ಬೆಂಗಳೂರು: ದುನಿಯಾ ವಿಜಯ್ ನಟಿಸಿ (Duniya Vijay), ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಆಗಸ್ಟ್ 9ರಂದು ರಿಲೀಸ್ ಆಗಿದೆ. ಸಲಗ ಸಿನಿಮಾದ ನಂತರ ಸಿನಿಪ್ರೇಕ್ಷಕರ ಮುಂದೆ ಮತ್ತೆ ಬಂದಿದ್ದಾರೆ ದುನಿಯಾ. ಹೀಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಒಂದರ್ಥದಲ್ಲಿ ಈ ವರ್ಷ ಬಂದಿರುವ ಮೊದಲ ಸ್ಟಾರ್ ನಟನ ಸಿನಿಮಾ. ದುನಿಯಾ ವಿಜಯ್ ಅವರ ನಟನೆಯ ‘ಭೀಮ’ ಮೊದಲ ದಿನ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ವೀಕೆಂಡ್ನಲ್ಲಿ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಇನ್ನು, ಮುಂದಿನ ವಾರ ಆಗಸ್ಟ್ 15 ಕೂಡ ಇದೆ. ಸರ್ಕಾರಿ ರಜೆಯ ಕಾರಣಕ್ಕೆ ಜನರು ಥಿಯೇಟರ್ಗೆ ಕಾಲಿಡುತ್ತಾರೆ.
ಇತ್ತೀಚೆಗೆ ರಿಲೀಸ್ ಆದ ಹಿಂದಿ ಸಿನಿಮಾಗಳು ಮೊದಲ ದಿನ ಇಷ್ಟು ಗಳಿಕೆ ಮಾಡಲು ವಿಫಲವಾಗಿವೆ. ‘ಭೀಮ’ ಕಾರಣದಿಂದ ಚಿತ್ರಮಂದಿರಗಳಿಗೆ ಹೊಸ ಹುರುಪು ಸಿಕ್ಕಿದೆ.
`ಭೀಮ’ ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ಆಗಿದೆ. ‘ಸಲಗ’ ಸಿನಿಮಾ ಮೂಲಕ ಗೆಲುವು ಕಂಡಿರುವ ದುನಿಯಾ ವಿಜಯ್ ಈ ಬಾರಿ ಮತ್ತೊಂದು ಗೆಲುವಿನ ಭರವಸೆಯಲ್ಲಿದ್ದಾರೆ. ಈ ಸಿನಿಮಾ ನೋಡಲು ಕನಿಷ್ಠ 18 ವರ್ಷ ಆಗಿರಬೇಕಾಗಿರುವುದು ಕಡ್ಡಾಯ. ಅದಕ್ಕಿಂತ ಕಡಿಮೆ ವಯಸ್ಸಿನ ದುನಿಯಾ ವಿಜಯ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ ಈ ಸಿನಿಮಾಕ್ಕೆ ದೊರಕಿರುವುದು “ಎ” ಸರ್ಟಿಫಿಕೇಟ್.
ಇದನ್ನೂ ಓದಿ: Duniya Vijay: ಹೇಗಿದೆ ‘ಭೀಮ’ ಸಿನಿಮಾ? ಪ್ರೇಕ್ಷಕರು ಹೇಳೋದೇನು?
ಸಿನಿಮಾದ ಬಗ್ಗೆ ಹೇಳುವುದಾದರೆ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸಾರ್ಥಕ್ ಈ ಸಿನಿಮಾಗೆ ಬಂಡವಾಳ ಹೂಡಿಸಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸೆಸ್‌ನಲ್ಲಿರುವ ವಿಜಿ “ಭೀಮʼ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.