ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ಕ್ಕೆ ರಿಲೀಸ್ ಆಗುತ್ತಿದೆ. ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮುಂಬೈನಲ್ಲಿ ಭಾರೀ ಸುದ್ದಿಗೋಷ್ಠಿಗೆ ಚಿತ್ರತಂಡ ಮುಂದಾಗಿದೆ. ಈಗಾಗಲೇ ಚಿತ್ರತಂಡ ಮುಂಬೈಗೆ ಹೊರಟಿದೆ.ಸಿದ್ಧಗಂಗಾ ಮಠದ ಬಳಿಕ ಚಿತ್ರದುರ್ಗದ ಮುರುಘಾ ಮಠಕ್ಕೂ ಧ್ರುವ ಸರ್ಜಾ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಇನ್ನು ಹಿರಿಯೂರಿನ ಬಳಿಕ ಧ್ರುವ ಸರ್ಜಾ ಕಾರ್ ಏರುವ ಮುನ್ನ ಬಾಸ್ ಬಾಸ್ ಡಿಬಾಸ್ ಎನ್ನುವ ಎಂದು ದರ್ಶನ್ ಅಭಿಮಾನಿಗಳು ಕೂಗಿದ ಘಟನೆಯೂ ನಡೆಯಿತು.
ಧ್ರುವ ಸರ್ಜಾ ಫ್ಯಾನ್ಸ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಆಗಾಗ ವಾರ್ ನಡೆಯುತ್ತಲೇ ಇರುತ್ತದೆ. ರಾಮನಗರ ಕರಗ ಉತ್ಸವದಲ್ಲಿ ಕೂಡ ಅಭಿಮಾನಿಗಳು ಜೈ ಡಿ ಬಾಸ್ ಎಂದು ಕೂಗಿದ್ದರು. ಇದೀಗ ಹಿರಿಯೂರಿನ ಬಳಿ ಧ್ರುವ ಸರ್ಜಾ ಎದುರು ಬಾಸ್ ಬಾಸ್ ಡಿ ಬಾಸ್, ನಮ್ ಬಾಸ್ ಯಾರು ಚಾಲೆಂಜಿಂಗ್ ಸ್ಟಾರ್ ಎಂದು ಕೂಗಿದ್ದಾರೆ. ಆ ವೀಡಿಯೋ ವೈರಲ್ ಆಗುತ್ತಿದೆ.
ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 11ರಂದು 5 ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಧ್ರುವ ಅವರ ಸ್ವಂತ ಸೋದರ ಮಾವ ಅರ್ಜುನ್ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್ʼಗೆ ಬೆಂಬಲವಾಗಿ ನಿಂತಿದ್ದಾರೆ. ನಿರ್ಮಾಪಕ ಉದಯ್ ಮೆಹ್ತಾ ಸಾಕಷ್ಟು ಹಣ ಸುರಿದಿದ್ದಾರೆ. ಮೂರು ವರ್ಷವಾದರೂ ಸಿನಿಮಾ ನಾನಾ ಕಾರಣಕ್ಕೆ ತಡವಾಗುತ್ತಲೇ ಬಂತು. ಆ ಕಾರಣಗಳಲ್ಲಿ ಚಿತ್ರದ ವಿಎಫ್‌ಎಕ್ಸ್ ಕೆಲಸ ಕೂಡ ಒಂದು.
ಇದನ್ನೂ ಓದಿ; Kannada New Movie: ʻಟೆನೆಂಟ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಔಟ್; ಸೋನು ಗೌಡ ನಾಯಕಿ!
ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್ ಕುಮಾರ್, ನಿಕಿತನ್ ಧೀರ್, ನವಾಬ್ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್ ಪಾಠಕ್ ಸಹ ‘ಮಾರ್ಟಿನ್’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದರ್ಶನ್ ಕೇಸ್ ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು?
ಧ್ರುವ ಸರ್ಜಾ ಮಾತನಾಡಿ ʻʻಯಾರೋ ಲೋ ಆಗಿದ್ದಾರೆ, ಕುಗ್ಗಿದ್ದಾರೆ ಎಂದು ಏನೇನೋ ಮಾತನಾಡಬಾರದು. ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮದೂ ಒಂದು ಕಲ್ಲಿರಲಿ ಎಂದು ಬೀಸಲು ಹೋಗುವುದಿಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ರೇಣುಕಾ ಸ್ವಾಮಿಗೂ ಮಗು ಆಗಲಿದೆ. ಅವರ ಕುಟುಂಬಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಏನೇ ಆಗಲಿ ಅಗಲಿರುವ ರೇಣುಕಾ ಸ್ವಾಮಿಗೆ ನ್ಯಾಯ ಸಿಗಬೇಕು. ಕಾನೂನು ಎಲ್ಲಕ್ಕಿಂತ ದೊಡ್ಡದು. ಸುಮ್ಮನೇ ನಾವು ಏನೇನೋ ಮಾತನಾಡಬಾರದು.’ ಎಂದಿದ್ದರು.