ಬೆಂಗಳೂರು: ದುನಿಯಾ ವಿಜಯ್ ನಟಿಸಿ (Duniya Vijay), ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಂತೋಷ್ ಥಿಯೇಟರ್ ನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಡೊಳ್ಳಿನ ಸದ್ದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ ಬ್ಲಾಕ್ ಕೋಬ್ರಾ ಫ್ಯಾನ್ಸ್. ಸಲಗ ಸಿನಿಮಾದ ನಂತರ ಸಿನಿಪ್ರೇಕ್ಷಕರ ಮುಂದೆ ಮತ್ತೆ ಬಂದಿದ್ದಾರೆ ದುನಿಯಾ.
‘ಭೀಮ’ ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ಆಗಿದೆ. ‘ಸಲಗ’ ಸಿನಿಮಾ ಮೂಲಕ ಗೆಲುವು ಕಂಡಿರುವ ದುನಿಯಾ ವಿಜಯ್ ಈ ಬಾರಿ ಮತ್ತೊಂದು ಗೆಲುವಿನ ಭರವಸೆಯಲ್ಲಿದ್ದಾರೆ. ಈ ಸಿನಿಮಾ ನೋಡಲು ಕನಿಷ್ಠ 18 ವರ್ಷ ಆಗಿರಬೇಕಾಗಿರುವುದು ಕಡ್ಡಾಯ. ಅದಕ್ಕಿಂತ ಕಡಿಮೆ ವಯಸ್ಸಿನ ದುನಿಯಾ ವಿಜಯ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ ಈ ಸಿನಿಮಾಕ್ಕೆ ದೊರಕಿರುವುದು “ಎ” ಸರ್ಟಿಫಿಕೇಟ್.
ಸಿನಿಮಾದ ಬಗ್ಗೆ ಹೇಳುವುದಾದರೆ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸಾರ್ಥಕ್ ಈ ಸಿನಿಮಾಗೆ ಬಂಡವಾಳ ಹೂಡಿಸಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸೆಸ್‌ನಲ್ಲಿರುವ ವಿಜಿ “ಭೀಮʼ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: Duniya Vijay- Ganesh: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ ಸಿನಿಮಾ ಬರೋದು ಪಕ್ಕಾ; ʻಭೀಮʼನದ್ದೇ ಆ್ಯಕ್ಷನ್ ಕಟ್!
ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ,ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ ಭೀಮನಿಗಿದೆ.
ಕೃಷ್ಣ ಸಾರ್ಥಕ್, ಜಗದೀಶ್ ಗೌಡ ನಿರ್ಮಾಣ ಮಾಡಿರುವ ʼಭೀಮʼ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆಯನ್ನ ಹುಟ್ಟಿಸಿದೆ.‘ಭೀಮ’ ಸಿನಿಮಾ ಆಗಸ್ಟ್ 9ರಂದು ತೆರೆಗೆ ಬರಲಿದೆ. ಅಂದಹಾಗೆ ಭೀಮ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚರಣ್ ರಾಜ್ ಸಂಗೀತ, ಕವಿರಾಜ್ ಸಾಹಿತ್ಯ ಹಾಗೂ ದುನಿಯಾ ವಿಜಯ್ ನಟನೆ. ಈ ಮೂವರ ಕಾಂಬಿನೇಷನ್‌ನಲ್ಲಿ ಬರ್ತಿರುವ ಹಾಡಿನ ಮೇಲೆ ನಿರೀಕ್ಷೆ ಹೆಚ್ಚಿದೆ.