Site icon Vistara News

Kannada New Movie: `ಸಿಂಹ ಗುಹೆ’ ಆಡಿಯೊ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ  ಅನಿರುದ್ಧ್​ ಜತ್ಕರ್!

Kannada New Movie simha Guhe

ಬೆಂಗಳೂರು: ಈ ಹಿಂದೆ ʻಸಮರ್ಥʼ, ʻತಾಜಾʼ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್‌ಜಿಆರ್ ಅವರ ನಿರ್ದೇಶನದ ಮೂರನೇ ಚಿತ್ರ ʻಸಿಂಹ ಗುಹೆʼ (Kannada New Movie). ರವಿ ಶಿರೂರು, ನಿವಿಶ್ಕಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಹಾಡುಗಳಿಗೆ ಇತ್ತೀಚೆಗೆ ನಟ ಅನಿರುದ್ಧ ಅವರು ಚಾಲನೆ ನೀಡಿದರು. ಎಸಿ ಮಹೇಂದರ್ ಅವರ ಛಾಯಾಗ್ರಹಣ, ಸತೀಶ್ ಆರ್ಯನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ವಿಷ್ಣುವರ್ಧನ್​ (Vishnuvardhan) ಅವರ ಅಳಿಯ ಅನಿರುದ್ಧ್ ಅವರಿಂದ ಸಾಂಗ್​ ಬಿಡುಗಡೆ ಮಾಡಿಸಿ ಅವರು ಖುಷಿಪಟ್ಟಿದ್ದಾರೆ.

ʻʻಈ ಗೀತೆಯನ್ನು ನೋಡಿ ಬಹಳ ಖುಷಿ ಆಯಿತು. ವಿಷ್ಣುವರ್ಧನ್​ ಅವರ ಮೇಲೆ ಚಿತ್ರತಂಡದವರು ಹೊಂದಿರುವ ಅಭಿಮಾನದಿಂದ ನಾನು ಈ ಹೊಸ ತಂಡದವರಿಗೆ ಹಾರೈಸಲು ಬಂದಿದ್ದೇನೆ. ಹಾಡಿನ ಶೂಟಿಂಗ್​ ಸ್ಥಳ ತುಂಬ ಚೆನ್ನಾಗಿದೆ. ಚಿತ್ರೀಕರಣದ ಶೈಲಿ ಬಹಳ ಚೆನ್ನಾಗಿದೆ. ಸಿಂಹ ಗುಹೆ ಚಿತ್ರ ನೋಡಲು ನಾನು ಬರುತ್ತೇನೆ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ನಟ ಅನಿರುದ್ಧ್​ ಜತ್ಕರ್​ ಶುಭ ಕೋರಿದ್ದಾರೆ.

ಇದನ್ನೂ ಓದಿ: Kannada New Movie: ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ `ಪಾರು’ ಧಾರಾವಾಹಿ ಹೀರೊ!

ಈ ಸಂದರ್ಭದಲ್ಲಿ ನಿರ್ದೇಶಕ ಎಸ್‌ಜಿಆರ್ ಮಾತನಾಡಿ ʻʻಇದೊಂದು ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಇರುವ ಚಿತ್ರವಾಗಿದ್ದು. ಜಾಗರಹಳ್ಳಿ ಎಂಬ ಊರಲ್ಲಿ ಮನೆಯೊಂದರ ಮುಂದೆ ಬಹುತೇಕ ಚಿತ್ರದ ಕಥೆ ನಡೆಯುತ್ತದೆ. ʻಸಿಂಹಗುಹೆʼ ಎನ್ನುವುದು ಆ ಮನೆಯ ಹೆಸರು. ನಾಯಕ ಕೂಡ ವಿಷ್ಣು ಅಭಿಮಾನಿ. ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ನನ್ನ ಹಿಂದಿನ ಚಿತ್ರಗಳಿಗೆ ಕೆಲಸಮಾಡಿದ ಮಹೇಂದರ್ ಅವರೇ ಈ ಚಿತ್ರಕ್ಕೂ ಸಿನಿಮಾಟೋಗ್ರಫಿ ಮಾಡಿದ್ದಾರೆ. ಚಿತ್ರವೀಗ ಬಿಡುಗಡೆಗೆ ರೆಡಿ ಇದ್ದು, ಮೇ ಕೊನೆಗೆ ಅಥವಾ ಜುಲೈ ಮೊದಲವಾರ ರಿಲೀಸ್ ಮಾಡುವ ಯೋಜನೆಯಿದೆʼʼ ಎಂದು ಹೇಳಿದರು.

ಚಿತ್ರದ ನಾಯಕ ರವಿ ಶಿರೂರ್ ಮಾತನಾಡಿ ʻʻಇದೊಂದು ಚಿಕ್ಕ ಪ್ರಯತ್ನ. ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದೇನೆ. ಹಳ್ಳಿಯಲ್ಲಿ ಟ್ಯಾಂಕರ್ ಓಡಿಸಿಕೊಂಡಿರುವ ಹುಡುಗನ ಪಾತ್ರ ನನ್ನದು. ಆ ಹಳ್ಳಿಯಲ್ಲಿ ಒಂದು ಮರ್ಡರ್ ನಡೆದಾಗ ಅದು ಈ ಹುಡುಗನನ್ನು ಹೇಗೆ ಎಲ್ಲೆಲ್ಲಿಗೆ ಕರೆದುಕೊಂಡು ಹೋಯಿತು ಎಂಬುದನ್ನು ಚಿತ್ರದ ಮೂಲಕ ಹೇಳಿದ್ದೇವೆʼʼ ಎಂದು ವಿವರಿಸಿದರು.

ನಾಯಕಿ ನಿವಿಶ್ಕಾ ಪಾಟೀಲ್ ಮಾತನಾಡಿ ʻʻಇದೇ ನನ್ನ ಮೊದಲ ಚಿತ್ರ. ಇದರ ನಂತರ ನಾಲ್ಕು ಸಿನಿಮಾ ಆಯಿತು. ಹಾಗಾಗಿ ನನಗೆ ಈ ಚಿತ್ರ ತುಂಬಾ ಪ್ರಾಮುಖ್ಯ, ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದ ನನಗೆ ರವಿ ಸರ್ ಕರೆದು ಅವಕಾಶ ನೀಡಿದರುʼʼ ಎಂದು ಹೇಳಿದರು.

ಮತ್ತೊಬ್ಬ ನಾಯಕಿ ಅನುರಾಧಾ ಮಾತನಾಡಿ ʻʻನಾನೊಬ್ಬ ಡ್ಯಾನ್ಸರ್. ಒಂದಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದೇನೆ. ಇದರಲ್ಲಿ ಸೆಕೆಂಡ್ ಲೀಡ್ ಆಗಿ ಕಾಣಿಸಿಕೊಂಡಿದ್ದೇನೆʼʼ ಎಂದು ಹೇಳಿದರು.

Exit mobile version