Site icon Vistara News

Kannada New Movie: ಬಿಡುಗಡೆಗೆ ಸಜ್ಜಾದ ʻನಾ ನಿನ್ನ ಬಿಡಲಾರೆʼ: ಅನಂತನಾಗ್ ಸಿನಿಮಾಗೆ ನಂಟಿದೆಯಾ?

Kannada New Movie Naa Ninna Bidalaare Movie shoot compleate

ಬೆಂಗಳೂರು: ವಿಭಿನ್ನವಾದ ಕಂಟೆಂಟ್‌, ಪ್ರತಿಭಾವಂತ ಕಲಾವಿದರು ಹಾಗೂ ನುರಿತ ತಂತ್ರಜ್ಞರು ತಮ್ಮಲ್ಲಿರುವಂತಹ ವಿಭಿನ್ನವಾದoತಹ ಪ್ರತಿಭೆ ಹಾಗೂ ಪ್ರಯತ್ನಗಳೊಂದಿಗೆ ಹೊಸ ರೀತಿಯ ಸಿನಿಮಾಗಳನ್ನ ಮಾಡುತ್ತಲೇ ಬಂದಿದ್ದಾರೆ.
ಈಗ ಚಿತ್ರ ರಂಗದಲ್ಲಿ ಇರುವಂತವರು ಮೊದಲು ಬಂದಾಗ ಹೊಸಬರಾಗಿದ್ದರು. ಈಗ (Kannada New Movie) ನಿಧಾನವಾಗಿ ತಮ್ಮ ಒಳ್ಳೆಯ ಸಿನಿಮಾಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ಸ್ಯಾಂಡಲ್‌ವುಡ್‌ ಮತ್ತೊಂದು ಯುವ ತಂಡ, ಉತ್ಸಾಹಿ ಕಲಾವಿದರ ಬಳಗ ಬಂದು ನಿಂತಿದೆ. ಅದುವೇ ʻನಾ ನಿನ್ನ ಬಿಡಲಾರೆʼ!

ಈಗಾಗಲೇ ಬಿಡುಗಡೆಯಾಗಿರುವ ʻನಾ ನಿನ್ನ ಬಿಡಲಾರೆʼ ಚಿತ್ರದ ಫಸ್ಟ್ ಲುಕ್, ಒಂದು ಮಟ್ಟದ ಸುದ್ದಿ ಮಾಡಿದ್ದು ಟೈಟಲ್ ತುಂಬಾ ಕುತೂಹಲವನ್ನ ಕೆರಳಿಸಿದೆ. ಮೇಲಾಗಿ ನಾ ನಿನ್ನ ಬಿಡಲಾರೆ ಅನ್ನುವಂತಹ ಒಂದು ಶೀರ್ಷಿಕೆ ಬಗ್ಗೆ ನಾವು ಮಾತನಾಡಿದರೆ ಬಹಳ ವರ್ಷಗಳಿಂದ ಇದೇ ಶೀರ್ಷಿಕೆಯಲ್ಲಿ ಬರುವಂತಹ ಸಿನಿಮಾ ರೆಕಾರ್ಡ್ ಮಾಡಿದ್ದು ನೆನಪಿಸಿಕೊಳ್ಳಬಹುದು.

ಆದರೆ ಹಿರಿಯ ನಟ ಅನಂತನಾಗ್ ಹಾಗೂ ಜ್ಯೂಲಿ ಲಕ್ಷ್ಮಿ ರವರ ಕಾಂಬಿನೇಷನಲ್ಲಿ ಬಂದಂತಹ ʻನಾ ನಿನ್ನ ಬಿಡಲಾರೆʼ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಇದು ಹೊಸ ರೀತಿಯ ಕಂಟೆಂಟ್‌ ಹೊಂದಿದೆ ಎನ್ನುವುದು ಚಿತ್ರತಂಡದ ಮಾತು. ಇತ್ತೀಚೆಗಷ್ಟೇ ʻನಾ ನಿನ್ನ ಬಿಡಲಾರೆʼ ಚಲನಚಿತ್ರದ ಚಿತ್ರಿಕರಣ ಮುಗಿದು ಕುಂಬಳಕಾಯಿಯನ್ನ ಒಡೆಯಲಾಗಿದೆ.

ಇದನ್ನೂ ಓದಿ: Kannada New Movie: ಕಬಡ್ಡಿ ಆಟಗಾರನ ದುರಂತ ಕಥೆ ‘ಪರ್ಶು’: ಸಪ್ತಮಿಗೌಡ ತಂದೆ ಸಾಥ್!

ಕಮಲ ಉಮಾ ಭಾರತಿ ನಿರ್ಮಾಣ ಸಂಸ್ಥೆಯಲ್ಲಿ ಬರುತ್ತಿರುವಂತಹ, ಶ್ರೀಮತಿ ಭಾರತಿ ಬಾಳಿ ನಿರ್ಮಾಣದ, ನವೀನ್ ಜಿ ಎಸ್ ನಿರ್ದೇಶನದ, ಎಂ ಎಸ್ ತ್ಯಾಗರಾಜ ಸಂಗೀತ ನಿರ್ದೇಶನದ, ವೀರೇಶ್ ಛಾಯಾಗ್ರಣದ, ʻನಾ ನಿನ್ನ ಬಿಡಲಾರೆʼ ಚಿತ್ರದ ತಾರಾಗಣದಲ್ಲಿ ಪಂಚಿ ಮತ್ತು ಅಂಬಾಲಿ ಭಾರತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಷ್ಟೇ ಕುಂಬಳಕಾಯಿ ಒಡೆದಿರುವಂತಹ ʻನಾ ನಿನ್ನ ಬಿಡಲಾರೆʼ ಚಿತ್ರವು ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ.

ಪ್ರತಿ ಹೊಸಬರ ಚಿತ್ರವು ತನ್ನ ಕಂಟೆಂಟ್ ಮೂಲಕ ಎಲ್ಲರ ಮನಸ್ಸನ್ನು ಸೆಳೆಯುತ್ತಿರುವ ಈ ಜಮಾನದಲ್ಲಿ ʻನಾ ನಿನ್ನ ಬಿಡಲಾರೆʼ ಚಿತ್ರವು ಸಹ ಎಲ್ಲರ ಮನಸ್ಸನ್ನು ಗೆಲ್ಲುವ ಭರವಸೆಯಲ್ಲಿದೆ.

Exit mobile version