Site icon Vistara News

Dhanya Ramkumar: ‘ಹೈಡ್​ ಆ್ಯಂಡ್​ ಸೀಕ್​’ ಮೋಷನ್​ ಪೋಸ್ಟರ್ ಔಟ್‌!

Dhanya Ramkumar hide and seek r motion poster is out

ಬೆಂಗಳೂರು: ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಿದೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರದಲ್ಲಿ ಅನೂಪ್​ ರೇವಣ್ಣ (Anoop Revanna) ಅವರು ಹೀರೋ ಆಗಿ ನಟಿಸಿದ್ದಾರೆ. ಧನ್ಯಾ ರಾಮ್​ಕುಮಾರ್ (Dhanya Ramkumar) ನಾಯಕಿಯಾಗಿ ಅಭಿನಯಿಸಿದ್ದಾರೆ. ಮಾರ್ಚ್​ 15ರಂದು ‘ಹೈಡ್​ ಆ್ಯಂಡ್​ ಸೀಕ್​’ ಬಿಡುಗಡೆ ಆಗಲಿದೆ.

ಈ ಸಿನಿಮಾಗೆ ಪುನೀತ್​ ನಾಗರಾಜು ನಿರ್ದೇಶನ ಮಾಡಿದ್ದಾರೆ. ವಸಂತ್​ ಎಂ. ರಾವ್​ ಕುಲಕರ್ಣಿ, ಪುನೀತ್​ ನಾಗರಾಜು​ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಸುನೇರಿ ಆರ್ಟ್​ ಕ್ರಿಯೇಷನ್ಸ್​’ ಬ್ಯಾನರ್​ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ. ಪಿಜೋ ಪಿ. ಜಾನ್​ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮಧು ತುಂಬೆಕೆರೆ ಅವರು ಸಂಕಲನ ಮಾಡಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ ಸ್ಯಾಂಡಿ ಅಡ್ಡಂಕಿ ಅವರು ಸಂಗೀತ ನೀಡಿದ್ದಾರೆ.

‘ಎ2 ಮ್ಯೂಸಿಕ್​’ ಮೂಲಕ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಿದೆ. ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ ಜೊತೆ ಈ ಸಿನಿಮಾದಲ್ಲಿ ಮೈತ್ರಿ ಜಗ್ಗಿ, ಸೂರಜ್​, ಬಲರಾಜ್​ ವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್​ ನಟರಂಗ, ಅರವಿಂದ್​ ರಾವ್​ ಮುಂತಾದವರು ನಟಿಸಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರದಲ್ಲಿ ಅನೂಪ್​ ರೇವಣ್ಣ ಅವರು ಕಿಡ್ನಾಪರ್​ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ.

ಇದನ್ನೂ ಓದಿ: Dhanya Ramkumar: ಅಣ್ಣಾವ್ರ ಮುದ್ದಿನ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಕೊರೊನಾ

ಡಾ. ರಾಜ್​ಕುಮಾರ್​ ಅವರ ಮೊಮ್ಮಗಳು ಧನ್ಯಾ ರಾಮ್​ಕುಮಾರ್ ಈ ಸಿನಿಮಾದಲ್ಲಿ ಉದ್ಯಮಿಯ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆಯಲ್ಲಿ ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳು ಇವೆ. ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯಕ್ರಗಳು ಭರದಿಂದ ಸಾಗುತ್ತಿದೆ.

Exit mobile version