ಬೆಂಗಳೂರು: ಈ ಬಾರಿ ಆರ್‌ಸಿಬಿ ತಂಡ ನಾಲ್ಕು ಪಂದ್ಯಗಳಲ್ಲಿ ಮೂರು ಸೋತು, ಒಂದು ಮ್ಯಾಚ್ ಗೆದ್ದಿದೆ. ಇದರ ಬೆನ್ನಲ್ಲೇ ದರ್ಶನ್ (Actor Darshan) ಕೆಲ ಫ್ಯಾನ್ಸ್ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರನ್ನು ದೂರಿದ್ದರು. ಈಗ ನವರಸ ನಾಯಕ ಜಗ್ಗೇಶ್ ಅವರು ಕಿಡಿಗೇಡಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. .ʻʻಹೆಣ್ಣುಕುಲಕ್ಕೆ ನೋವುಕೊಟ್ಟವ ಉದ್ದಾರ ಆದ ಇತಿಹಾಸವಿಲ್ಲʼʼ ಎಂದು ಬರೆದುಕೊಂಡಿದ್ದಾರೆ.
ಜಗ್ಗೇಶ್ ಅವರು ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗೂ ತಾಯಿ ಇರಬೇಕು. ಹಾಗೂ ತಾಯಿ ಬೆಲೆ ಗೊತ್ತಿರಬೇಕು. ಒಂದುವೇಳೆ ತಾಯಿ ಹೆಣ್ಣು ಗೌರವ ಇಲ್ಲ ಎಂದರೆ ಕಂಡಿತ ಅಂಥವರು ಮನುಗುಲಕ್ಕೆ ಅನರ್ಹ! ಪುನೀತನ ಮಡದಿ ಅನಾಥಳಲ್ಲಾ. ತನ್ನ ಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ. ಹೆಣ್ಣುಕುಲಕ್ಕೆ ನೋವುಕೊಟ್ಟವ ಉದ್ದಾರ ಆದ ಇತಿಹಾಸವಿಲ್ಲಾʼʼ ಎಂದು ಬರೆದುಕೊಂಡಿದ್ದಾರೆ.
ಪುನೀತ್ ಜತೆ ಜಗ್ಗೇಶ್ ತುಂಬ ಆತ್ಮೀಯರಾಗಿರುತ್ತಿದ್ದರು. . ಹೀಗಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತಾಡಿದ್ದಕ್ಕೆ ಜಗ್ಗೇಶ್ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Ashwini Puneeth Rajkumar: ಕೀಳುಮಟ್ಟದ ಟ್ವೀಟ್ ಬಗ್ಗೆ ಸಮಾಧಾನವಾಗಿಯೇ ಉತ್ತರ ಕೊಟ್ಟ ದೊಡ್ಮನೆ ಸೊಸೆ!
ಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗು ತಾಯಿ ಇರಬೇಕು ಹಾಗು ತಾಯಿಬೆಲೆ ಗೊತ್ತಿರಬೇಕು..ಒಂದುವೇಳೆ ತಾಯಿ ಹೆಣ್ಣು ಗೌರವ ಇಲ್ಲ ಎಂದರೆ ಕಂಡಿತ ಅಂಥವರು ಮನುಗುಲಕ್ಕೆ ಅನರ್ಹ!
— ನವರಸನಾಯಕ ಜಗ್ಗೇಶ್(modi ka parivar) (@Jaggesh2) April 7, 2024
ಪುನೀತನ ಮಡದಿ ಅನಾಥಳಲ್ಲಾ ತನ್ನಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ.ಹೆಣ್ಣುಕುಲಕ್ಕೆ ನೋವುಕೊಟ್ಟವ ಉದ್ದಾರ ಆದಾಗ ಇತಿಹಾಸವಿಲ್ಲಾ!
ಕೀಳುಮಟ್ಟದ ಟ್ವೀಟ್ ಬಗ್ಗೆ ಸಮಾಧಾನವಾಗಿಯೇ ಉತ್ತರ ಕೊಟ್ಟ ದೊಡ್ಮನೆ ಸೊಸೆ!
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು. ʻʻಬೇರೆ ಆಯ್ಕೆ ಇಲ್ಲ.. ಜೀವನ ಅಂದುಕೊಂಡಷ್ಟು ಸುಲಭವಿಲ್ಲ, ಜೀವನ ಹೇಗೋ ನಡೆದುಕೊಂಡು ಹೋಗುತ್ತಿದೆ. ಕಷ್ಟ ಇದ್ದರೂ ಎಲ್ಲವನ್ನು ಸ್ವೀಕರಿಸಬೇಕುʼʼಎಂದು ಹೇಳಿದ್ದರು.
ಏನಿದು ಘಟನೆ?
ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್‌ಸಿಬಿ ಸೋಲುತ್ತಿದೆ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಕೀಳು ಮಟ್ಟದ ಟ್ವೀಟ್ ಮಾಡಿತ್ತು. ಆರ್‌ಸಿಬಿ ಸೋಲುವುದಕ್ಕೂ, ಅಶ್ವಿನಿ ಪುನೀತ್ ರಾಜ್ಕುಮಾರ್ಗೂ ಏನು ಸಂಬಂಧ? ಎಂದು ಅಪ್ಪು ಫ್ಯಾನ್ಸ್ ಆಕ್ರೋಶ ಹೊರಹಾಕಿ, ಈಗಾಗಲೇ ಅಪ್ಪು ಫ್ಯಾನ್ಸ್ ಕಾನೂನು ಕ್ರಮ ಮುಂದಾಗಿದ್ದರು.