ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಅವರು ಬಿಡುವಿನ ಸಮಯದಲ್ಲಿ ಆಗಾಗ ಅಭಿಮಾನಿಗಳ ಜತೆ ಮಾತುಕತೆ ನಡೆಸುತ್ತಾರೆ. ಫೆಬ್ರವರಿ 15ರ ಬೆಳಗ್ಗೆ ಕೂಡ ಅವರು ಅಭಿಮಾನಿಗಳಿಂದ ಅನೇಕ ಪ್ರಶ್ನೆಗಳನ್ನು ಸ್ವೀಕರಿಸಿದ್ದಾರೆ. ಈ ಮುಂಚೆ ಕಿಚ್ಚ ಅವರು ʻಥಗ್ಸ್ ಆಫ್ ಮಾಲ್ಗುಡಿʼ ಸಿನಿಮಾ ಮಾಡುತ್ತಾರೆ ಎಂದು ವೈರಲ್ ಆಗಿತ್ತು. ಕಿಚ್ಚ ಸುದೀಪ್ ಅವರು ರಕ್ಷಿತ್ ಶೆಟ್ಟಿ ಜತೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಫ್ಯಾನ್ಸ್ ಒಬ್ಬರು ʻರಕ್ಷಿತ್ ಶೆಟ್ಟಿ ಅವರ ಜತೆ ಥಗ್ಸ್ ಆಫ್ ಮಾಲ್ಗುಡಿ ಮಾಡ್ತೀರಾ? ನೀವಿಬ್ಬರು ಜತೆಯಾದರೆ ಚೆನ್ನಾಗಿರುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸುದೀಪ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸುದೀಪ್ ಈ ಬಗ್ಗೆ ಮಾತನಾಡಿ ʻʻ‘ಅದು ಚೆನ್ನಾಗಿರುತ್ತದೆ ಎಂಬುದರ ಬಗ್ಗೆ ನನಗೆ ಖಾತರಿ ಇದೆ. ಈಗ ಅವರಿಗೆ ಅವರದ್ದೇ ಆದ ಜೀವನ ಇದೆ. ಅವರ ಮೇಲೆ ಒತ್ತಡ ಹಾಕುವುದು ನ್ಯಾಯವಲ್ಲ’ ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ.
I'm sure it Wil be a good one.
— Kichcha Sudeepa (@KicchaSudeep) February 15, 2024
He has a life of his own now and it isn't fair to pressurize him. https://t.co/d5h3KMQtUz
ಇನ್ನೊಬ್ಬರು. ‘ವರ್ಷಕ್ಕೆ ಎರಡು ಸಿನಿಮಾ ಮಾಡುತ್ತೇನೆ ಅಂತ ಹೇಳಿದ್ದೀರಿ. ಎಲ್ಲಿದೆ ಎರಡು ಸಿನಿಮಾ?’ ಎಂದು ಪ್ರಶ್ನಿಸಿದ್ದಾರೆ. ‘ಪ್ರಯತ್ನಿಸುತ್ತಿದ್ದೇನೆ. ನನ್ನ ತಂಡದವರು ಇದನ್ನು ಕೇಳಿಸಿಕೊಳ್ಳುತ್ತಿದ್ದಾರೆ ಅಂತ ಭಾವಿಸಿದ್ದೇನೆ’ ಎಂದು ಸುದೀಪ್ ಅವರು ಉತ್ತರಿಸಿದ್ದಾರೆ. ನ ‘ಈಗ’ ಸಿನಿಮಾದ ರೀತಿಯ ಪಾತ್ರದಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ಳುತ್ತೀರಿ’ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ‘ಇನ್ನೊಬ್ಬರು ಆ ರೀತಿಯ ಕಥೆ ಬರೆದಾಗ’ ಎಂದು ಉತ್ತರಿಸಿದ್ದಾರೆ ಸುದೀಪ್.
ಈಗಾಗಲೇ ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಮುಗಿದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Rakshit Shetty: ನೂತನ ಗೃಹ ಪ್ರವೇಶ ನಿಮಿತ್ತ ಕೋಲದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ!
ಜಿಮ್, ವರ್ಕೌಟ್ ಎಂದರೆ ದೂರವೇ ಇರುತ್ತಿದ್ದ ಕಿಚ್ಚ ಸುದೀಪ್, ಪೈಲ್ವಾನ್ ಸಿನಿಮಾಗಾಗಿ ದೇಹವನ್ನು ಕಟುಮಸ್ತಾಗಿ ಬೆಳೆಸಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಸುದೀಪ್ (Kichcha Sudeep) ಅಚ್ಚರಿ ನೀಡಿದ್ದರು. ಈಗ ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿಯೂ ಕಿಚ್ಚ ಸುದೀಪ್ ಅವರು ಅವಿರತವಾಗಿ ವರ್ಕೌಟ್ ಮಾಡುವ ಮೂಲಕ ಭರ್ಜರಿಯಾಗಿಯೇ ದೇಹವನ್ನು ಅಣಿಗೊಳಿಸಿದ್ದಾರೆ. ಸುದೀಪ್ ಅವರು ತಮ್ಮ ಕಟ್ಟುಮಸ್ತು ದೇಹದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.