Site icon Vistara News

Harish Raj: ದಾರೀಲಿ ನಟ ಹರೀಶ್‌ ರಾಜ್‌ಗೆ ಜನ ಏನಂತ ಕರೆಯುತ್ತಿದ್ದರು? ಅವರೇ ಹೇಳಿದ್ದಿಷ್ಟು

Harish Raj serial Journey shares in interview

ಬೆಂಗಳೂರು: ಹರೀಶ್‌ ರಾಜ್‌ ನಾಯಕನಾಗಿ ನಟಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಔಟ್‌ ಆ್ಯಂಡ್‌ ಔಟ್‌ ಹಾರರ್‌-ಥ್ರಿಲ್ಲರ್‌ “ಪ್ರೇತ’ ಸಿನಿಮಾ ಇಂದು (ಫೆ.23) ರಾಜ್ಯಾದ್ಯಂತ ತೆರೆ ಕಂಡಿದೆ. ಪ್ರೇತ’ ಸಿನಿಮಾದಲ್ಲಿ ಹರೀಶ್‌ ರಾಜ್‌ ಅವರೊಂದಿಗೆ ಅಮೂಲ್ಯ ಭಾರದ್ವಾಜ್‌, ಅಹಿರಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಪ್ರೇತ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್
ತೊಟ್ಟಿದ್ದಾರೆ. ಇದೀಗ ಹರೀಶ್‌ ರಾಜ್‌ ತಮ್ಮ ಸೀರಿಯಲ್‌ ಜರ್ನಿ ಹೇಗೆ ಇತ್ತು ಎಂಬುದರ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ.

ಹರೀಶ್‌ ರಾಜ್‌ ಮಾತನಾಡಿ ʻʻನಾನು ಅಭಿನಯಿಸಿದ ʻದಂಡಪಿಂಡಗಳುʼ ಧಾರಾವಾಹಿ ಬರುವ ಸಮಯದಲ್ಲಿ ಎಲ್ಲಿ ಹೋದರು ʻದಂಡ ಪಿಂಡʼ ಎಂದೇ ಕರೆಯುತ್ತಿದ್ದರು. ಅದರಲ್ಲಿ ಬರಗೆಟ್ಟ ರಮೇಶ ಪಾತ್ರ ಆಗಿತ್ತು. ಅದರಲ್ಲಿ ಪ್ರತಿ ಪಾತ್ರದಲ್ಲಿ ಐದು ಜನ ಹುಡುಗರು ಒಂದೊಂದು ಸಾಧನೆ ಮಾಡುತ್ತಾರೆ. ಆದರೆ ಈ ಬರಗೆಟ್ಟ ರಮೆಶ ಮಾತ್ರ ನಿರ್ದೇಶಕನಾಗುತ್ತಾನೆ. ಇದು 2000 ಇಸವಿಯ ಕಥೆ. ಆದರೆ ಅಂದು ನಾನು ನಿರ್ದೇಶಕ ಆಗುತ್ತೀನಾ ಎಂದು ಅಂದುಕೊಂಡಿರಲಿಲ್ಲ. ಈಗ ಅದು ನಿಜ ಆಗಿದೆ. ಪಾತ್ರದಲ್ಲಿ ನಿರ್ದೇಶಕ ಆದವನು ಇದೀಗ ರಿಯಲ್‌ ಲೈಫ್‌ನಲ್ಲಿ ಆಗಿದ್ದೇನೆʼʼಎಂದಿದ್ದಾರೆ.

ಇದನ್ನೂ ಓದಿ: Actor Prakash Raj: ಮಾರ್ಚ್ 15ಕ್ಕೆ ಪ್ರೇಕ್ಷಕರ ಎದುರು ಬರ್ತಿದೆ ʻಫೋಟೋʼಸಿನಿಮಾ!

ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನ ಪ್ರೇತ ಸಿನಿಮಾಗೆ ಇದೆ. ಪ್ರಮೋದ್ ಮರವಂತೆ, ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪ್ರೇತ ಸಿನಿಮಾವನ್ನು ಶಾಲಿನಿ ಆರ್ಟ್ಸ್ ನಡಿ ಜಾಕ್ ಮಂಜು ರಾಜ್ಯಾದ್ಯಂತ ರಿಲೀಸ್ ಮಾಡಿದ್ದಾರೆ.

Exit mobile version