Site icon Vistara News

Kannada New Movie: ಶಿಷ್ಯನ ಚೊಚ್ಚಲ ಕನಸಿಗೆ ಜತೆಯಾದ ಸುಕ್ಕ ಸೂರಿ: ʻಸೋಮು ಸೌಂಡ್ ಇಂಜಿನಿಯರ್’ ಟ್ರೈಲರ್‌ ಔಟ್‌!

Kannada New Movie somu sound engineer trailer out

ಬೆಂಗಳೂರು: ಗಟ್ಟಿ ಕಥೆಯೊತ್ತು ಪ್ರೇಕ್ಷಕರನ್ನು (Kannada New Movie) ಕಾಡುವುದಕ್ಕೆ ʻಸೋಮುʼ ಸನ್ನದ್ದನಾಗಿದ್ದಾನೆ. ಹಾಡುಗಳ ಮೂಲಕ ಆಮಂತ್ರಣ ಕೊಟ್ಟಿದ್ದ ʻಸೋಮು ಸೌಂಡ್ ಇಂಜಿನಿಯರ್ʼ ತಂಡವೀಗ ಟ್ರೈಲರ್‌ ಮೂಲಕ ಸಿನಿರಸಿಕರನ್ನು ಒಂಟಿಗಾಲಿನಲ್ಲಿ ನಿಲ್ಲಿಸಿದೆ. ಶಿಷ್ಯನ ಹೊಸ ಪ್ರಯತ್ನಕ್ಕೆ ಸುಕ್ಕ ಸೂರಿ ಸಾಥ್ ಕೊಟ್ಟಿದ್ದು, ಡಾಲಿ ಧನಂಜಯ್ ಕೂಡ ಕೈ ಜೋಡಿಸಿದ್ದಾರೆ. ಬೆಂಗಳೂರಿನ SRV ಥಿಯೇಟರ್‌ನಲ್ಲಿ ಸೋಮು ಸೌಂಡ್ ಇಂಜಿನಿಯರ್ ಟ್ರೈಲರ್‌ ಬಿಡುಗಡೆ ಮಾಡಲಾಯಿತು. ಸೂರಿ ಹಾಗೂ ಧನಂಜಯ್ ಟ್ರೈಲರ್‌ ರಿಲೀಸ್ ಮಾಡಿ ಚಿತ್ರತಂಡದ ಶ್ರಮಕ್ಕೆ ಬೆನ್ನು ತಟ್ಟಿದರು.

ಬಳಿಕ ಮಾತನಾಡಿದ ನಿರ್ದೇಶಕ ಸುಕ್ಕ ಸೂರಿ, ʻʻಸಿನಿಮಾ ಕಾಡುತ್ತದೆ. ಅದು ಸತ್ಯ. ಸಿನಿಮಾದಲ್ಲಿ ತುಂಬಾ ವಿಷಯಗಳು ಇವೆ. ಆ ಪ್ರದೇಶದಿಂದ ಬರುವ ಸಿನಿಮಾಗಳು ನಮಗೆ ಬೇಕಿವೆ. ಸಿನಿಮಾದಿಂದ ಸಿನಿಮಾಗೆ ನಾವು ಬೇರೆ ರೀತಿಯ ಫಾರ್ಮೆಟ್‌ಗೆ ಹೋಗುತ್ತಿದ್ದೇವೆ. ಶೂಟ್ ಮಾಡುವುದು ಒಂದೇ ರೀತಿ ಸಾಧ್ಯವಿಲ್ಲ. ಅದೊಂದು ಬೇರೆನೇ ಇರುತ್ತದೆ. ಟಗರು ಆಗುವುದಕ್ಕೂ ಮೊದಲೇ ನನಗೆ ಅವನಲ್ಲಿ ಫ್ರೌಡಿಮೆ ನೋಡಿದೆ. ಇವನಿಗೆ ಅರ್ಥವಾಗುತ್ತಿದೆ ಎಂದಾಗ ಸಿನಿಮಾ ಮಾಡು ಎಂದೇ. ಆ ಭಾಷೆಯಲ್ಲಿ ಸಿನಿಮಾ ಮಾಡುತ್ತೇನೆ ಅದನ್ನು ಆಯ್ಕೆ ಮಾಡಿದ್ದು ಕೂಡ ಅವನೇ. ಕಡ್ಡಿಪುಡಿ, ಟಗರು, ತಿಥಿ ಸಿನಿಮಾಗಳು. ಹಾಗೇ ಒಂದು ಜಾಗಕ್ಕೆ ಹೋಗಿ ದುಡಿಸಿಕೊಳ್ಳುತ್ತವೆ. ಆ ರೀತಿ ಹುಡುಗರು ನುರಿತರಾಗಿದ್ದಾರೆʼʼಎಂದರು.

ಇದನ್ನೂ ಓದಿ: Kannada New Movie: ದೀಕ್ಷಿತ್ ಶೆಟ್ಟಿ ಅಭಿನಯದ `ಬ್ಲಿಂಕ್’ ಮಾರ್ಚ್ 8ಕ್ಕೆ ಬಿಡುಗಡೆ

ಡಾಲಿ ಧನಂಜಯ್ ಮಾತನಾಡಿ, ʻಸೋಮು ಸೌಂಡ್ ಇಂಜಿನಿಯರ್ʼ ದೊಡ್ಡದಾಗಿ ಸೌಂಡ್ ಮಾಡಲಿ ಎಂದು ಹಾರೈಸುತ್ತೇನೆ. ಸಿನಿಮಾ ಚೆನ್ನಾಗಿದೆ ಎಂದು ನಂಬಲು ಸೂರಿ ಸರ್ ಎಲ್ಲ ಕಡೆ ಬರುವುದಿಲ್ಲ. ಎಲ್ಲಾ ಸಿನಿಮಾ ಮಾತಾಡಲ್ಲ. ಜತೆಗಿದ್ದವರೆ ಮಾಡಿರಲಿ. ಯಾರೇ ಮಾಡಿರಲಿ. ಅವರು ಒಂದು ಸಿನಿಮಾ ಬಗ್ಗೆ ಮಾತಾಡುತ್ತಿದ್ದಾರೆ ಎಂದರೆ ಸಿನಿಮಾ ಚೆನ್ನಾಗಿದೆ, ಸೂಪರ್ ಆಗಿದೆ ಎಂದರ್ಥ. ಚರಣ್ ಕೂಡ ಸಿನಿಮಾ ಹೊಗಳುತ್ತಿದ್ದಾರೆ ಎಂದರೆ ಚೆನ್ನಾಗಿದೆ ಎಂದು ಅರ್ಥ. ಜಯಣ್ಣ ಕೂಡ ತುಂಬಾ ಹೊಗಳುತ್ತಿದ್ದರು. ಅಳು ಬಂತು ಎಂದರು. ನಾನು ಅಭಿ ಜೊತೆ ಟಗರು, ಸಲಗ, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಕೆಲಸದ ಬಗ್ಗೆ ನನಗೆ ಗೊತ್ತು. ಮಾರ್ಚ್ 15ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಪ್ರತಿಯೊಬ್ಬರು ಸಪೋರ್ಟ್ ಮಾಡಿʼʼ ಎಂದರು.

ನಿರ್ದೇಶಕ ಅಭಿ ಮಾತನಾಡಿ, ʻʻಈ ಸಿನಿಮಾ ಶುರುವಾಗಿದ್ದು, ನನ್ನ ಗುರುಗಳು ಹೇಳಿದ ಮಾತಿನಿಂದ. ನಿಮ್ಮ ಭಾಷೆ, ನೀನು ಅಲ್ಲೇ ಬೆಳೆದಿದ್ದೀಯಾ? ಅಲ್ಲಿ ಸಿನಿಮಾ ಮಾಡು ಅಭಿ ಎಂದರು. ಸ್ಕ್ರೀಪ್ಟ್ ಮುಗಿದ ಮೇಲೆ ಸರ್‌ಗೆ ಕೊಟ್ಟೆ. ಸರ್ ಇದನ್ನು ಅಪ್ಲೈ ಮಾಡಿಕೊಂಡು ಬಾ ಎಂದರು. ಮುಗಿದ ಆದ ಮೇಲೆ ಸರ್‌ಗೆ ತೋರಿಸಿದೆ. ನನಗೆ ಖುಷಿ ಆಯ್ತು. ನನಗೆ ಸರ್ ಗೆ ತೋರಿಸುವವರೆ ಭಯ ಇತ್ತು. ಇಡೀ ನನ್ನ ತಂಡಕ್ಕೆ ಧನ್ಯವಾದʼʼ ಎಂದರು.

ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದರೆ, ಧನಂಜಯ ರಂಜನ್, ನಾಗಾರ್ಜುನ ಶರ್ಮಾ, ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಮಾಸ್ತಿ ಜತೆಗೂಡಿ ಅಭಿ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಲಗ ಹಾಗೂ ಭೀಮ ಖ್ಯಾತಿಯ ಶಿವಸೇನಾ ತಮ್ಮ ಕ್ಯಾಮೆರಾದಲ್ಲಿ ಚಿತ್ರವನ್ನ ಸೆರೆ ಹಿಡಿದಿದ್ದಾರೆ.

‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾದಲ್ಲಿ ಸಲಗ ಸಿನಿಮಾದಲ್ಲಿ ನಟಿಸಿದ ಕೆಂಡ ಖ್ಯಾತಿಯ ಶ್ರೇಷ್ಠ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಶ್ರೇಷ್ಠಗೆ ನಾಯಕಿಯಾಗಿ ಶೃತಿ ಪಾಟೀಲ್ ನಟಿಸಿದ್ದಾರೆ. ಜಹಾಂಗೀರ್, ಅಪೂರ್ವ,ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೊಸಬರ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಮಾಪಕರಾಗಿ ಕ್ರಿಸ್ಟೋಫರ್ ಕಿಣಿ ನಿಂತಿದ್ದಾರೆ. ಗಟ್ಟಿ ಕಥೆ ಹೊತ್ತು ಸೋಮು ಮಾ.15ಕ್ಕೆ ಥಿಯೇಟರ್ ನಲ್ಲಿ ಹಾಜರಿ ಹಾಕಲಿದ್ದಾನೆ.

Exit mobile version