ದುನಿಯಾ ವಿಜಯ್ ನಟಿಸಿ (Duniya Vijay), ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಆಗಸ್ಟ್ 9ರಂದು ರಿಲೀಸ್ ಆಗಿದೆ. ಸಲಗ ಸಿನಿಮಾದ ನಂತರ ಸಿನಿಪ್ರೇಕ್ಷಕರ ಮುಂದೆ ಮತ್ತೆ ಬಂದಿದ್ದಾರೆ ದುನಿಯಾ. ಹೀಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಒಂದರ್ಥದಲ್ಲಿ ಈ ವರ್ಷ ಬಂದಿರುವ ಮೊದಲ ಸ್ಟಾರ್ ನಟನ ಸಿನಿಮಾ. ದುನಿಯಾ ವಿಜಯ್ ಅವರ ನಟನೆಯ ‘ಭೀಮ’ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಲೇ ಇದೆ. ಅದರಂತೆಯೇ ನಿನ್ನೆ (ಆಗಸ್ಟ್ 15) ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದೆ. ನಿನ್ನೆ (ಆಗಸ್ಟ್ 15) 1.38 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಆರಂಭದ ಲೆಕ್ಕಾಚಾರ ಆಗಿದ್ದರಿಂದ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
‘ಭೀಮ’ ಈ ವಾರಾಂತ್ಯದ ಒಳಗೆ 20 ರಿಂದ 25 ಕೋಟಿ ರೂಪಾಯಿ ಒಳಗೆ ಕಲೆಕ್ಷನ್ ಮಾಡಬಹುದೆಂದು ಎಂದು ವರದಿಯಾಗಿದೆ. ಮೊದಲ ಮೂರು ದಿನದಲ್ಲಿ 12.3 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಆನಂತರ 3.8 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಈಗ 7ನೇ ದಿನದ ಕಲೆಕ್ಷನ್ ಸೇರಿ 17.38 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.
ಇನ್ನು ಮೂರು ದಿನಗಳಲ್ಲಿ ಕಮ್ಮಿ ಅಂದರೂ ಮೂರು ಕೋಟಿ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಭೀಮ ಕಲೆಕ್ಷನ್ 20 ಕೋಟಿ ರೂಪಾಯಿ ದಾಟಲಿದೆ.ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಹಾಗೂ ‘ಗೌರಿ’ ಸಿನಿಮಾ ರಿಲೀಸ್ ಆಗಿದೆ. ಆದರೆ, ಈ ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಅನ್ನೂ ಮೀರಿ ‘ಭೀಮ’ ಗಳಿಕೆ ಕಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: Duniya Vijay: ತೆಲುಗು ಬಳಿಕ ಕಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಬ್ಲಾಕ್ ಕೋಬ್ರಾ; ನಿರ್ದೇಶಕ ಯಾರು?
ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದ ‘ಭೀಮ’ ಚಿತ್ರದಲ್ಲಿ ಅನುಭವಿ ಕಲಾವಿದರ ಜೊತೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಒಂದಷ್ಟು ತಪ್ಪುಗಳ ನಡುವೆಯೂ ಮಾಸ್ ಪ್ರೇಕ್ಷಕರನ್ನು ಸಿನಿಮಾ ರಂಜಿಸ್ತಿದೆ. ಮತ್ತೆ ಚಿತ್ರಮಂದಿರಗಳಲ್ಲಿ ಶಿಳ್ಳೆ ಚಪ್ಪಾಳೆ ಸದ್ದು ಕೇಳುವಂತಾಗಿದೆ.
ಚಿತ್ರಮಂದಿರಗಳಲ್ಲಿ ‘ಭೀಮ’ನ ಕಾರುಬಾರು ಜೋರಾಗಿತ್ತು. ರಜಾ ದಿನ ಅಲ್ಲದೇ ವಾರದ ದಿನದಲ್ಲಿ(ಶುಕ್ರವಾರ) ಕೆಲವೆಡೆ ಶೋಗಳು ಹೌಸ್‌ಫುಲ್ ಆಗಿತ್ತು. ಸಂಜೆ ಮೇಲೆ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್‌ಗೂ ರೆಸ್ಪಾನ್ಸ್ ಚೆನ್ನಾಗಿತ್ತು.
ಇತ್ತೀಚೆಗೆ ರಿಲೀಸ್ ಆದ ಹಿಂದಿ ಸಿನಿಮಾಗಳು ಮೊದಲ ದಿನ ಇಷ್ಟು ಗಳಿಕೆ ಮಾಡಲು ವಿಫಲವಾಗಿವೆ. ‘ಭೀಮ’ ಕಾರಣದಿಂದ ಚಿತ್ರಮಂದಿರಗಳಿಗೆ ಹೊಸ ಹುರುಪು ಸಿಕ್ಕಿದೆ.
ಭೀಮ’ ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ಆಗಿದೆ. ‘ಸಲಗ’ ಸಿನಿಮಾ ಮೂಲಕ ಗೆಲುವು ಕಂಡಿರುವ ದುನಿಯಾ ವಿಜಯ್ ಈ ಬಾರಿ ಮತ್ತೊಂದು ಗೆಲುವಿನ ಭರವಸೆಯಲ್ಲಿದ್ದಾರೆ. ಈ ಸಿನಿಮಾ ನೋಡಲು ಕನಿಷ್ಠ 18 ವರ್ಷ ಆಗಿರಬೇಕಾಗಿರುವುದು ಕಡ್ಡಾಯ. ಅದಕ್ಕಿಂತ ಕಡಿಮೆ ವಯಸ್ಸಿನ ದುನಿಯಾ ವಿಜಯ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ ಈ ಸಿನಿಮಾಕ್ಕೆ ದೊರಕಿರುವುದು “ಎ” ಸರ್ಟಿಫಿಕೇಟ್.