ಬೆಂಗಳೂರು: `ರಾಜಧಾನಿ’ ಎಂಬ ಅತ್ಯದ್ಭುತ ಸಿನಿಮಾವನ್ನು (Kannada New Movie) ನಿರ್ದೇಶನ ಮಾಡಿದ್ದ ರಘು ಜಯ ಅವರು ಎಸ್.ಜೆ ಭೈರವ್ ಆಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ʻರಾಜಧಾನಿʼ ಸಿನಿಮಾ ಬಳಿಕ “ಗೋಲಿ ಸೋಡಾʼ ಎಂಬ ರಿಮೇಕ್ ಸಿನಿಮಾ ಕೂಡ ಮಾಡಿದ್ದರು. ಇದೀಗ ಈಗ ಎಸ್.ಜೆ ಭೈರವ್ ಅವರು (ರಘು ಜಯ) ಹೊಸ ಹುಡುಗರನ್ನು ಹಾಕಿಕೊಂಡು ʻಪಟಾಲಂʼ ಎಂಬ ಸಿನಿಮಾ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ (ಫೆಬ್ರವರಿ 2024) ಶೂಟಿಂಗ್ ಶುರುವಾಗಲಿದೆ ಎಂಬ ಸಂಗತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಭರವಸೆ ಮೂಡಿಸಿದ ನಿರ್ದೇಶಕರಲ್ಲಿ ಒಬ್ಬರಾದ ರಘು ಜಯರವರು, “ಪಟಾಲಂʼ ಮೂಲಕ ಈಗಿನ ಯುವಕರು, ಅವರ ಮನಸ್ಥಿತಿ ಹಾಗೂ ಇನ್ನಿತರ ವಿಷಯಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ನಾಗರಬಾವಿ ಬಳಿ ಇರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಕಥೆಯಲ್ಲಿ ತೀರಾ ವಿಭಿನ್ನತೆಯನ್ನು ಕಾಯ್ದುಕೊಂಡಿರುವುದಾಗಿ ತಿಳಿಸಿರುವ ನಿರ್ದೇಶಕ ಎಸ್ಎಲ್ ಭೈರವ್ ಅವರು ಕಥೆ ಗುಟ್ಟನ್ನು ಸಹಜವಾಗಿ ಸ್ವಲ್ಪ ಮಾತ್ರ ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ: Kannada New Movie: ʻಬಿಸಿಬಿಸಿ-ice creamʼ ಸಿನಿಮಾ ʻಜವಾರಿʼ ಸಾಂಗ್ ಔಟ್!
ಮುಹೂರ್ತದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಘು ಜಯರವರು ಚಿತ್ರೀಕರಣವನ್ನು ಫೆಬ್ರುವರಿ ಮೊದಲ ವಾರದಿಂದ ಮಾಡುವದಾಗಿ ಹೇಳಿದ್ದಾರೆ. ಅಕ್ಷಿತ ಕುಮಾರ್, ಕಾರ್ತಿಕ್ (ಮೈಕೋ ನಾಗರಾಜ್ ಮಗ), ಅಜಯ್ ಪೃಥ್ವಿ, ಸಾಯಿ ಪ್ರಗತಿ, ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.ಆರ್. ಜೆ. ಫಿಲಂ ಫ್ಯಾಕ್ಟರಿ ಅಡಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ.