ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆಗುತ್ತಿದೆ. ಅಶ್ವಿನಿ ಪುನೀತ್, ಡಾಲಿ ಧನಂಜಯ್, ಸಪ್ತಮಿ ಗೌಡ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. ದೊಡ್ಡಬಿದರಕಲ್ಲು ರೆಡ್ಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ನಟ ದೊಡ್ಡಣ್ಣ ಹೆಂಡತಿ ಜತೆ ಮತದಾನ ಮಾಡಿದ್ದಾರೆ.
ನಟಿ ಅಮೂಲ್ಯ ಅವರು ಪತಿ ಜತೆ ಮುಂಜಾನೆಯೇ ಮತ ಚಲಾಯಿಸಲು ಆಗಮಿಸಿದ್ದರು.
ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್‌ನಲ್ಲಿ ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಮತದಾನ ಮಾಡಿದರು.
ಡಾ. ರಾಜ್ ಕುಮಾರ್ ಕುಟುಂಬದ Smiling ಮತದಾನ ಮಾಡಿದ್ದಾರೆ.
ಇದನ್ನೂ ಓದಿ: Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್ ಹಾಕಿ ನಿರಾಳ
JP ನಗರದ ಎ.ವಿ.ಎಜುಕೇಷನ್ ಸ್ಕೂಲ್‌ನಲ್ಲಿ ಹಿರಿಯ ನಟಿ ತಾರಾ ಮತ್ತು ಅವರ ಪತಿ ಎಚ್ ಸಿ ವೇಣು ಮತದಾನ ಮಾಡಿದರು.
ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಮತದಾನ ಮಾಡಿದರು.
ನಟ ಶ್ರೀಮುರಳಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕುಟುಂಬದ ಜತೆ ಬಂದು ಅವರು ಮತ ಚಲಾಯಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ದಂಪತಿ ವೋಟ್ ಮಾಡಿ, ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಜನತೆಗೆ ಮನವಿ ಮಾಡಿದರು.
ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಡಾಲಿ ಧನಂಜಯ ಮತದಾನ ಮಾಡಿದರು. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್‌ನಲ್ಲಿ ಬಂದು ಹಕ್ಕು ಚಲಾಯಿಸಿದರು ಧನಂಜಯ್.
ಪ್ರಕಾಶ್ ರಾಜ್, ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ , ರವಿಶಂಕರ ದಂಪತಿ ಕೂಡ ಮುಂಜಾನೆಯೇ ಮತ ಚಲಾಯಿಸಿದರು.
ಚೈತ್ರಾ ಆಚಾರ್, ನಮ್ರತಾ ಗೌಡ, ಭಾರತಿ ವಿಷ್ಣುವರ್ಧನ್ ಮತದಾನ ಮಾಡಿದರು.
ಜೆಪಿ ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಮಗಳ ಜತೆ ಮತದಾನ ಮಾಡಿದರು ಸುದೀಪ್.
ಆರ್ ಆರ್ ನಗರದ ಮೌಂಟ್ ಕಾರ್ಮಲ್‌ನಲ್ಲಿ ನಟ ದರ್ಶನ್ ಮತದಾನ ಮಾಡಿದರು.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಉಡುಪಿಯ ಕುಕ್ಕಿಕಟ್ಟೆ ಶಾಲೆಯಲ್ಲಿ ಮತ ಚಲಾಯಿಸಿದರು.
ಪೂಜಾ ಗಾಂಧಿ ಹಾಗೂ ನಟ ಉಪೇಂದ್ರ ಅವರು ವೋಟ್ ಮಾಡಿ ಸಂಭ್ರಮಿಸಿದರು.