Site icon Vistara News

Kiccha Sudeep: ನನ್ನ ಹೆಂಡತಿಗೆ ಪ್ರಶಸ್ತಿ, ಪುರಸ್ಕಾರ ಕೊಟ್ಟರು ತಪ್ಪಿಲ್ಲ ಎಂದ ಕಿಚ್ಚ ಸುದೀಪ್‌!

Kichcha Sudeep Loves Wife Priya Very Much Here

ಬೆಂಗಳೂರು: ʻಗೌರಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸಮರ್ಜಿತ್ ಲಂಕೇಶ್ ಅವರು ಕಿಚ್ಚ ಸುದೀಪ್‌ ಅವರಿಗೆ (Kiccha Sudeep) ಸಂದರ್ಶನ ಮಾಡಿದ್ದರು.  ಸುದೀಪ್ ಅವರು ಈಗ ಪತ್ನಿ ಬಗ್ಗೆ ಮಾತನಾಡಿದ್ದಾರೆ.

ಕಿಚ್ಚ ಸುದೀಪ್ ಹಾಗೂ ಪ್ರಿಯಾ 2001ರಲ್ಲಿ ಮುವೆಯಾದರು. ಇವರ ಮದುವೆ ಆಗಿ 23 ವರ್ಷಗಳು ಕಳೆದಿವೆ. ಸಾನ್ವಿ ಹೆಸರಿನ ಮಗಳು ಇದ್ದಾರೆ.  ಇದೀಗ ಸಂದರ್ಶನದಲ್ಲಿ ಸುದೀಪ್‌ ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ಹೆಂಡತಿ ಕುರಿತಾಗಿ ಹಾಡಿ ಹೊಗಳಿದ್ದಾರೆ.

ʻʻನನ್ನ ಹೆಂಡತಿ ತುಂಬಾ ಕಾಮ್‌ ಹಾಗೂ ತಾಳ್ಮೆಯಿಂದ ಇರುವ ವ್ಯಕ್ತಿ. ಅವರ ಜೀವನಕ್ಕಿಂತ ಇಷ್ಟು ವರ್ಷ ನನ್ನನ್ನು ಹ್ಯಾಂಡಲ್ ಮಾಡಿದ್ದಾರೆ. ಅವರಗೆ ಕೂರಿಸಿಬಿಟ್ಟು ಪ್ರಶಸ್ತಿ, ಪುರಸ್ಕಾರ ಕೊಟ್ಟರು ತಪ್ಪಿಲ್ಲ. ಆ ರೀತಿ ಯೋಚಿಸುವ ರೀತಿ ಇರಬೇಕು. ನನ್ನ ಒಟ್ಟೂ ಸಿನಿಮಾ ಜರ್ನಿಯಲ್ಲಿ ಏರಿಳತಗಳು ಇದ್ದವು. ಹುಚ್ಚ ಸಿನಿಮಾ ಆದ ಬಳಿಕ ಕೂಡ. ತುಂಬ ಲೋ ಆಗಿದ್ದೆ. ಆ ಸಮಯದಲ್ಲಿ ನನ್ನ ಪಕ್ಕ ನಿಂತಿದ್ದಳುʼʼಎಂದರು.

ಇದನ್ನೂ ಓದಿ: Kiccha Sudeep: ಇಬ್ಬರಿಗೆ ಮಾತ್ರ ʻಬಾಸ್‌ʼ ಎಂದು ಕರೆಯುವೆ ಎಂದ ಕಿಚ್ಚ; ಯಾರವರು?

ʻʻನಾನು ಉದ್ಯಮಕ್ಕೆ ಕಾಲಿಟ್ಟಾಗ ರಾಜ್‌ಕುಮಾರ್‌ ಅವರು ಸಿನಿಮಾ ಮಾಡ್ತಾ ಇದ್ದರು. ಅಂಬರೀಶ್‌ ಸೇರಿದಂತೆ ಅನೇಕ ನಟರು ಆಗ ನಟನೆ ಮಾಡುತ್ತಲೇ ಇದ್ದರು. ಶಿವಣ್ಣ, ಉಪೇಂದ್ರ ಕೂಡ ಇದ್ದರು. ಆಗ ನಾವು ಕ್ಲಿಕ್‌ ಆಗ್ತೀವಾ ಎನ್ನೋದೇ ಡೌಟ್‌ ಇತ್ತು. ಆದರೆ ಲಕ್ಕಿ..ಜಾಗ ಇದೆ ಎಂದು ತಿಳಿಯಿತು. ಯಾರೋ ಜಾಗ ಖಾಲಿ ಮಾಡಿ ಹೋಗಿದ್ದಾರೆ ನಾನು ತುಂಬುತ್ತೇನೆ ಎಂದರೆ ಆಗಲ್ಲ. ಜನಗಳ ಮನಸಲ್ಲಿ ಮೊದಲು ಇಳಿಯಬೇಕು. ನಾನು ಮೊದಲು ಕ್ರಿಕೆಟರ್‌ ಆಗಬೇಕು ಎಂದು ಅಂದುಕೊಂಡಿದ್ದೆ. ನನ್ನ ತಂದೆ ಮಾಡಲು ಬಿಡಲಿಲ್ಲ. ಬಳಿಕ ಅಮ್ಮ ನನ್ನ ಪಕ್ಕ ನಿಂತಿದ್ದರು. ಎಲ್ಲವನ್ನೂ ಅವನಿಗೆ ತಡಿಬೇಡಿ ಮಾಡಲು ಬಿಡಿ ಎಂದಿದ್ದರು. ನನ್ನ ತಂದೆ ಉದ್ಯಮಿ. ಆದರೆ ನಾನು ನನ್ನ ಹಾರ್ಡ್‌ ವರ್ಕ್‌ ಬಿಟ್ಟಿರಲಿಲ್ಲ. ನಾನು ಉದ್ಯಮಿ ಆಗುತ್ತೇನೆ ಎಂದು ತಂದೆಗೆ ಅನಿಸುತ್ತಿರಲಿಲ್ಲ. ಅವರ ಬಳಿ ಹೋಗಿ ನಾನು ಹೀರೋ ಆಗ್ತೀನಿ ಎಂದೆ. ಅವರು ಒಪ್ಪಿದರು. ಜನರ ಮಧ್ಯೆ ನಿಂತಾಗ ಬೀಳೋ ಸಿಳ್ಳೆ ಖುಷಿ ನೀಡುತ್ತದೆ. ಹೀಗಾಗಿ ನನಗೆ ನಟ ಆಗಬೇಕು ಎಂದು ಅನಿಸುತ್ತಿತ್ತು’ ಎಂದಿದ್ದಾರೆ ಸುದೀಪ್.

ಸಮರ್ಜಿತ್ ಲಂಕೇಶ್ ಅವರು ಕಿಚ್ಚ ಸುದೀಪ್‌ ಅವರಿಗೆ ಸಂದರ್ಶನ ಮಾಡಿದ್ದರು. ಈ ವೇಳೆ ನಿಮ್ಮ ನೆಚ್ಚಿನ ನಾಯಕ ಯಾರೆಂದು ? ಪ್ರಶ್ನೆ ಇಟ್ಟರು. ಆಗ ಸುದೀಪ್‌ ಮಾತನಾಡಿ ʻʻನನಗೆ ವಿಷ್ಣುವರ್ಧನ್‌ ಅವರು ತುಂಬ ಇಷ್ಟ. ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ.  ವಿಷ್ಣು ಅವರ ಪರ್ಸನಾಲಿಟಿ ಸಖತ್ ಇಷ್ಟ. ಅವರ ಗತ್ತು, ಇರೋ ರೀತಿ ಸಖತ್ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್. ಹಾಗೇ ನನ್ನ ತಂದೆ ಕೂಡ. ಇವರಿಬ್ಬರಿಗೆ ನಾನು ಬಾಸ್‌ ಎಂದು ಕರೆಯುವುದುʼʼಎಂದಿದ್ದಾರೆ.

Exit mobile version