ಬೆಂಗಳೂರು: ಫೆಬ್ರವರಿ 29ರಂದು ದೀಪಿಕಾ (Deepika Padukone) ತಾವು ಪ್ರೆಗ್ನೆಂಟ್ ಎನ್ನುವ ವಿಚಾರ ರಿವೀಲ್ ಮಾಡಿದ್ದಾರೆ. ಇದಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವಕ್ಕಾಗಿ ದಂಪತಿ ಗುಜರಾತ್‌ನ ಜಾಮ್‌ನಗರಕ್ಕೆ ಪ್ರಯಾಣ ಬೆಳೆಸಿದ್ದರು. ರಣವೀರ್ ಸಿಂಗ್ ಅವರು ಆಗಮಿಸುತ್ತಿದ್ದಂತೆ ಪಾಪರಾಜಿಗಳು ಹಾಗೂ ಅಭಿಮಾನಿಗಳು ರಣವೀರ್ ಅವರನ್ನು ಮುತ್ತಿಕೊಂಡು ಶುಭಾಶಯ ಕೋರಿದ್ದಾರೆ.
ದೀಪಿಕಾ ಪಡುಕೋಣೆ ಬಿಳಿ ಉಡುಪನ್ನು ಧರಿಸಿದ್ದು, ರಣವೀರ್ ಸಿಂಗ್ ಬಿಳಿ ಹೂಡಿ ಮತ್ತು ಪ್ಯಾಂಟ್ ಧರಿಸಿದ್ದರು. ದಂಪತಿ ಕಂಡೊಡನೆ ಪಾಪರಾಜಿಗಳು ಹಾಗೇ ಫ್ಯಾನ್ಸ್ ಪುಷ್ಪಗುಚ್ಛವನ್ನು ನೀಡಿ, ಶುಭಾಶಯ ಕೋರಿದ್ದಾರೆ. ಖುಷಿಯಾದ ರಣವೀರ್ ಸಿಂಗ್ ಅವರು ಫ್ಯಾನ್ಸ್‌ಗೆ ಹಗ್ ಕೊಟ್ಟಿದ್ದಾರೆ.
ಗುಡ್ ನ್ಯೂಸ್ ಕೊಟ್ಟೇ ಬಿಟ್ರು ದೀಪಿಕಾ
ದೀಪಿಕಾ ಪಡುಕೋಣೆ ಈಗ 2 ತಿಂಗಳ ಗರ್ಭಿಣಿ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಫೆ. 29ರ ಗುರುವಾರ ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜೋಡಿ ಪರಸ್ಪರ ಪ್ರೀತಿ ಮಾಡಿ ಮದುವೆಯಾಗಿತ್ತು. ಯಾವುದೇ ಕ್ಯಾಪ್ಷನ್ ಇಲ್ಲ. ಮಗುವಿಗೆ ಸಂಬಂಧಿಸಿದ ಬಟ್ಟೆ, ಶೂ, ಮುಂತಾದ ವಸ್ತುಗಳಿರುವ ಚಿತ್ರವನ್ನು ಅವರು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Deepika Padukone: ಗುಡ್ ನ್ಯೂಸ್ ಕೊಟ್ಟೇ ಬಿಟ್ರು ದೀಪಿಕಾ ಪಡುಕೋಣೆ-ರಣವೀರ್ ಸಿಂಗ್!
ಈ ವರ್ಷದ ಆರಂಭದಲ್ಲಿ ದೀಪಿಕಾ ರಣವೀರ್ ಜತೆ ಮಕ್ಕಳನ್ನು ಹೊಂದಲು ಬಯಸುವುದಾಗಿ ಹೇಳಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ್ದ ದೀಪಿಕಾ, “ಖಂಡಿತವಾಗಿಯೂ. ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದರು.
ದೀಪಿಕಾ ಪಡುಕೋಣೆ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗಿದೆ.ಇನ್ನು ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಲಿದ್ದಾರೆ.