ಬೆಂಗಳೂರು: ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ದೇಶ-ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟು ಜನಪ್ರಿಯರಾಗಿದ್ದಾರೆ. ಆದರೆ, ಆರಂಭದ ದಿನಗಳಲ್ಲಿ ಸಿನಿಮಾದ ಸಂಗೀತ ನಿರ್ದೇಶಕರೊಂದಿಗೂ ಕೆಲಸ ಮಾಡಿದ್ದರು. ಆ ವೇಳೆ ತಮಗೆ ಮೋಸ ಆಗಿದೆ ಎಂದು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ (Hamsalekha) ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ʻನಿಜವಾದ ನಾದಬ್ರಹ್ಮ ವಿಠಲ ಒಬ್ಬನೇ. ನಮ್ಮಲ್ಲಿ ಕೆಲವರಿಗೆ ಏನೋನೋ ಬಿರುದು ಕೊಡುತ್ತಾರೆ. ಏನು ಕೊಡಬೇಕು ಎಂದೇ ಅರ್ಥ ಆಗಲ್ಲʼʼಎಂದು ನೇರವಾಗಿಯೇ ಹೇಳಿದ್ದಾರೆ.
ಈ ಬಗ್ಗೆ ಗಾಯಕ ಶಂಕರ್ ಶಾನುಭಾಗ್ ಮಾತನಾಡಿ ʻʻಹಂಸಲೇಖ ಅವರಿಗೆ ಹೆಚ್ಚು ಕಡಿಮೆ ನಾನು 8-10 ಹಾಡುಗಳನ್ನು ಹಾಡಿದ್ದೆ. ಆದರೆ ಪೇಮೆಂಟ್ ಬಂದಿರಲಿಲ್ಲ. ತುಂಬ ಸಲ ಅವರ ಮುಂದೆ ಹೋಗಿ ನಿಂತೆ. ಅದು ಅಲ್ಲದೇ ಆಗ ತುಂಬ ತೊಂದರೆಯಲ್ಲಿದ್ದೆ. ಆಗ ತಂಗಿಯರ ಮದುವೆ ಬೇರೆ ಮಾಡಿಸಬೇಕಿತ್ತು.ಆಗ ಹಂಸಲೇಖರ ಬಳಿ ಪೇಮೆಂಟ್ ಕೇಳಿದಾಗ, ಕೊಟ್ರಾಯ್ತು ಕಣೋ! ಎನ್ನುತ್ತಿದ್ದರು. ಐದನೇ ಸಲ ಹೋದಾಗ, ಅವರ ಮೂಡ್ ಸರಿ ಇಲ್ಲ ಅನ್ಸತ್ತೆ.. ಎಷ್ಟು ಕೋಟಿ ಕೊಡಬೇಕೋ ನಿನಗೆ ಅಂದು ಬಿಡೋದಾ? ಆ ಮೇಲೆ ಕೈ ಮುಗಿದು ಅಲ್ಲಿಂದ ಬಂದು ಬಿಟ್ಟೆ ಎಂದರು.
ʻʻಮೊದಲನೇದಾಗಿ ನಾದಬ್ರಹ್ಮ ಎಂಬ ಪದಕ್ಕೆ ಅರ್ಥವೇ ಇಲ್ಲ. ನಿಜವಾದ ನಾದಬ್ರಹ್ಮ ವಿಠಲ ಒಬ್ಬನೇ. ನಮ್ಮಲ್ಲಿ ಕೆಲವರಿಗೆ ಏನೋನೋ ಬಿರುದು ಕೊಡುತ್ತಾರೆ. ಏನು ಕೊಡಬೇಕು ಎಂದೇ ಅರ್ಥ ಆಗಲ್ಲ. ಆದರೆ ಅದನ್ನ ಸ್ವೀಕರಿಸುತ್ತಾರಲ್ಲ…! ಇದು ನಮ್ಮ ಚಲನಚಿತ್ರದ ದುರಂತಗಳು. ಕನ್ನಡದಲ್ಲಿ ಅಸಂಖ್ಯಾತ ಪ್ರತಿಭೆಗಳಿವೆ. ಒಳ್ಳೆಯ ಹಾಡುಗಾರರಿದ್ದಾರೆ. ತುಂಬ ಜನ ಇದ್ದಾರೆ. ಇದೀಗ ಸಂಗೀತ ಕಲಿಯಬೇಕು ಎಂತಿಲ್ಲ. ಯಾರು ಬೇಕಾದರೂ ಹಾಡುತ್ತಾರೆ. ಈ ರಿಯಾಲಿಟಿ ಶೋ ದುರಂತ ಒಂದೆರಡಲ್ಲ. ಏಳೇಳು ಜನುಮದ ಲವ್ ಮ್ಯೂಸಿಕ್ ಡೈರಕ್ಟರ್ ವಿ ಮನೋಹರ್. ಈ ಹಾಡಿನ ಟ್ರ್ಯಾಕ್ ಹಾಡಿದ್ದು ನಾನು. ಅದನ್ನ ಒಂದು ರಿಯಾಲಿಟಿ ಶೋನಲ್ಲಿ ಒಬ್ಬರು ಹಾಡಿದ್ದರು. ʻಮಹಾಗುರುಗಳುʼ , ಹಾಡು ಮುಗಿದ ಮೇಲೆ ಕಮೆಂಟ್ ಮಾಡಿದ್ದು ಹೀಗೆ. ಫ್ರಿ ಬಿಟ್ಟು ಬಿಟ್ಟೆ ಹಾಡು ಅಂತ ಎಂದು ಹಸಿ ಸುಳ್ಳು ಹೇಳುತ್ತಾರೆ. ಆ ಸಮಯದಲ್ಲಿ ಅವರು ಇರಲೇ ಇಲ್ಲ. ಬೇರೆಯವರು ಮಾಡಿದ್ದನ್ನು ನಾನು ಮಾಡಿದೆ ಎಂದು ಹಸಿ ಸುಳ್ಳು ಹೇಳುತ್ತಾರೆ. ಆ ಹಾಡಿನ ಕ್ರೆಡಿಟ್ ವಿ ಮನೋಹರ್‌ಗೆ ಹೋಗಬೇಕುʼʼಎಂದರು.
ಇದನ್ನೂ ಓದಿ: Music Composer Hamsalekha : ಜೈನ ಫಿಲಾಸಫಿ ಬುಲ್‌ಶಿಟ್ ಎಂದು ಅವಮಾನಿಸಿದ ಹಂಸಲೇಖ ಈಗ ಕ್ಷಮಿಸಿ ಅಂತಿದ್ದಾರೆ!
ಇದನ್ನೂ ಓದಿ: Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್
ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅವರ ಬಗ್ಗೆನೂ ಗಂಭೀರ ಆರೋಪ ಮಾಡಿದ್ದಾರೆ. ಅವಕಾಶಕ್ಕಾಗಿ ಅವರ ಕಾಲು ಹಿಡಿದು ಜಾಡಿಸಿ ಒದ್ದರು ನನಗೆ ಎಂದು ಇದೇ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗೇ ಮತ್ತೊಬ್ಬ ಸಂಗೀತ ನಿರ್ದೇಶಕ ಮೈಸೂರು ಮೋಹನ್ ಅವರ ಕೂಡ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ‘ನಂಜುಂಡ’ ಸಿನಿಮಾಗಾಗಿ ಇವರೊಂದಿಗೆ ಒಂದು ತಿಂಗಳು ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಆರು ಸಾಂಗ್‌ಗಳಿಗೆ ಟ್ರ್ಯಾಕ್ ಮತ್ತು ಕೋರಸ್ ಹಾಡಿದ್ದರೂ ಇದೂವರೆಗೂ ಒಂದು ರೂಪಾಯಿ ಪೇಮೆಂಟ್ ಕೂಡ ಬಂದಿಲ್ಲ ಎಂದಿದ್ದಾರೆ. ವಿ ಮನೋಹರ್ ಮಾತ್ರ ಕಲಾವಿದರ ಮೇಲೆ ಹೊಟ್ಟೆ ಮೇಲೆ ಹೊಡಿಯುವ ಕೆಲಸ ಮಾಡಿಲ್ಲ ಎಂದು ಹೇಳಿದರು.