Site icon Vistara News

Milana Nagaraj: ಗರ್ಭಿಣಿ ಮಿಲನಾ ನಾಗರಾಜ್‌ ಧರಿಸಿರುವ ಕ್ರಶ್ಡ್ ಅನಾರ್ಕಲಿ ಬಾರ್ಡರ್‌ ಗೌನ್‌ನ ವಿಶೇಷ ಏನು?

Milana Nagaraj Anarkali border gown worn

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕ್ರಶ್ಡ್‌ ಅನಾರ್ಕಲಿ ಗೌನ್‌ನಲ್ಲಿ (Actress Fashion) ಆಕರ್ಷಕವಾಗಿ ಕಾಣಿಸಿಕೊಂಡಿರುವ ನಟಿ ಮಿಲನಾ ನಾಗರಾಜ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಮಹಿಳೆಯರ ಗಮನ ಸೆಳೆದಿದ್ದಾರೆ. ಅಂದ ಹಾಗೆ ಮಿಲನಾ ನಾಗರಾಜ್‌ ಈಗ ಗರ್ಭಿಣಿ.
ಈಗಷ್ಟೇ ವಿದೇಶದಲ್ಲಿ ಬೇಬಿ ಮೂನ್‌ ಮುಗಿಸಿ ಪತಿ ಡಾರ್ಲಿಂಗ್‌ ಕೃಷ್ಣ ಅವರೊಂದಿಗೆ ಮರಳಿರುವ ಮಿಲನಾ ಅವರು ನಾನಾ ಇವೆಂಟ್‌ನಲ್ಲಿ ಒಂದಲ್ಲ ಒಂದು ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಬೇಬಿ ಬಂಪ್‌ ಹೈಲೈಟಾಗದಂತೆ ಡ್ರೆಸ್‌ಗಳನ್ನು ಧರಿಸುತ್ತಾರೆ. ಡೀಸೆಂಟಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದು ಫ್ಯಾಷನ್‌ ವಿಮರ್ಶಕರ ಪ್ರಶಂಸೆಗೂ ಒಳಗಾಗುತ್ತಿರುತ್ತಾರೆ.

ಅನಾರ್ಕಲಿ ಗೌನ್‌ನಲ್ಲಿ ಮಿಲನಾ ಸ್ಟೈಲ್‌ & ಸ್ಮೈಲ್‌:

“ಪ್ರೆಗ್ನೆಂಟ್‌ ಆಗಿರುವ ಮಿಲನಾ ನಾಗರಾಜ್‌ ಅವರ ಬೇಬಿ ಬಂಪ್‌ ಎಲ್ಲಿಯೂ ಹೈಲೈಟ್‌ ಆಗುತ್ತಿಲ್ಲ ಎನ್ನುವುದಕ್ಕಿಂತ ಅವರು ಧರಿಸುತ್ತಿರುವ ಉಡುಪುಗಳ ಡಿಸೈನ್‌ ಅಷ್ಟೊಂದು ನೀಟಾಗಿದೆ. ಅವರು ಧರಿಸಿರುವ ಒಂದೊಂದು ಔಟ್‌ಫಿಟ್‌ ಕೂಡ ಡಿಸೆಂಟ್‌ ಲುಕ್‌ ನೀಡುವುದರೊಂದಿಗೆ ಅವರಿಗೆ ಕಂಫರ್ಟಬಲ್‌ ಫೀಲ್‌ ನೀಡಿದೆ” ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಇದನ್ನೂ ಓದಿ: Milana Nagaraj: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಲವ್‌ ಮಾಕ್ಟೆಲ್‌ʼ ಜೋಡಿ!

ಗೋಲ್ಡನ್‌ ಅನಾರ್ಕಲಿ ಡಿಟೇಲ್ಸ್‌

ಎಥ್ನಿಕ್‌ವೇರ್‌ ಡಿಸೈನ್‌ಗಳಿಗೆ ಖ್ಯಾತಿ ಗಳಿಸಿರುವ ಸೆಲೆಬ್ರೆಟಿ ಡಿಸೈನರ್‌ ಸಿಂಧೂ ರೆಡ್ಡಿಯವರ ಡಿಸೈನರ್‌ವೇರ್‌ ಇದು. ಕ್ರಶ್ಡ್‌ ಟಿಶ್ಯೂ ಮೆಟೀರಿಯಲ್‌ನ ಈ ಫ್ಯಾಬ್ರಿಕ್‌ ಅನಾರ್ಕಲಿ ವಿನ್ಯಾಸವನ್ನು ಒಳಗೊಂಡಿದೆ. ಮಿಲನಾಗೆ ಎಲಿಗೆಂಟ್‌ ಲುಕ್‌ ನೀಡಿರುವ ಈ ಅನಾರ್ಕಲಿ ಗೌನ್‌ಗೆ ಸ್ಲೀವ್‌ ಹಾಗೂ ಡಿಸೈನರ್‌ವೇರ್‌ ಕೆಳಗೆ ಇರುವ ಬಿಗ್‌ ಬಾರ್ಡರ್‌ ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ ನೀಡಿದೆ. ಇದರೊಂದಿಗೆ ಕಾಂಟ್ರಸ್ಟ್‌ ಶೇಡ್‌ನ ಬನಾರಸಿ ಬಾರ್ಡರ್‌ ಬಗೆಯ ಸೊಂಟದ ಪಟ್ಟಿ ಅಂದರೆ ಟೈಯಿಂಗ್‌ ಹ್ಯಾಂಡ್‌ ವರ್ಕ್‌ ಎಂಬ್ರಾಯ್ಡರಿ ಮಾಡಿರುವ ವೇಸ್ಟ್‌ ಬೆಲ್ಟ್‌ ಅಥವಾ ಕಮರ್‌ಬಾಂದ್‌ ಗೌನನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ಇದರೊಂದಿಗೆ ಮ್ಯಾಚ್‌ ಮಾಡಿರುವ ರೆಡ್‌ ಪ್ಯೂರ್‌ ಅರ್ಗಾನ್ಜಾ ದುಪಟ್ಟಾ ಕೂಡ ಸಖತ್‌ ಲುಕ್‌ ನೀಡಿದೆ ಎಂದು ವಿವರಿಸುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಸಿಂಧೂ ರೆಡ್ಡಿ. ಅವರ ಪ್ರಕಾರ, ಅನಾರ್ಕಲಿ ಡಿಸೈನ್‌ನಲ್ಲೂ ಟ್ರೆಡಿಷನಲ್‌ ಲುಕ್‌ ನೀಡಬಹುದು ಎನ್ನುವುದಕ್ಕೆ ಈ ಡಿಸೈನರ್‌ವೇರ್‌ ಸಾಕ್ಷಿ ಎನ್ನುತ್ತಾರೆ.

ಮಿಲನಾ ನಾಗರಾಜ್‌ ಆಕರ್ಷಕ ಲುಕ್‌

ನಟಿ ಮಿಲನಾ ನಾಗರಾಜ್‌ ಖಾಸಗಿ ಕಾರ್ಯಕ್ರಮಕ್ಕೆಂದು ಧರಿಸಿದ ಈ ಅನಾರ್ಕಲಿ ಗೌನ್‌ನ ಸ್ಟೈಲಿಂಗ್‌ ಸ್ಟೈಲಿಸ್ಟ್‌ಗಳಾದ ತೇಜು ಹಾಗೂ ಖುಷಿ ಮಾಡಿದ್ದಾರೆ. ಇನ್ನು, ವರಹಾ ಸಿಲ್ವರ್‌ ಜ್ಯುವೆಲರಿ ಧರಿಸಿರುವ ಮಿಲನಾ ಲೈಟ್‌ ಮೇಕಪ್‌ನಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ. ಮಿಲನಾಗೆ ಈ ಡಿಸೈನರ್‌ವೇರ್‌ ಸಖತ್‌ ಇಷ್ಟವಾಗಿದೆಯಂತೆ. ಅದರಲ್ಲೂ ಟ್ರೆಡಿಷನಲ್‌ ಲುಕ್‌ ನೀಡುವ ಈ ಔಟ್‌ಫಿಟ್‌ ಲೈಟ್‌ವೈಟ್‌ ಆಗಿರುವುದು ಮತ್ತಷ್ಟು ಕಂಫರ್ಟಬಲ್‌ ಆಗಿಸಿದೆಯಂತೆ. ಯಾವುದೇ ಉಡುಪನ್ನು ನಾನು ಇಷ್ಟಪಟ್ಟು ಧರಿಸುತ್ತೇನೆ ಎನ್ನುತ್ತಾರೆ ಅವರು.

ಮಿಲನಾ ಎಲಿಗೆಂಟ್‌ ಫ್ಯಾಷನ್‌ ಮಂತ್ರ

ಈ ಹಿಂದೆ ವಿಸ್ತಾರ ನ್ಯೂಸ್‌ನ ಫ್ಯಾಷನ್‌ ಕುರಿತ ಸಂದರ್ಶನದಲ್ಲಿ ಮಿಲನಾ ಅವರೇ ಹೇಳಿದಂತೆ, ಯಾವುದೇ ಔಟ್‌ಫಿಟ್‌ ಹಾಗೂ ಡಿಸೈನರ್‌ವೇರ್‌ ಕಂಫರ್ಟಬಲ್‌ ಫೀಲ್‌ ನೀಡಿದಾಗ ತಂತಾನೇ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ. ನಮ್ಮ ಪರ್ಸನಾಲಿಟಿಗೆ ತಕ್ಕಂತೆ ಧರಿಸಿದಾಗ ಇನ್ನಷ್ಟು ಸುಂದರವಾಗಿ ಕಾಣುತ್ತದೆ ಎಂಬುದು ಸತ್ಯಕ್ಕೆ ಹತ್ತಿರ ಎಂಬುದು ತಿಳಿದು ಬರುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version