Site icon Vistara News

Kavya Gowda: ಮಗಳ ಮುಖ ರಿವೀಲ್‌ ಮಾಡಿದ ‘ರಾಧಾ ರಮಣ’ ಖ್ಯಾತ ನಟಿ ಕಾವ್ಯಾ ಗೌಡ

Kavya Gowda show faces of baby siya

ರಾಧಾ ರಮಣ (Radha Ramana), ಮೀರಾ ಮಾಧವ, ಶುಭವಿವಾಹ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ನಟಿ ಕಾವ್ಯ ಗೌಡ ಮುದ್ದು ಮಗಳ ಫೋಟೊ ಹಂಚಿಕೊಂಡಿದ್ದಾರೆ.

ಸೋಮಶೇಖರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಕಾವ್ಯಾ ಗೌಡ ಇದೇ ಜನವರಿಯಂದು ಮುದ್ದಾದ ಹೆಣ್ಣು ಮಗಳಿಗೆ ಜನ್ಮ ನೀಡಿದ್ದರು.

ಸಿಯಾ ಎನ್ನುವುದು ಮಗಳ ನಿಕ್ ನೇಮ್ ಆಗಿದೆಯಾ ಅಥವಾ ಅದೇ ನಿಜವಾದ ಹೆಸರೋ ಎಂಬುದು ಇನ್ನು ಸ್ಪಷ್ಟವಾಗಬೇಕಿದೆ. ಅಂದ ಹಾಗೇ ಸಿಯಾ ಎಂದರೆ ಸೀತೆ ಎಂಬು ಅರ್ಥ ಕೊಡುತ್ತೆ. ಇದರ ಹೊರತಾಗಿ ಸುಂದರವಾದ ಹೂವು ಎಂಬ ಅರ್ಥವೂ ಇದಕ್ಕಿದೆ.

ಇದನ್ನೂ ಓದಿ: Kavya Gowda: ʻಮೀರಾ ಮಾಧವʼ ಧಾರಾವಾಹಿ ಖ್ಯಾತಿಯ ಕಾವ್ಯ ಗೌಡ ಬೇಬಿ ಬಂಪ್‌ ಫೋಟೊಗಳು ವೈರಲ್‌!

ಮಗಳು ಹುಟ್ಟಿ ಬರೋಬ್ಬರಿ ಆರು ತಿಂಗಳ ನಂತರ ಮೊದಲ ಬಾರಿಗೆ ಮಗಳ ಮುಖವನ್ನು ಬಹಿರಂಗಗೊಳಿಸಿದ್ದಾರೆ ಕಾವ್ಯಾ ಗೌಡ.

ಕಾವ್ಯ ಹಾಗೂ ಸೋಮಶೇಖರ್ ಅವರು 2021ರ ಡಿಸೆಂಬರ್ 2ರಂದು ಮದುವೆ ಆದರು. ಮದುವೆಯ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡು ಜ್ಯುವೆಲ್ಲರಿ ಡಿಸೈನರ್ ಆಗಿ ಕಾವ್ಯ ಗುರುತಿಸಿಕೊಂಡಿದ್ದಾರೆ. ‘ರಾಧಾ ರಮಣ’ ಧಾರಾವಾಹಿಯಲ್ಲಿ ರಾಧಾ ಆಗಿ ಕಾಣಿಸಿಕೊಂಡರು. ‘ಗಾಂಧಾರಿ’ ಧಾರಾವಾಹಿಯಲ್ಲೂ ಕಾವ್ಯ ಗೌಡ ಬಣ್ಣ ಹಚ್ಚಿದ್ದಾರೆ.ಕಿರುತೆರೆ ಅಲ್ಲದೇ ನಟಿ ʻಬಕಾಸುರʼ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು. 

Exit mobile version