Site icon Vistara News

Actor Darshan: ಕೆಟ್ಟ ಕಮೆಂಟ್‌ ಮಾಡೋರನ್ನ ಬ್ಲಾಕ್‌ ಮಾಡಿ, ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

Darshan support by Adviti Shetty Block the bad commenter

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ರಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ. ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಇದೀಗ, ಸ್ಯಾಂಡಲ್‌ವುಡ್ ನಟಿ ಅದ್ವಿತಿ ಶೆಟ್ಟಿ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

‘ಈ ಘಟನೆ ನನಗೆ ಬೇಸರ ತಂದಿದೆ. ಯಾರೂ ಕೂಡ ಯಾರಿಗೂ ಕೆಟ್ಟ ಕಮೆಂಟ್ ಮಾಡಬೇಡಿ..ಕೆಟ್ಟ ಕಮೆಂಟ್ ಮಾಡುವರನ್ನ ಬ್ಲಾಕ್ ಮಾಡಿಬಿಡಿ.. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಷ್ಟೇ. ದರ್ಶನ್ ಸರ್ ನಮ್ಮ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಬಂದಿದ್ದರು.. ಆವತ್ತು ಸಿಕ್ಕಾಗ ಚೆನ್ನಾಗಿ ಮಾತನಾಡಿಸಿದ್ದರು. ಮತ್ತೆ ಯಾವತ್ತೂ ಮುಖಾಮುಖಿ ಭೇಟಿ ಆಗಿಲ್ಲ. ಈ ಕೇಸ್‌ನಲ್ಲಿ ನಟ ದರ್ಶನ್ ಸರ್ ನಿರಪರಾಧಿ ಎಂದೆನಿಸಿ ಆಚೆ ಬರಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಅದ್ವಿತಿ ಶೆಟ್ಟಿ.

ಇನ್ನು ದರ್ಶನ್‌ ಕುರಿತಾಗಿ ಹಂಸಲೇಖ ಕೂಡ ʻʻನಾವು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್‌ . ದ್ವೇಷ ಅಂದರೆ ಅದು ಕ್ಯಾರೆಕ್ಟರ್ ಅಯ್ಯ. ಆತರ ಸಿನಿಮಾದಲ್ಲಿ ತೋರಿಸಬೇಕಷ್ಟೆ ನಾವು. ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಅನ್ನು ತರಬಾರದು. ಇದು ಕಲಾವಿದರ ಕರ್ತವ್ಯ.” ಎಂದು ಹಂಸಲೇಖ ಹೇಳಿದ್ದಾರೆ.

ಇದನ್ನೂ ಓದಿ; Actor Darshan: ದರ್ಶನ್‌ ತಪ್ಪು ಮಾಡಿದ್ದಾನೆ ಆದರೆ ಶಿಕ್ಷೆ ಕೊಡಬೇಡಿ ಎಂದು ದೂರದ ಊರಿಂದ ಓಡೋಡಿ ಬಂದ ಅಜ್ಜಿ!

“ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ನನ್ನ ಮಗು ತಪ್ಪು ಮಾಡಿದ್ದರೆ, ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನಾನು ನೋವು ತಿನ್ನುತ್ತೀನಿ. ಆ ಮಗು ಕೂಡ ಅಷ್ಟೇ ನೋವು ತಿನ್ನುತ್ತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ನೋಡೋಣ.” ಎಂದು ದರ್ಶನ್ ಜೈಲು ಸೇರಿರುವ ಬಗ್ಗೆ ಹಂಸಲೇಖ ಹೇಳಿಕೊಂಡಿದ್ದಾರೆ.

ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್‌, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.

Exit mobile version