ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಶನ್‌ನ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿರುವ ʻಕರಟಕ ದಮನಕʼ (Karataka Damanaka) ಹಾಗೂ ಗುರುಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಜೋಡಿಯ ‘ರಂಗ ನಾಯಕ’ ಸಿನಿಮಾ ಇಂದು (ಮಾರ್ಚ್ 8) ಅದ್ಧೂರಿಯಾಗಿ ತೆರೆ ಕಂಡಿದೆ. ಈಗಾಗಲೇ ಟೀಸರ್, ಸಾಂಗ್ಸ್‌ನಿಂದ ಕುತೂಹಲ ಕೆರಳಿಸಿದ್ದ ‘ಕರಟಕ ದಮನಕ’ ಚಿತ್ರದ ಟ್ರೈಲರ್ ಕೂಡ ಸಿನಿರಸಿಕರ ಗಮನ ಸೆಳೆದಿತ್ತು. ಅದೇ ರೀತಿ ರಂಗನಾಯಕ ಕೂಡ ಸಖತ್ ಸೌಂಡ್ ಮಾಡಿತ್ತು.
ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟಿಸಿರುವ ‘ಕರಟಕ ದಮನಕ’ ಇಂದು ರಿಲೀಸ್ ಆಗಿದ್ದು, ಪ್ರಸನ್ನ ಚಿತ್ರಮಂದಿರದಲ್ಲಿ ಶಿವಣ್ಣ, ಪ್ರಭುದೇವ ಫ್ಯಾನ್ಸ್ ಸಖತ್ ಸೌಂಡ್ ಮಾಡುತ್ತಿದ್ದಾರೆ. ಪ್ರಸನ್ನ ಚಿತ್ರಮಂದಿರದಲ್ಲಿ ಒಟ್ಟು 5 ಶೋ ಪ್ರದರ್ಶನ ಕಾಣಲಿವೆ.ಪಂಚತಂತ್ರದ ಎರಡು ಕ್ಯಾರೆಕ್ಟರ್‌ಗಳನ್ನು ಟೈಟಲ್ ಆಗಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ನರಿಗಳ ಸ್ವಭಾವವನ್ನೇ ಇಬ್ಬರು ದಿಗ್ಗಜರ ಪಾತ್ರಕ್ಕೆ ಕೊಟ್ಟು ಯೋಗರಾಜ್ ಭಟ್ ಏನು ಹೇಳುವುದಕ್ಕೆ ಹೊರಟಿದ್ದಾರೆ ಎನ್ನುವುದು ಸಿನಿಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯ 7 ಹಾಡುಗಳು ಚಿತ್ರದಲ್ಲಿದೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Karataka Damanaka: ಆ ಸಿನಿಮಾದಲ್ಲಿ ಬ್ಯಾಲೆನ್ಸ್ ಇನ್ನೂ ಚೆನ್ನಾಗಿ ಮಾಡ್‌ಬೋದಿತ್ತು ಬೇಸರ ಇದೆ ಎಂದ ಕಿಚ್ಚ!
ರಂಗನಾಯಕ ಸಿನಿಮಾ ಕೂಡ ಸಿನಿಪ್ರಿಯರಲ್ಲಿ ಹೆಚ್ಚು ಕುತೂಹಲ ಹುಟ್ಟು ಹಾಕಿದೆ. ಒಂದೇ ದಿನ ಈ ಎರಡು ಸಿನಿಮಾಗಳು ರಿಲೀಸ್ ಆಗಿದ್ದು, ಈ ಹಿಂದೆ ಯೋಗರಾಜ್ ಭಟ್ ಅವರು ಈ ಬಗ್ಗೆ ಮಾತನಾಡಿದ್ದರು. ʻʻಜಗ್ಗೇಶ್ ಮತ್ತು ನಾನು ಸ್ನೇಹಿತರು. ಗುರು ಪ್ರಸಾದ್ ಮತ್ತು ನಾನು ಸ್ನೇಹಿತರು. ಗುರುಪ್ರಸಾದ್ ಅವರ ರಂಗನಾಯಕ ಚಿತ್ರದಲ್ಲಿ ನಾನೂ ಅಭಿನಿಸಿದ್ದೇನೆ. ಹೀಗೆ ಒಂದೇ ದಿನ ನಾವೆಲ್ಲ ಸ್ನೇಹಿತರು ಒಟ್ಟಿಗೆ ತೆರೆಗೆ ಬರ್ತಿದ್ದೇವೆ. ಇದು ಖುಷಿ ತರೋ ವಿಷಯವೇ ಆಗಿದೆ. ಇಲ್ಲಿ ಕಾಂಪಿಟೇಷನ್ ವಿಚಾರ ಬರೋದೆ ಇಲ್ಲ ಅಂತಲೇ ಹೇಳಬಹುದುʼʼಎಂದಿದ್ದರು.
`ಮಠ’, ‘ಎದ್ದೇಳು ಮಂಜುನಾಥ’ ಬಳಿಕ ಜಗ್ಗಣ್ಣ- ಗುರುಪ್ರಸಾದ್ ಜೋಡಿಯ 3ನೇ ಸಿನಿಮಾ ಇದು ರಂಗನಾಯಕ . ಈಗಾಗಲೇ ಜೀ ಸ್ಟುಡಿಯೋಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಎ.ಆರ್.ವಿಖ್ಯಾತ್ ಸಿನಿಮಾ ನಿರ್ಮಾಣ ಮಾಡಲಾಗಿದೆ.