Site icon Vistara News

Dhruva Sarja: ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ಟಾರ್ ಅಂತ ಯಾರೂ ಇಲ್ಲ ಎಂದಿದ್ದೇಕೆ ಧ್ರುವ ಸರ್ಜಾ?

Dhruva Sarja Prem say about the theater problem

ಬೆಂಗಳೂರು: ಧ್ರುವ ಸರ್ಜಾ (Dhruva Sarja) ಮತ್ತು ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ ‘ಕೆಡಿ’ ಇದೇ (KD Movie) ಡಿಸೆಂಬರ್‌ಗೆ ತೆರೆ ಕಾಣಲಿದೆ. ಮೇಕಿಂಗ್ ವಿಡಿಯೊ ರಿಲೀಸ್ ಮಾಡಿ ಸಿಹಿ ಸುದ್ದಿ ಕೊಟ್ಟಿದೆ ʻಕೆಡಿʼ ಸಿನಿಮಾ ಚಿತ್ರತಂಡ. ಇಂದು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕ, ಸಿನಿಮಾದ ಸಂಗೀತ ಇನ್ನಿತರೆ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ.  ಬಿಗ್‌ ಸ್ಟಾರ್ಸ್‌ಗಳು ಯಾಕೆ ವರ್ಷಕ್ಕೆ 2 ಸಿನಿಮಾ ಮಾಡಲ್ಲ ಎಂಬುದರ ಬಗ್ಗೆ ಪ್ರೇಮ್‌ ಮಾಹಿತಿ ಹಂಚಿಕೊಂಡರು.

ಬಿಗ್‌ ಸ್ಟಾರ್ಸ್‌ಗಳು ಯಾಕೆ ವರ್ಷಕ್ಕೆ 2 ಸಿನಿಮಾ ಮಾಡಲ್ಲ?

ಇತ್ತೀಚೆಗೆ ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಗಳಲ್ಲಿ ಬರುತ್ತಿಲ್ಲ ಎಂಬ ದೂರು ಜೋರಾಗಿ ಕೇಳಿ ಬರುತ್ತಿದೆ. ಇತ್ತೀಚೆಗೆ ಫಿಲ್ಮ್‌ ಚೇಂಬರ್​ನವರು ಸಭೆ ನಡೆಸಿ, ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುವಂತೆ ಒತ್ತಾಯಿಸಲು ನಿರ್ಣಯಿಸಿರುವ ಸುದ್ದಿ ಹರಿದಾಡಿತು. ಈ ಬಗ್ಗೆ ಪ್ರೇಮ್‌ಗೆ ಪ್ರಶ್ನೆ ಎದುರಾದಾಗ ಉತ್ತರಿಸಿದ್ದು ಹೀಗೆ.

ಪ್ರೇಮ್‌ ಮಾತನಾಡಿ ʻʻಇಂದಿನ ದಿನಮಾನದಲ್ಲಿ ಸಿನಿಮಾ ಮಾಡುವ ರೀತಿ ಬೇರೆ ಆಗಿದೆ. ಮುಂಚೆಲ್ಲ ವರ್ಷಕ್ಕೊಂದು ಸಿನಿಮಾಗಳನ್ನು ಮಾಡುತ್ತಿದ್ದರು. ಆಗ ಗ್ರಾಫಿಕ್‌ ಆಗಿರಲಿ, ತಂತ್ರಜ್ಞಾನ ಇರಲಿಲ್ಲ. ಆದರೆ ಈಗ ಕಾಂಪಿಟೇಶನ್‌ ಹೆಚ್ಚಾಗಿದೆ. ಬೇರೆ ಭಾಷೆಗಳಲ್ಲಿ ಕಾಂಪೀಟ್‌ ಮಾಡಲೇಬೇಕಾಗಿದೆ. ಕಾಂಪೀಟ್‌ ಮಾಡಬೇಕು ಎಂದರೆ ಕ್ವಾಲಿಟಿ ತುಂಬ ಮುಖ್ಯ. ಆಗ ಸಮಯ ಬೇಕೆ ಬೇಕು. ದರ್ಶನ್‌, ಧ್ರುವ ಅವರಿಗೆ ಮೂರು ಸಿನಿಮಾ ಮಾಡಿ ಎನ್ನುವುದಕ್ಕೆ ಆಗಲ್ಲ. ಈಗ ಸಿನಿಮಾ ಮಾಡಬೇಕು ಎಂದರೆ ಒಂದು ವರ್ಷ ಬೇಕೆ ಬೇಕು” ಎಂದರು.

ಇದನ್ನೂ ಓದಿ: Dhruva Sarja: ಮತ್ತೆ ಗುಡ್‌ ನ್ಯೂಸ್‌ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

ಕನ್ನಡ ಇಂಡಸ್ಟ್ರಿಯಲ್ಲಿ ಸ್ಟಾರ್ ಅಂತ ಯಾರೂ ಇಲ್ಲ

ಇದೇ ವೇಳೆ ಧ್ರುವ ಸರ್ಜಾ ಮಾತನಾಡಿ ʻʻಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್‌ ಅಂತ ಯಾರಿಲ್ಲ. ಸಿನಿಮಾ ಚೆನ್ನಾಗಿದ್ದಾರೆ ಅವರೇ ಸ್ಟಾರ್‌. ಕ್ವಾಲಿಟಿ, ಕಂಟೆಂಟ್‌ ತುಂಬ ಮುಖ್ಯ. ಪ್ರೇಕ್ಷಕರಿಗೆ ಇಷ್ಟ ಆಗಬೇಕು ಎಂದೇ ನಾವು ಕಟೆಂಟ್‌ಗೆ ಆದ್ಯತೆ ಕೊಡುತ್ತಿದ್ದೇವೆʼʼಎಂದರು ಧ್ರುವ ಸರ್ಜಾ. ಧ್ರುವ ಸರ್ಜಾ ಸಿನಿಮಾ ಬಗ್ಗೆ ಮಾತನಾಡಿ ʻʻಮಾರ್ಟಿನ್‌ ಸಿನಿಮಾ ಅಕ್ಟೋಬರ್‌ 11ಕ್ಕೆ ರಿಲೀಸ್‌ ಆದರೆ, ಕೆಡಿ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್‌ ಆಗುತ್ತಿದೆ. ಎರಡು ಸಿನಿಮಾಗಳ ಜಾನರ್‌ ಬೇರೆ ಬೇರೆ. ಕೆಡಿ ರೆಟ್ರೋ ಆಗಿದ್ದು, ಮಾರ್ಟಿನ್‌ ಒಳ್ಳೆ ಡ್ರಾಮ್‌ ಮತ್ತು ಕಟೆಂಟ್‌ ಸಿನಿಮಾʼʼಎಂದರು.

ಡಿಸೆಂಬರ್‌ಗೆ ಕೆಡಿ ಸಿನಿಮಾ ರಿಲೀಸ್‌

ಕೆಡಿ ಸಿನಿಮಾದಲ್ಲಿ ಬಹು ತಾರಾಗಣ ಇದೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಟ್ಟಿದ್ದರು. ರೆಟ್ರೊ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ ಮಿಂಚಿದ್ದು, ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಕಾಣಿಸಿಕೊಂಡಿದ್ದರು. ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್‌ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

Exit mobile version