Site icon Vistara News

Dhruva Sarja: ‘ಸಿ’ ಅಂತಿದ್ದಾರೆ ಧ್ರುವ ಸರ್ಜಾ; ಇದು ಅಪ್ಪ-ಮಗಳ ಕಥೆ!

dhruva sarja support C Cinema Kanda Kanda Video Song Release

ಬೆಂಗಳೂರು: `ಸಿ’..ಅಂದ್ರೆ ಇಲ್ನೋಡಿ ಅಂತಲ್ಲ, ಹಾಗಂತ ಸಮುದ್ರದ ಬಗ್ಗೆ ಹೇಳ್ತಾ ಇದ್ದೇವೆ ಅಂತನೂ (Dhruva Sarja) ಅಂದ್ಕೊಬೇಡಿ… ‘ಸಿ’ ಸ್ಯಾಂಡಲ್ ವುಡ್‌ನಲ್ಲಿ ರಿಲೀಸ್‌ಗೆ ಸಿದ್ಧವಾಗಿರುವ ಹೊಸ ಸಿನಿಮಾ. ಈಗಾಲೇ ಚಂದನವನದಲ್ಲಿ ʻಶ್ʼ..ʻಸೈʼ..ʻಎʼ..ʻಓಂʼ…ಹೀಗೆ ಒಂದೇ ಅಕ್ಷರದ ಹೆಸರಿನ ಹಲವು ಸಿನಿಮಾಗಳು ಬಂದು ಹೋದವು. ಇದೀಗ ಅದೇ ಸಾಲಿಗೆ ‘ಸಿ’ ಎನ್ನುವ ಮತ್ತೊಂದು ಸಿನಿಮಾ ಕೂಡ ಸೇರಿಕೊಳ್ಳುತ್ತಿರುವುದು ವಿಶೇಷ..

ಕಿರಣ್ ಸುಬ್ರಮಣಿ ಚೊಚ್ಚಲ ನಿರ್ದೇಶನದ ‘ಸಿ’ ಸಿನಿಮಾ ಶೂಟಿಂಗ್ ಮುಗಿಸಿ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದೆ. ಎಲೆಕ್ಷನ್ ಬಿಸಿ ಕಮ್ಮಿಯಾಗುತ್ತಿದ್ದಂತೆ ಥಿಯೇಟರ್‌ಗೆ ಲಗ್ಗೆ ಇಡಲು ಸಜ್ಜಾಗಿರುವ ‘ಸಿ’ ಸಿನಿಮಾ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ‘ಸಿ’ ಸಿನಿಮಾದ ಅಪ್ಪ ಮಗಳ ಬಾಂಧವ್ಯದ ಹಾಡು ಈಗ ಗಾನ ಪ್ರಿಯರ ಗಮನ ಸೆಳೆಯುತ್ತಿದೆ. ಕಿರಣ್ ಸುಬ್ರಮಣಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಹಾಡಿನಲ್ಲಿ ಕಿರಣ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಈ ಸುಂದರ ಹಾಡನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಿಲೀಸ್ ಮಾಡಿರುವುದು ವಿಶೇಷ. ಮುದ್ದು ಮಗಳ ಜತೆ ಸಂಭ್ರಮಿಸುತ್ತಿರುವ ಧ್ರುವ ಸಿ ಸಿನಿಮಾದ ಸುಂದರ ಹಾಡನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಅಂದಹಾಗೆ ʻಕಂದಾ…ಕಂದಾʼ ಎನ್ನುವ ಸಾಲಿನಿಂದ ಪ್ರಾರಂಭವಾಗುವ ಈ ಹಾಡನ್ನು ಹೃದಯ ಶಿವ ಬರೆದಿದ್ದು, ಗಾಯಕ ವಾಸುಕಿ ವೈಭವ್ ಹಾಡಿದ್ದಾರೆ.

ಇದನ್ನೂ ಓದಿ: Dhruva Sarja: ವಿಮಾನ ದುರಂತ: ಕೂದಲೆಳೆ ಅಂತರದಿಂದ ಪಾರಾದ ಧ್ರುವ ಸರ್ಜಾ!

ಈ ಬಗ್ಗೆ ನಟ ಧ್ರುವ ಸರ್ಜಾ ಮಾತನಾಡಿ ʻʻಸಿ ಎಂದರೆ ಕ್ರೈಂ. ಹೊಸ ತಂಡ ಸೇರಿ ಒಳ್ಳೆಯ ಸಿನಿಮಾ ಮಾಡಿದೆ. ಹೊಸಬರಿಗೆ ಸಪೋರ್ಟ್‌ ಮಾಡಿ. ಚಿತ್ರತಂಡಕ್ಕೆ ಶುಭವಾಗಲಿʼʼಎಂದರು.

ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಸಿನಿಮಾರಂಗ ಏನು ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ʻಸಿʼ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವಾತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಸಿ ಸಿನಿಮಾ ತಂದೆ- ಮಗಳ ಬಾಂಧವ್ಯದ ಜತೆಗೆ ಮೆಡಿಕಲ್ ಮಾಫಿಯಾದ ಬಗ್ಗೆ ಇದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ನಿರ್ಮಾಣ ಮಾಡಿದ್ದಾರೆ.

Exit mobile version