Site icon Vistara News

Hombale Films: ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಸಿನಿಮಾದಲ್ಲಿ ಇರಲಿದ್ಯಾ ಹಿಂದಿ ಹೇರಿಕೆ ವಿವಾದ? ಕೀರ್ತಿ ಸುರೇಶ್‌ ಹೇಳಿದ್ದೇನು?

Hombale Films Keerthy Suresh Talks 'Raghu Thatha' and Anti-Hindi Speculations

ಬೆಂಗಳೂರು: `ಕೆಜಿಎಫ್‌ʼ ಸರಣಿ, ʼಕಾಂತಾರʼ, ʼಸಲಾರ್‌ʼ ಮುಂತಾದ ಚಿತ್ರಗಳನ್ನು ನಿರ್ಮಿಸಿ ದೇಶಾದ್ಯಂತ ಸಂಚಲನ ಸೃಷಿಸಿದ ಕನ್ನಡದ ಹೊಂಬಾಳೆ ಫಿಲ್ಮ್ಸ್‌ನ (Hombale Films) ಮೊದಲ ತಮಿಳು ಸಿನಿಮಾ ‘ರಘು ತಾತಾ’ (Raghu Thatha). ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ನ ಮೊದಲ ಈ ತಮಿಳು ಸಿನಿಮಾದಲ್ಲಿ ಬಹುಭಾಷಾ ನಟಿ, ಪ್ರತಿಭಾವಂತ ಕಲಾವಿದೆ ಕೀರ್ತಿ ಸುರೇಶ್‌ (Keerthy Suresh) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಕಾಮಿಡಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಿದೆ. ಎನ್‌ಸಿಸಿ ಕೆಡೆಟ್ ಆಗಿ ಚಿತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ನೋಡಿದಾಗ ಹಿಂದಿ ಹೇರಿಕೆ ವಿರುದ್ಧ ನಾಯಕಿ ಹೋರಾಟ ಮಾಡುವುದನ್ನು ನೋಡಬಹುದು.

ಆಗಸ್ಟ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಸಮಾರಂಭದಲ್ಲಿ ಮಾತನಾಡಿದ ಕೀರ್ತಿ, ” ‘ರಘು ತಾತಾ’ ” ಚಿತ್ರದಲ್ಲಿ ನಟಿಸುವ ಬಗ್ಗೆ ಮೊದಲು ಹಲವಾರು ಪ್ರಶ್ನೆಗಳು ಇತ್ತು. ಹಿಂದೆ ಹೇರಿಕೆ ಅನ್ನೋದನ್ನು ಇಟ್ಟುಕೊಂಡು ಕಥೆಯನ್ನು ಕೊಂಡು ಹೋಗಿದ್ದಾರೆ. ಈ ಚಿತ್ರದಲ್ಲಿ ಯಾವುದೇ ವಿವಾದ, ರಾಜಕೀಯ ಅಂಶ ಇಲ್ಲ. ಫನ್ ಮಾತ್ರ ಇದೆ. ಇದೊಂದು ಕಾಮೆಡಿ ಎಂಟರ್‌ಟೈನರ್ ಸಿನಿಮಾ. ಟೀಸರ್‌ನಲ್ಲಿ ಹಿಂದಿ ಹೇರಿಕೆ ಬಗ್ಗೆ ನೋಡಿರಬಹುದು. ಮುಖ್ಯವಾಗಿ ಇದು ಹೇರಿಕೆಯ ಬಗ್ಗೆ ಇರುವ ಕಥೆ. ಹೆಣ್ಣುಮಕ್ಕಳ ಮೇಲಿನ ಹೇರಿಕೆಯ ಕುರಿತಾದ ಸಿನಿಮಾʼʼಎಂದರು..

‘ರಘು ತಾತಾ’ ಚಿತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಜೊತೆಗೆ MS ಭಾಸ್ಕರ್, ದೇವದರ್ಶಿನಿ ಮತ್ತು ರವೀಂದ್ರ ವಿಜಯ್ ಪೋಷಕ ತಾರಾಗಣದಲ್ಲಿದ್ದಾರೆ. ಸೀನ್ ರೋಲ್ಡನ್ ಬರೆದಿರುವ ಈ ಚಿತ್ರವನ್ನು ಸುಮನ್ ಕುಮಾರ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ʼʼರಘುತಾತಾ’ ಮಹಿಳಾ ಪ್ರಧಾನ ಕಥೆಯನ್ನೊಳಗೊಂಡ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಅಸಿತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼ ಎಂದು ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. 

ಈ ಸಿನಿಮಾ ಅಗಸ್ಟ್‌ 15ರಂದು ತೆರೆಗೆ ಅಪ್ಪಳಿಸಲಿದೆ. ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್‌ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ʼಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.

Exit mobile version