Site icon Vistara News

Shakhahaari Movie: ಒಟಿಟಿಗೆ ಕಾಯ್ಬೇಡಿ, ಚಿತ್ರಮಂದಿರಕ್ಕೆ ಬನ್ನಿ ಎಂದ ʻಶಾಖಾಹಾರಿʼ ನಟ ರಂಗಾಯಣ ರಘು!

Don't wait for OTT, come to the theatre , said actor Shakhahaari Movie Rangayana Raghu

ಬೆಂಗಳೂರು:ರಂಗಾಯಣ ರಘು ನಟನೆಯ ʻಶಾಖಾಹಾರಿʼ ಸಿನಿಮಾ (Shakhahaari Movie) ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕ ಸಂದೀಪ್ ಸುಂಕದ್ ಬೇರೊಂದು ದಿಕ್ಕಿನಲ್ಲಿ ಯೋಚಿಸಿ ಹೊಸತನಕ್ಕೆ ಒತ್ತುಕೊಟ್ಟು ಸಿನಿರಸಿಕರನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಪಕ್ಕ ಪೈಸಾ ವಸೂಲ್ ಸಿನಿಮಾ ಎನಿಸಿಕೊಂಡಿರುವ ಶಾಖಾಹಾರಿ ರೋಚಕ ತಿರುವು, ಭಾವನಾತ್ಮಕ ಸಂಬಂಧ, ಪ್ರೀತಿ, ಸ್ನೇಹ, ನಂಬಿಕೆ ಇವೆಲ್ಲವುದರ ಬಗ್ಗೆ ಬಹಳ ಸೂಕ್ಷ್ಮವಾಗಿ ಪ್ರೇಕ್ಷಕರಿಗೆ ಮುಟ್ಟಿಸಿ ಎಲ್ಲಾ ರೀತಿಯ ರಸಾನುಭವ ನೀಡಿದೆ. ಇಷ್ಟು ಸಾಕಲ್ವಾ? ಪ್ರೇಕ್ಷಕರು ಬಯಸೋದು ಇದನ್ನೇ. ಕೊಟ್ಟ ಕಾಸಿಗೆ ಒಳ್ಳೆ ಎಂಟರ್ ಟೈನ್ಮೆಂಟ್ ಸಿಗಬೇಕು. ಚಿತ್ರ ಚೆನ್ನಾಗಿರಬೇಕು. ಅದೆಲ್ಲಾ ಕ್ವಾಲಿಟಿ ಶಾಖಾಹಾರಿ ಚಿತ್ರಕ್ಕಿದೆ. ಆದರೆ ಚಿತ್ರತಂಡ ನಿರೀಕ್ಷೆ ಮಟ್ಟದಲ್ಲಿ ಪ್ರೇಕ್ಷಕಪ್ರಭು ಥಿಯೇಟರ್‌ನತ್ತ ಹೆಜ್ಜೆ ಇಡುತ್ತಿಲ್ಲ ,ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನೆಮಾ ನೋಡಲು ಬರಲಿ ಎನ್ನುವ ಆಶಯವನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಆಯೋಜನೆಗೊಂಡ ಶಾಖಾಹಾರಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮನದಾಳದ ಮಾತನ್ನು ಇಡೀ ಚಿತ್ರತಂಡ ತೊಡಿಕೊಂಡಿದೆ.

ರಂಗಾಯಣ ರಘು ಮಾತನಾಡಿ, ʻʻಹೊರಗಿನವರು ಜನ ಬಂದು ಎಲ್ಲರೂ ಚೆನ್ನಾಗಿ ಆಗಿದೆ ಅಂದರು. ಇದು ಕ್ಲಾಸ್ ಸಿನಿಮಾ ಎಂದು ನಾನು ಒಪ್ಪುವುದಿಲ್ಲ. ಒಳ್ಳೆ ಸಿನಿಮಾ ಎಂದು ಹೇಳುತ್ತೇನೆ. ಕ್ಲಾಸ್ ಮಾಸ್ ಹೋಗಿ ತುಂಬಾ ದಿನ ಆಗಿದೆ. ಒಳ್ಳೆ ಸಿನಿಮಾ. ದೊಡ್ಡ ದೊಡ್ಡವರ ಸಿನಿಮಾ ಎಂದಾಗ ಕೋಟಿ ಕೋಟಿ ಹಾಕುವ ನಿರ್ಮಾಪಕರು ಸಾಕಾಗುವುದಿಲ್ಲ. ಅದಕ್ಕೆ ಇದ್ದಾರೆ ಅವ್ರು ಮಾಡ್ತಾರೆ. ಸಣ್ಣ ಸಣ್ಣವರು ಮಾಡಿದಾಗ ಅದು ಸಮುದ್ರವಾಗುತ್ತದೆ. ನದಿ ಹರಿವೇ ಇಲ್ಲ ಅಂದರೆ ಸಮುದ್ರಕ್ಕೆ ಕಷ್ಟವಾಗುತ್ತದೆ. ಇದು ಒಳ್ಳೆ ಸಿನಿಮಾ ಎಂದು ಎಲ್ಲರೂ ಹೇಳುತ್ತಿದ್ದಾರೆ. ಒಟಿಟಿಗೆ ಬಂದ್ಮೇಲೆ ಮೆಚ್ಚಿಕೊಳ್ತಾರೆ ಗೊತ್ತಿಲ್ಲʼʼ ಎಂದರು.

ಇದನ್ನೂ ಓದಿ: Kannada New Movie: ’ಲೈನ್ ಮ್ಯಾನ್’ ಮೋಷನ್ ಪೋಸ್ಟರ್ ರಿಲೀಸ್ : ಮಾ.15ಕ್ಕೆ ತೆರೆಗೆ!

ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ʻʻಇಷ್ಟು ಪಬ್ಲಿಸಿಟಿ ಮಾಡಿದರು ಯಾಕೆ ಜನಕ್ಕೆ ರೀಚ್ ಮಾಡಲು ಆಗುತ್ತಿಲ್ಲ. ನಾವು ಕ್ಲಾಸ್ ಸಿನಿಮಾ ಎಂದುಕೊಂಡು ಒಂದಷ್ಟು ಸೀಮಿತ ಜನಕ್ಕೆ ನಮ್ಮದೇ ಆದ ಒಂದು ಟಾರ್ಗೆಟ್ ಆಡಿಯನ್ಸ್ ಮಾಡಿಕೊಂಡೆವು. ಅದು ರಿಲೀಸ್ ಆದ್ಮೇಲೆ ಅದು ತೆಗೆದುಕೊಂಡ ವಿಸ್ತಾರ, ಜನರಿಗೆ ರೀಚ್ ಆಗಿದ್ದು ಇರಬಹುದು. ನಮ್ಮ ಸುತ್ತ ವಲಯದಲ್ಲಿ ಹೆಚ್ಚು ರೀಚ್ ಆಗಿದೆ. ಅದು ಬಿಟ್ಟು ಹೋಗಿಲ್ಲ ಎಂಬ ಕೊರಗು ಇತ್ತು. ಇದಾದ ಮೇಲೆ ಇತ್ತೀಚೆಗೆ ಬಂದ ವಿಮರ್ಷೆ ಆಗಿರಬಹುದು. ಥಿಯೇಟರ್ ಫಿಲ್ಲಿಂಗ್ ಇರಬಹುದು. ಈಗಲೂ 50 ರಿಂದ 60% ಆಕ್ಯೂಪೆನ್ಸಿ ಇದೆ. ನಿಮ್ಮ ಮೂಲಕ ಇನ್ನೂ ಹೆಚ್ಚು ಜನರಿಗೆ ರೀಚ್ ಆಗಬಹುದು. ನಿಮ್ಮ ಬೆಂಬಲ ಇರಬೇಕು. ನಮಗೆ ಎಲ್ಲಾ ಒಟಿಟಿ ಕಡೆಯಿಂದ ಆಫರ್ ಬಂದಿದೆʼʼ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿನ ಒಂದು ಪುಟ್ಟ ಗ್ರಾಮದಲ್ಲಿ ನಡೆಯುವ ಬಲು ರೋಚಕವಾದ ಕಥೆ ‘ಶಾಖಾಹಾರಿ’ ಕಹಾನಿ. ಈ ಸಿನಿಮಾದ ಕಥಾನಾಯಕ ಸುಬ್ಬಣ್ಣ ಭಟ್ಟ್ ರಂಗಾಯಣ ರಘು ಒಂದು ವೆಜಿಟೇರಿಯನ್ ಹೋಟೆಲ್ ನಡೆಸುತ್ತಾನೆ. ಆದರೆ ಅಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಶಾಕಾಹಾರಿ ಹೋಟೆಲ್ನ ಇಮೇಜ್ ‘ಶಾಖಾಹಾರಿ’ಯಾಗಿ ಬದಲಾಗುತ್ತದೆ. ಇಂಥ ಒಗಟಿನಂತಹ ಟೈಟಲ್ನ ಹಿಂದಿರುವ ಕಥೆ ಏನು ಎಂಬುದು ಸಿನಿಮಾದ ತಿರುಳು..

ಶಾಖಾಹಾರಿ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ. ಶಶಾಂಕ್ ನಾರಾಯಣ್ ಸಂಕಲನ, ಮಯೂರ್ ಅಂಬೇಕಲ್ಲು ಸಂಗೀತ ಚಿತ್ರಕ್ಕೆ ಪುಷ್ಟಿ ನೀಡಿದೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version