ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಕನ್ನಡ ಚಿತ್ರರಂಗಕ್ಕೆ (Actor Darshan) ಪದಾರ್ಪಣೆ ಮಾಡಿ 25 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಸ್ಮರಿಸಲು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು.
25 ವರ್ಷದ ಸುದೀರ್ಘ ಪ್ರಯಾಣವನ್ನೊಮ್ಮೆ ಹಿಂದೆ ತಿರುಗಿ ನೋಡಿದ ದರ್ಶನ್, ತಮ್ಮನ್ನ ತಾವು ಟಾಂಗಾ ಕುದುರೆಗೆ ಹೋಲಿಸಿಕೊಂಡರು.
ಇದನ್ನೂ ಓದಿ: Actor Darshan: ಹೌದು ನಾನು ಬ್ಯಾಡ್ ಬಾಯ್, ವಿವಾದಕ್ಕೆ ಕೇರ್ ಮಾಡಲ್ಲ ಎಂದ ದರ್ಶನ್!
ಶ್ರದ್ಧೆ ಬೇಕೇ ಬೇಕು ಎಂದ ದರ್ಶನ್ ಆರಂಭದಲ್ಲಿ ಅವಮಾನಗಳನ್ನು ಎದುರಿಸಲೇ ಬೇಕು ಎಂದರು. ಅವಮಾನಗಳು ಆದರೆ ಮುಂದೊಂದು ದಿನ ಸನ್ಮಾನ ಅಂದರು.
………………..💯💯💯💯
— ರಣ ಬೇಟೆಗಾರ🖤 DEVIL🔥 (@Dboss_Rampage_) February 18, 2024
💯 💯
💯 💯
💯 💯
💯💯💯💯
@dasadarshan🔥 #BossOfSandalwood #DBoss𓃰 #DevilTheHero#DarshanThoogudeepa pic.twitter.com/YtpTCMTXzK
ಇಷ್ಟೆಲ್ಲ ಮಾತಾಡಿ ಕೊನೆಗೆ ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದರು ದರ್ಶನ್.
ತಮ್ಮ ಈ ಮಾತುಗಳ ಮೂಲಕ ಅನೇಕರಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರವನ್ನ ಕೊಟ್ಟರು. ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನ ಯಾವುದೇ ಮುಚ್ಚು ಮರೆಯಿಲ್ಲದೇ ಹಂಚಿಕೊಂಡರು.
ಕೊನೆಯಲ್ಲಿ ತಂತ್ರಜ್ಞರು, ನಟಿಯರು ಆಗಿರಬಹುದು, ಗೊತ್ತೋ-ಗೊತ್ತಿಲ್ಲದೆಯೋ ನೋವು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.