Site icon Vistara News

Kannada New Movie: ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾದಲ್ಲಿ ಖ್ಯಾತ ಆ್ಯಂಕರ್​ ನಟನೆ!

Kannada New Movie Fire Fly Sheetal Shetty

ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ‘ಫೈರ್ ಫ್ಲೈ’ (Kannada New Movie) ಬಿಡುಗಡೆಗೆ ಸಜ್ಜಾಗಿದೆ.‌ ನಿವೇದಿತಾ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಬ್ಯಾನರ್ ಮೂಲಕ ಮೂಡಿ ಬಂದಿರುವ ‘ಫೈರ್ ಫ್ಲೈ’ ಚಿತ್ರಕ್ಕೀಗ ಖ್ಯಾತ ನಿರೂಪಕಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟನೆ ಬಿಟ್ಟು ನಿರ್ದೇಶನಕ್ಕಿಳಿದಿದ್ದ ಶೀತಲ್ ಇದೀಗ ಮತ್ತೊಮ್ಮೆ ನಟನೆಯತ್ತ ಕಂಬ್ಯಾಕ್ ಮಾಡಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರೀಗ, ನಿವೇದಿತಾ ನಿರ್ಮಾಣದ ಚಿತ್ರದ ಭಾಗವಾಗಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಫೈರ್ ಫ್ಲೈ ಚಿತ್ರದಲ್ಲಿ ವಂಶಿ ಹೀರೊ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಪುನೀತ್ ರಾಜ್‌ಕುಮಾರ್‌ ಅವರ ‘ಪಿಆರ್ ಕೆ ಪ್ರೊಡಕ್ಷನ್ಸ್’ ನಿರ್ಮಾಣದ ಮಾಯಾಬಜಾರ್ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣ ಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ಇದನ್ನೂ ಓದಿ: Kannada New Movie: ಹಳ್ಳಿಗಳನ್ನು ಉಳಿಸುವ ಹುಡುಗರ ಕಥೆ ʻಸಂಭವಾಮಿ ಯುಗೇ ಯುಗೇʼ: ಇದೇ ಜೂನ್‌ 21ಕ್ಕೆ ತೆರೆಗೆ!

ಫೈರ್ ಫ್ಲೈನಲ್ಲಿ ಕೆಲಸ ಮಾಡಿದ ಅನುಭವವನ್ನು ಶೀತಲ್‌ ಹಂಚಿಕೊಂಡಿದ್ದು ಹೀಗೆ. ʻʻವಂಶಿ ಸೆಟ್‌ಗೆ ಚೆನ್ನಾಗಿ ತಯಾರಾಗಿ ಬಂದರು. ಚೊಚ್ಚಲ ನಿರ್ದೇಶಕರಂತೆ ಕಾಣುವುದಿಲ್ಲ. ಅವರ ಕಥೆ ಮತ್ತು ಪಾತ್ರದ ನಿರೂಪಣೆಯಿಂದ ಹಿಡಿದು ಎಲ್ಲಾ ಕಲಾವಿದರನ್ನು ಸರಾಗವಾಗಿ ನಿಭಾಯಿಸುವವರೆಗೆ ಅವರು ಗಮನಿಸಬೇಕಾದ ಉತ್ತಮ ಪ್ರತಿಭೆ. ನಾನು ಇತ್ತೀಚೆಗೆ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದೇನೆ ಮತ್ತು ನಾನು ಫ್ರೇಮ್‌ಗಳನ್ನು ನೋಡಿದಾಗ, ಅದು ಸುಂದರವಾಗಿ ಬಂದಿದೆʼʼಎಂದರು. ನಿವೇದಿತಾ ಶಿವರಾಜ್‌ಕುಮಾರ್, ಶ್ರೀ ಮುತ್ತು ಸಿನಿ ಸರ್ವಿಸಸ್ ಫೈರ್‌ಫ್ಲೈನೊಂದಿಗೆ ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮಹಿಳಾ ನಿರ್ಮಾಪಕರನ್ನು ಹೊಂದುವುದು ಎಷ್ಟು ಮುಖ್ಯ ಎಂಬ ಪ್ರಶ್ನೆಗೆ ಶೀತಲ್‌ ಮಾತನಾಡಿ ʻʻ ನನಗೆ ಹೆಣ್ಣು ಅಥವಾ ಪುರುಷ ನಿರ್ಮಾಪಕ ಎಂಬ ಭೇದವಿಲ್ಲ. ನಿವೇದಿತಾ ಮೇಡಂ ಅವರು ಚಿತ್ರರಂಗದ ಕುಟುಂಬದ ಹಿನ್ನೆಲೆಯಿಂದ ಬಂದವರು ಹಾಗಾಗಿ ಅವರಿಗೆ ಸಿನಿಮಾದ ಬಗ್ಗೆ ಒಳ್ಳೆಯ ನಿಲುವು ಇದೆ. ಅವರು ಫೈರ್ ಫ್ಲೈ ತಂಡವನ್ನು ಬೆಂಬಲಿಸಿದ್ದಾರೆ. ತಂಡಕ್ಕೆ ಯಾವಾಗಲೂ ಬೆನ್ನೆಲುಬಾಗಿದ್ದಾರೆ. ಸಿನಿಮಾದುದ್ದಕ್ಕೂ ನಾನು ತುಂಬಾ ಪ್ರಬುದ್ಧ ಪಾತ್ರವನ್ನು ನಿರ್ವಹಿಸುತ್ತಿದ್ದೇನೆʼʼಎಂದರು.

ಶೀತಲ್ ಶೆಟ್ಟಿ ಅವರ ಬಗ್ಗೆ ವಂಶಿ ಕೃಷ್ಣ ಮಾತನಾಡಿ, ” ಫೈಯರ್ ಪ್ಲೈ” ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ‘ದಿವ್ಯ’ ಎಂಬ ತುಂಬಾ ಪ್ರಬುದ್ಧವಾದ ಹಾಗು ಲವಲವಿಕೆಯಿಂದ ಕೊಡಿರುವ ಪಾತ್ರದಲ್ಲಿ ಅಭಿನಯಿಸಿದ್ದಾರೆ , ಈ ಪಾತ್ರದ ಮೂಲಕ ಸಿನಿಮಾದುದ್ದಕ್ಕೂ ತಮ್ಮ ಮುದ್ದಾದ ನಟನೆ ಮತ್ತು ತಿಳಿಹಾಸ್ಯದ ಮೂಲಕ ಕೊನೆಯವರೆಗೂ ಕಥೆಯ ಜತೆಯಲ್ಲಿ ಪಯಣಿಸುತ್ತಾರೆ. ಮೈಸೂರಿನಲ್ಲಿ ನಡೆದ ಚಿತ್ರೀಕರಣದ ಸಮಯದಲ್ಲಿ ಚಿತ್ರ ತಂಡಕ್ಕೆ ಒಳ್ಳೆಯ ಸಹಕಾರ ಮತ್ತು ಸಲಹೆ ನೀಡಿದರು. ದಿವ್ಯ ಎಂಬ ಪಾತ್ರವೂ ಶೀತಲ್ ಶೆಟ್ಟಿ ಅವರಿಗೆ ಹೇಳಿ ಮಾಡಿಸಿದ ರೀತಿಯಲ್ಲಿ ಇತ್ತು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಟ್ಟಿದ್ದಾರೆ ಎಂದಿದ್ದಾರೆ,

ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆದಿದ್ದಾರೆ. ಕಂಪ್ಲೀಟ್ ಶೂಟಿಂಗ್ ಮುಗಿಸಿರೋ ಫೈರ್ ಫ್ಲೈ ಚಿತ್ರ ಬೆಳಕಿನ ಹಬ್ಬ ದೀಪಾವಳಿಗೆ ದರ್ಶನ ಕೊಡಲಿದೆ.

Exit mobile version