Site icon Vistara News

Celebrity Cricket League : ಸೋಲಿನ ನಡುವೆ ಆರ್​ಸಿಬಿ ತಂಡಕ್ಕೆ ಶುಭ ಹಾರೈಸಿದ ಕಿಚ್ಚ ಸುದೀಪ್‌!

Kichcha Sudeep On CCL

ಬೆಂಗಳೂರು: ಮಹಿಳಾ ಪ್ರೀಮಿಯರ್ 2024ರ (women’s premier league 2024) ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಟ್ರೋಫಿ ಗೆದ್ದರೆ, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ (Celebrity Cricket League) ಕರ್ನಾಟಕ ಬುಲ್ಡೋಜರ್ಸ್ ಸೋಲು ಕಂಡಿದೆ. ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ನಡುವಿನ ಪಂದ್ಯದಲ್ಲಿ ಕಿಚ್ಚ ಸುದೀಪ್ ತಂಡಕ್ಕೆ ಸೋಲಾಗಿದೆ. ಇದರ ಮಧ್ಯೆಯೇ, ಕಿಚ್ಚ ಸುದೀಪ್ ಅವರು ಮೊದಲ ಬಾರಿ ಕಪ್ ಗೆದ್ದ ಆರ್​ಸಿಬಿ ಮಹಿಳಾ ತಂಡಕ್ಕೆ ಶುಭಾಶಯ ಹೇಳಿದ್ದಾರೆ.

ಸಿಸಿಎಲ್‌ 10ನೇ ಸೀಸನ್‌ ಫೆಬ್ರವರಿ 23ರಿಂದ ಶುರುವಾಗಿತ್ತು. ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ತಂಡ ಸೋಲುಂಡಿದೆ. ಇದೇ ತಂಡದ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಸ್ಯಾಂಡಲ್‌ವುಡ್ ತಾರೆಯರ ತಂಡ ಫೈನಲ್ ಪ್ರವೇಶಿಸಿತ್ತು. ನಾಲ್ಕು ಇನ್ನಿಂಗ್ಸ್‌ಗಳಾಗಿ ನಡೆದ ಪಂದ್ಯದಲ್ಲಿ 12 ರನ್‌ಗಳಿಂದ ಬೆಂಗಾಲ್ ಟೈಗರ್ಸ್ ತಂಡ ಗೆಲುವು ಸಾಧಿಸಿದೆ.

ಸುದೀಪ್‌ ಮಾತನಾಡಿ ʻʻ‘ಈ ಸಲ ಕಪ್ ನಮ್ದೇ’ ಎಂದು ಇಷ್ಟು ದಿನ ಹೇಳಲಾಗುತ್ತಿತ್ತು. ಅಂತೆಯೇ ಈಗ ಕಪ್ ನಮ್ಮದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಕಪ್ ಗೆದ್ದಿದೆ. ಈ ಮೊಲಕ ಇದೇ ಮೊದಲ ಬಾರಿಗೆ ಆರ್​ಸಿಬಿ ತಂಡ ಕಪ್ ಎತ್ತಿದೆ. ಈಗ ಬಾಯ್ಸ್ ತಂಡದ ಮೇಲೆ ಸಾಕಷ್ಟು ಒತ್ತಡ ಇದೆʼʼಎಂದರು.

ಇದನ್ನೂ ಓದಿ: WPL: ಹೊಸ ಮಾದರಿಯಲ್ಲಿ ಮಹಿಳಾ ಪ್ರೀಮಿಯರ್​ ಲೀಗ್​ಗೆ ಬಿಸಿಸಿಐ ಚಿಂತನೆ

ಈ ಸಿಸಿಎಲ್‌ 10ರಲ್ಲಿ ʻಮುಂಬೈ ಹೀರೋಸ್’ ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿದ್ದರು. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. ‘ತೆಲುಗು ವಾರಿಯರ್ಸ್’ ಟೀಮ್ಗೆ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್. ಆ ತಂಡಕ್ಕೆ ಅಖಿಲ್ ಅಕ್ಕಿನೇನಿ ನಾಯಕನಾದ್ದರು. ‘ಕರ್ನಾಟಕ ಬುಲ್ಡೋಜರ್ಸ್’ ಟೀಮ್‌ಗೆ ಕಿಚ್ಚ ಸುದೀಪ್ ಕ್ಯಾಪ್ಟನ್ ಆಗಿದ್ದರು. ಮೋಹನ್‌ ಲಾಲ್ ಸಹ-ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡವನ್ನು ಕ್ಯಾಪ್ಟನ್ ಇಂದ್ರಜಿತ್ ಮುನ್ನಡೆಸಿದ್ದರು. ‘ಭೋಜಪುರಿ ದಬಾಂಗ್ಸ್’ ಟೀಮ್‌ಗೆ ಮನೋಜ್ ತಿವಾರಿ ನಾಯಕ. ಸೋನು ಸೂದ್ ಅವರು ‘ಪಂಜಾಬ್ ದೆ ಶೇರ್’ ತಂಡಕ್ಕೆ ನಾಯಕರಾಗಿದ್ದರು. ಬೋನಿ ಕಪೂರ್ ಒಡೆತನದ ‘ಬೆಂಗಾಲ್ ಟೈಗರ್ಸ್’ ಟೀಮ್‌ಗೆ ಜಿಸ್ಸು ಸೇನ್‌ಗುಪ್ತ ಕ್ಯಾಪ್ಟನ್ ಆಗಿದ್ದರು.

Exit mobile version