ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ (Actress Meghana Raj) ಹೊಸ ಯುಟ್ಯೂಬ್ ಚಾನೆಲ್ ಶುರು ಮಾಡಿರುವುದು ಗೊತ್ತೇ ಇದೆ. ಪುತ್ರ ರಾಯನ್ ರಾಜ್ ಸರ್ಜಾ, ಪ್ರಮೀಳಾ ಜೋಶಾಯ್ ಹಾಗೂ ಸುಂದರ್ ರಾಜ್ ಜತೆ ಹಲವಾರು ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ಮೇಘನಾ ಕುರಿತು ತಂದೆ ನಟ ಸುಂದರರಾಜ್ ಅವರು ಹಲವು ಸಂಗತಿಗಳನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಾಗೇ ಮೇಘನಾ ಅವರು ಸಿನಿಮಾ ಕರಿಯರ್ ಆಯ್ಕೆ ಮಾಡಿಕೊಂಡಿದ್ದು ಮೊದಲಿಗೆ ಇಷ್ಟವರಲಿಲ್ಲ ಎಂದರು.
ಮೇಘನಾ ರಾಜ್ ಮಾತನಾಡಿ ʻʻ ಮೇಘನಾ ಅವರು ಮೊದಲು ಸಿನಿಮಾ ಕರಿಯರ್ ಆಯ್ಕೆ ಮಾಡಿಕೊಂಡಾಗ ಖುಷಿ ಆಗಿಲ್ಲ. ಏಕೆಂದರೆ ಅವಳು ಪೂರ್ಣಾವಧಿ ಮಾಡುತ್ತಾಳಾ ಎನ್ನುವ ಡೌಟ್ ಇತ್ತು. ಹುಡುಗರಿಗೆ ಚಿತ್ರರಂಗ ಬೇರೆಯದ್ದೇ ಮಾತು, ಹುಡುಗಿಯರ ವಿಷಯದಲ್ಲಿ ಅದು ಬೇರೆಯದ್ದೇ ಮಾತು. ನಮ್ಮ ಚಿತ್ರರಂಗದಲ್ಲಿ ಕೆಲವರಿಗೆ ಯಶಸ್ಸು ಸಿಗತ್ತೆ.. ಇನ್ನು ಕೆಲವರಿಗೆ ಇರಲ್ಲ. ನನ್ನ ಮಗಳು ಯಾವುದೇ ಡ್ರಾಮಾ ಸ್ಕೂಲ್‌ಗೆ ಹೋಗಿ ಕಲಿತು ಇರಲಿಲ್ಲ. ಒಳ್ಳೆಯ ಅಭ್ಯಾಸ ಮಾಡಿಕೊಂಡು ಬಂದಳು. ಆಮೇಲೆ ಅವರ ಸ್ನೇಹಿತರ ಮಾತಿನಿಂದ ನಟಿಯಾದಳು. 2008 ಇಂದ ತತ್ಸಮ- ತದ್ಭವ ವರೆಗೂ ಚೆನ್ನಾಗಿ ನಿಭಾಯಿಸಿದ್ದಾಳೆ. ನನಗೆ ಒಂದೊದು ಸಲ ಅವಳ ನಟನೆ ನೋಡಿ ರೋಮಾಚಂನ ಆಗತ್ತೆ. ಆ ನಿಟ್ಟಿನಲ್ಲಿ ಒಳ್ಳೆಯ ಕಲಾವಿದೆ, ಸಿಂಗರ್ ಹಾಗೇ ಒಳ್ಳೆಯ ಡ್ಯಾನ್ಸರ್. ಇನ್ನು ಮುಂದೆ ಒಳ್ಳೆಯ ಕರಿಯರ್ ಇದೆʼʼಎಂದರು.
ಇದನ್ನೂ ಓದಿ: Samarjit Lankesh: ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅಭಿನಯದ `ಗೌರಿ’ ಸಿನಿಮಾ ರಿಲೀಸ್ ಡೇಟ್ ಅನೌನ್ಸ್!
ದ್ದ ಮೇಘನಾ 2009 ರಲ್ಲಿ ತೆರಕಂಡ `ಬೆಂಡು ಅಪ್ಪಾರಾವ್ RMP’ ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಕೆ.ಬಾಲಚಂದರ್ ನಿರ್ಮಾಣದ `ಕೃಷ್ಣಲೀಲೈ’ ಚಿತ್ರದಲ್ಲಿ ನಟಿಸಿದ್ದರೂ ಅದು ತೆರೆ ಕಾಣಲಿಲ್ಲ. 2010ರಲ್ಲಿ ತೆರೆಕಂಡ ಯೋಗೇಶ್ ಚಿತ್ರ `ಪುಂಡ’ ಮೂಲಕ ಚಂದನವನದಲ್ಲಿ ಕೂಡ ನಾಯಕಿಯಾಗಿ ಇನ್ನಿಂಗ್ಸ್ ಆರಂಭಿಸಿದರು.ಮೇಘನಾಗೆ ಸಿನಿ ಕರಿಯರ್‌ಗೆ ಬ್ರೇಕ್ ನೀಡಿದ್ದು ಮಲಯಾಳಂ ಚಿತ್ರರಂಗ. ಹಲವು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ 2013 ರಲ್ಲಿ ತೆರೆಕಂಡ `ರಾಜಾಹುಲಿ’ ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದರು. ನಂತರ `ಬಹುಪರಾಕ್’,`ಆಟಗಾರ’ ಇತ್ತೀಚಿಗೆ ತತ್ಸಮ ತದ್ಭವ ಸೇರಿದಂತೆ ಮುಂತಾದ ಹಿಟ್ ಚಿತ್ರ ನೀಡಿದ್ದಾರೆ.
ಮೇಘನಾ ರಾಜ್ ಬದುಕಲ್ಲಿ 2020 ಕೆಟ್ಟವರ್ಷ. ಅವರು ಐದು ತಿಂಗಳ ಗರ್ಭಿಣಿಯಾಗಿದ್ದಾಗಲೇ, ಪತಿ ಚಿರಂಜೀವಿ ಸರ್ಜಾರನ್ನು ಕಳೆದು ಕೊಂಡರು. 2020ರ ಜೂನ್ 7ರಂದು ಚಿರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದಾದ ಬಳಿಕ ಮಗ ರಾಯನ್ ಹುಟ್ಟಿದ. ಬಳಿಕ ʻತತ್ಸಮ ತದ್ಭವʼ ಸಿನಿಮಾ ಮೂಲಕ ತೆರೆಗೆ ಮತ್ತೆ ಬಂದರು ನಟಿ. ತತ್ಸಮ ತದ್ಭವ ಸಿನಿಮಾಕ್ಕೆ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್ ಅವರು ಬಂಡವಾಳ ಸುರಿದಿದ್ದಾರೆ. ವಿಶಾಲ್ ಆತ್ರೇಯ ಅವರು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿನಿಮಾಕ್ಕೆ ವಾಸುಕಿ ವೈಭವ್ ಅವರ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಅವರ ಸಂಕಲನವಿದೆ.