ನಟ ಡಾಲಿ ಧನಂಜಯ (Dolly Dhananjay) ಅವರ ಮುದ್ದಿನ ಅಜ್ಜಿ ಮಲ್ಲಮ್ಮ (95) ನಿಧನರಾಗಿದ್ದಾರೆ.
ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮ, ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮಲ್ಲಮ್ಮ ಅವರ ಎರಡನೇ ಮಗನಾಗಿದ್ದ ಅಡವಿಸ್ವಾಮಿ ಅವರ ಮಗನೇ ಧನಂಜಯ.
ಮಲ್ಲಮ್ಮ ಅವರಿಗೆ 5 ಮಕ್ಕಳಿದ್ದರು. ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಡಾಲಿ ಧನಂಜಯ ಜತೆ ತೆರಳಿ ಮತದಾನ ಮಾಡುತ್ತಿದ್ದರು.
ಇದನ್ನೂ ಓದಿ: Actor Suriya: ಕಾಲಿವುಡ್ ನಟ ಸೂರ್ಯ ಸಿನಿಮಾಗಾಗಿ ಈ ಕನ್ನಡ ಸ್ಟಾರ್ ಹೀರೋಗೆ ಬಂದಿತ್ತು ಆಫರ್!
‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಡಾಲಿ (Daali) ಅಜ್ಜಿ ಮಲ್ಲಮ್ಮ ಕೂಡ ವೇದಿಕೆ ಏರಿದ್ದರು. ಅವರು ಧನಂಜಯ್ ಮದುವೆ ಬಗ್ಗೆ ಮಾತನಾಡಿದ್ದರು.
‘ಧನಂಜಯ್ಗೆ ಮದುವೆ ಮಾಡಬೇಕು. ನಾನು ಇದ್ದಾಗಲೇ ವಿವಾಹ ಮಾಡಬೇಕು ಎಂದು ಹೇಳಿದ್ರೆ, ‘ಆಗೋಣ ತಗೋಳಜ್ಜಿ’ ಎಂದು ಹೇಳುತ್ತಾನೆ. ಎಲ್ಲರ ಮದುವೆಯನ್ನೂ ಮಾಡಿದ್ದೇನೆ. ನಾವು ಹುಡುಕಿದ ಹುಡುಗಿಯನ್ನು ಅವನು ಒಪ್ಪಿಕೊಳ್ಳಬೇಕಲ್ಲ. ಅವನು ಒಪ್ಪಿಕೊಂಡು ಬಂದ್ರೆ ನಾನೇ ಮದುವೆ ಮಾಡ್ತೀನಿ’ ಎಂದಿದ್ದರು ಅಜ್ಜಿ ಮಲ್ಲಮ್ಮ. . ‘ನನ್ನ ಅಜ್ಜಿಗೆ 95 ವರ್ಷ. ಇನ್ನೂ ಐದು ವರ್ಷ ಅವರು ಇರ್ತಾರೆ. ಹಾಗಾಗಿ, ಆರಮಾಗಿ ಆಗ್ತೀನಿ’ ಎಂದಿದ್ದರು ಡಾಲಿ. ಅಷ್ಟೇ ಅಲ್ಲದೇ ಧನಂಜಯ್ ಅವರು ಚಿತ್ರರಂಗಕ್ಕೆ ಕಾಲಿಡುತ್ತೇನೆ ಎಂದಾಗ ಅಜ್ಜಿಗೆ ಅಚ್ಚರಿ ಆಗಿತ್ತು. ಅವರು ರಾಜ್ಕುಮಾರ್ ಸಮಾಧಿ ಬಳಿ ಬಂದು ‘ನೀವು ಬೆಳದಾಂಗೆ ನನ್ನ ಮೊಮ್ಮಕ್ಕಳು ಬೆಳೀಬೇಕು. ಅಷ್ಟು ಮಾಡಿ’ ಎಂದು ಕೋರಿದ್ದರು.