ್ರಾಗೆ ಮೊದಲು ಆಫರ್ ಕೊಟ್ಟಿದ್ದೇ ನಿರ್ದೇಶಕ ಉಮೇಶ್.
2011ರಲ್ಲಿ ʻಅಗಮ್ಯʼ ಚಿತ್ರ ಶುರುವಾಗಿ 2013ರಲ್ಲಿ ತೆರೆ ಕಂಡಿತ್ತು. ಒಂದೇ ಸಿನಿಮಾದಲ್ಲಿ ಪವಿತ್ರಾ ಲೆವೆಲ್ ಚೇಂಜ್ ಆಗಿತ್ತು. ಮಿನಿ ಕೂಪರ್ ಕಾರ್‌ನಲ್ಲಿ ಶೂಟಿಂಗ್ ಪವಿತ್ರಾ ಬರುತ್ತಿದ್ದರಂತೆ. ಕೋಣನಕುಂಟೆ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದರು ಪವಿತ್ರಾ. ಸಿನಿಮಾ ರಂಗಕ್ಕೆ ಬರುವ ಮೊದಲೇ ಮದುವೆ ಆಗಿ ಮಗುವಿನ ತಾಯಿಯಾಗಿದ್ದರು ಕೂಡ.
ಈ ಬಗ್ಗೆ ನಿರ್ದೇಶಕ ಉಮೇಶ್ ಮಾತನಾಡಿ ʻಪವಿತ್ರಾ ಗೌಡಗೆ ನಟನೆಯಲ್ಲಿ ಆಸಕ್ತಿ ಇರ್ಲಿಲ್ಲ. ನಟಿಯಾಗುವ ಲಕ್ಷಣಗಳು ಇರ್ಲಿಲ್ಲ. ಎಷ್ಟೋ ಸಲ ಆ್ಯಕ್ಟಿಂಗ್ ಚೆನ್ನಾಗಿ ಮಾಡ್ತಿಲ್ಲ ಅಂತ ಗದರಿದ್ದೆ, ಹೊಡಿಯೋಕೂ ಹೋಗಿದ್ದೆ. ಸೆಟ್ ನಲ್ಲಿ ತರ್ಲೆ ಮಾಡ್ಕೊಂಡು ಖುಷಿಯಾಗಿ ಇರ್ತಿದ್ರು. ಪವಿತ್ರಾ ಗೌಡಗೆ ಮೊದಲು ಸಿಕ್ಕ ಸಂಭಾವನೆ 20 ಸಾವಿರ ರೂ. ಅಗಮ್ಯ ಸಿನಿಮಾಗೆ ನಟಿಯಾಗಿ ಪವಿತ್ರಾ ಅವರನ್ನು ಆಯ್ಕೆ ಮಾಡೋ ಉದ್ದೇಶ ಇರ್ಲಿಲ್ಲ. ಆಕೆಗೆ ನಟನೆಯ ಗಂಧ ಗಾಳಿ ಗೊತ್ತಿರ್ಲಿಲ್ಲ. ನಮ್ಮದು ಚಿಕ್ಕ ಬಜೆಟ್ ಸಿನಿಮಾ, ಬೇರೆ ಯಾವ ನಟಿಯರ ಡೇಟ್ಸ್, ಸಂಭಾವನೆ ಮ್ಯಾಚ್ ಆಗಿಲ್ಲ ಅಂತ ಪವಿತ್ರಾನ ಓಕೆ ಮಾಡಿದ್ವಿʼʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Smriti Mandhana: ಕೊಹ್ಲಿಯ ಶೈಲಿಯಲ್ಲಿ ಬೌಲಿಂಗ್ ನಡೆಸಿ ವಿಕೆಟ್ ಕಿತ್ತ ಸ್ಮೃತಿ ಮಂಧಾನ
ʻಜಗ್ಗು ದಾದಾʼಗೆ ಲಿಂಕ್ ಆದ ಬೆಡಗಿ!
ʼಜಗ್ಗುದಾದಾʼ ಸಿನಿಮಾ ಮೂಲಕ ದರ್ಶನ್‌ಗೆ ಪರಿಚಯವಾದವರು ಈ ಪವಿತ್ರಾ. ಹೀಗೆ ಶುರುವಾದ ಸ್ನೇಹ ಆ ನಂತರ ಪ್ರೇಮಕ್ಕೆ ತಿರುಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ 2016ರಲ್ಲಿ ʼಜಗ್ಗುದಾದಾʼ ತೆರೆಗೆ ಬಂದ ಬೆನ್ನಲ್ಲಿಯೇ, 2017ರಲ್ಲಿ ʻತಾರಕ್ʼ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ ಗೌಡ ತನ್ನ ಪ್ರಿಯಕರ ದರ್ಶನ್ ಜೊತೆ ಅತ್ಯಾಪ್ತವಾದ ಫೋಟೊವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸಂಜಯ್ ಸಿಂಗ್‌ಗೆ ಡಿವೋರ್ಸ್ ಕೊಟ್ಟ ಪವಿತ್ರಾ
ದರ್ಶನ್ ಬಲೆಗೆ ಬೀಳುವ ಮುಂಚೆ ಪವಿತ್ರಾ ಅವರು ಸಂಜಯ್ ಸಿಂಗ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಈಗ ಸಂಜಯ್ ಜತೆ ಪವಿತ್ರಾ ಜತೆಗಿಲ್ಲ. ಡಿವೋರ್ಸ್ ಆಗಿದೆ. 12 ವರ್ಷಗಳ ಹಿಂದೆ ಬೆಂಗಳೂರು ತೊರೆದು ಹುಟ್ಟೂರು ಉತ್ತರ ಪ್ರದೇಶದಲ್ಲಿ ಸ್ವಂತ ಶಾಲೆ ನಡೆಸುತ್ತಿದ್ದಾರೆ ಸಂಜಯ್ ಸಿಂಗ್.