Site icon Vistara News

Karimani Malika Ninalla: ʻಕರಿಮಣಿ ಮಾಲೀಕ ನೀನಲ್ಲ’ ಮೂಲ ಹಾಡನ್ನು ಹಾಡಿದ ಗಾಯಕಿ ಸಿಕ್ಕೇ ಬಿಟ್ರು ನೋಡಿ!

Karimani Malika Ninalla song by Radhika Rao

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ (Upendra Movie) ನಟನೆಯ “ಉಪೇಂದ್ರʼ ಸಿನಿಮಾದ ʻಕರಿಮಣಿ ಮಾಲೀಕ ನೀನಲ್ಲ’ (Karimani Malika Ninalla) ಕ್ರೇಜ್‌ ಇನ್ನೂ ಕಡಿಮೆ ಆಗಿಲ್ಲ. ಉಪೇಂದ್ರ’ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ ಅವರು. ಕನಕ ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್‌ ಮಾಡಿದ್ದರು. ಇದು ಸಖತ್‌ ವೈರಲ್‌ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್‌ ಹಂಚಿಕೊಂಡಿವೆ. ಆದರೆ ಈ ಮೂಲ ಹಾಡನ್ನು ಯಾರು ಹಾಡಿರೋದು ಎಂದು ಹಲವರು ತಲೆಗೆ ಹುಳು ಬಿಟ್ಟುಕೊಂಡಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ಈ ಹಾಡನ್ನು ಹಾಡಿರುವುದು ಪ್ರತಿಮಾ ರಾವ್‌. ಅವರನ್ನೂ ರಾಧಿಕಾ ರಾವ್ ಎಂದೂ ಕರೆಯುತ್ತಾರೆ.

ಗಾಯಕಿ ರಾಧಿಕಾ ರಾವ್ ಅವರು ತಮ್ಮದೇ ಆದ ಯುಟ್ಯೂಬ್‌ ಚಾನೆಲ್‌ ಹೊಂದಿದ್ದಾರೆ. ಅಲ್ಲಿ ಸಾಕಷ್ಟು ಹಾಡುಗಳನ್ನು ಪೋಸ್ಟ್‌ ಮಾಡಿದ್ದಾರೆ. ಇದೀಗ ಗಾಯಕಿ, ಮತ್ತೆ ʻಓ ನಲ್ಲʼ ಹಾಡನ್ನು ಹಾಡಿ ಪೋಸ್ಟ್‌ ಮಾಡಿದ್ದಾರೆ.

ಯಾರಿವರು ರಾಧಿಕಾ ರಾವ್‌?

ರಾಧಿಕಾ ರಾವ್ ಗಾಯಕಿ – ಗೀತರಚನೆಕಾರ್ತಿ. ಅವರು ಕೆಲವು ಜನಪ್ರಿಯ ಹಿಂದಿ ಮತ್ತು ಪ್ರಾದೇಶಿಕ ಭಾರತೀಯ ಚಲನಚಿತ್ರಗಳ ಹಾಡಿಗೆ ದನಿಯಾಗಿದ್ದಾರೆ. 60 ಮತ್ತು 70 ರ ದಶಕದ ಬಾಲಿವುಡ್ ಹಾಡುಗಳನ್ನು ಆಗಾಗ ಹಾಡುತ್ತಲೇ ಇರುತ್ತಾರೆ. ರಾಧಿಕಾ ಮ್ಯೂಸಿಕ್‌ ಎಂಬ ಯುಟ್ಯೂಬ್‌ ಚಾನೆಲ್‌ ಹೊಂದಿದ್ದಾರೆ. ಕೆಲವು ಕವರ್‌ ಸಾಂಗ್‌ಗಳು, ಕ್ಲಾಸಿಕ್, ಹೊಸ ಹಾಡುಗಳನ್ನು ಹಾಡಿ ಪೋಸ್ಟ್‌ ಮಾಡುತ್ತಾರೆ. ಅವರದ್ದೇ ಆದ ಅಭಿಮಾನ ಬಳಗ ಕೂಡ ಹೊಂದಿದ್ದಾರೆ.

ಇದನ್ನೂ ಓದಿ: Karimani Malika Ninalla: ʻಕರಿಮಣಿ ಮಾಲೀಕ ನೀನಲ್ಲ’ ಎಂದ ಅಣ್ಣಾವ್ರ ಮೊಮ್ಮಗ!

ರಾಧಿಕಾ ರಾವ್ ಪೋಸ್ಟ್‌

1999ರಲ್ಲಿ ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. 1999ರ ಅಕ್ಟೋಬರ್ 22ಕ್ಕೆ ಬಿಡುಗಡೆಯಾದ ಈ ಸಿನಿಮಾ ಹಿಟ್ ಆಗಿತ್ತು. ನಟಿ ಪ್ರೇಮಾ, ರವೀನಾ ಟಂಡನ್, ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರಿ ಸದ್ದು ಮಾಡಿದ್ದವು.

ಏನಿಲ್ಲ..ಏನಿಲ್ಲ ಪದ ಹುಟ್ಟಿದ್ದು ಹೇಗೆ?

ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್‌ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನೀಲ್ಲ ಏನೀಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿ ಕೂಡ ಆಗಿತ್ತು. ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಸಂಯೋಜಿಸಿದ್ದರು.

Exit mobile version