Site icon Vistara News

Kiccha Sudeep: ಕಿಚ್ಚ ಸುದೀಪ್ ಬರ್ತ್‌ಡೇಗೆ ಫ್ಯಾನ್ಸ್ ದಂಡು, ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು…

Kiccha Sudeep Birth day

ಬೆಂಗಳೂರು, ಕರ್ನಾಟಕ: ಕಿಚ್ಚ ಸುದೀಪ್ (Kiccha Sudeep) ಅವರ ಹುಟ್ಟು ಹಬ್ಬ ಆಚರಣೆಗೆ (Kiccha Sudeep Birth day) ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳ ಸೇರಿದ್ದಾರೆ. ಸೆ.2ಕ್ಕೆ ಕಿಚ್ಚ ಸುದೀಪ್ ಅವರು 50ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಹುಟ್ಟಹಬ್ಬವನ್ನು ಭರ್ಜರಿಯಾಗಿ ಸೆಲೆಬ್ರೆಷನ್ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಬಾಧ್ ಷಾ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲು ಫ್ಯಾನ್ಸ್ ಆಗಮಿಸಿದ್ದಾರೆ. ಕರ್ನಾಟಕದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಕಿಚ್ಚ ಸುದೀಪ್ ಅವರೂ ನಂದಿ ಲಿಂಕ್ಗೆ ಆಗಮಿಸಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳ ಮುಗಿ ಬಿದ್ದರು. ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಅಭಿಮಾನಿಗಳನ್ನು ತಡೆಯಲು ಪೊಲೀಸರು ಹರ ಸಾಹಸಪಟ್ಟರು.

ಸುದ್ದಿಯನ್ನೂ ಓದಿ: Kiccha Sudeep: ‘ಕಬ್ಜ’ ಡೈರೆಕ್ಟರ್ ಆರ್​. ಚಂದ್ರು ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್‌; ವಿಜಯೇಂದ್ರ ಪ್ರಸಾದ್ ಸಾಥ್‌!

ಬೇರೆ ರಾಜ್ಯಗಳಿಂದಲೂ ಬಂದ ಫ್ಯಾನ್ಸ್

ಕಿಚ್ಚನ ಹುಟ್ಟುಹಬ್ಬಕ್ಕೆ ರಾಜ್ಯದ ಅಭಿಮಾನಿಗಳು ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಆಗಮಿಸಿದ್ದಾರೆ. ಆಂಧ್ರ, ಚೆನ್ನೈ ಸೇರಿದಂತೆ ವಿವಿಧ ರಾಜ್ಯಗಳಿಂದ ಅಭಿಮಾನಿಗಳು ನಂದಿ ಲಿಂಕ್ ಗ್ರೌಂಡ್ಸ್‌ಗೆ ಆಗಮಿಸಿದ್ದಾರೆ. ದರ್ಶನ್-ಕಿಚ್ಚ ಒಂದಾಗಲಿ ಎಂದು ಅಭಿಮಾನಿಗಳು ಆಸೆ ವ್ಯಕ್ತಪಡಿಸಿದ್ದಾರೆ. ಜೋಡೆತ್ತುಗಳು ಒಂದಾದ್ರೆ ಕರ್ನಾಟಕದಲ್ಲೇ ಜಾತ್ರೆ ಮಾಡ್ತಿವಿ ಎಂದ ಕಿಚ್ಚ ಫ್ಯಾನ್ಸ್ ಹೇಳುತ್ತಿದ್ದಾರೆ.

Exit mobile version