Site icon Vistara News

Nanu Mattu Gunda-2: ಬರ್ತಿದೆ ʻನಾನು ಮತ್ತು ಗುಂಡ-2ʼ ಸಿನಿಮಾ; ಡಬ್ಬಿಂಗ್‌ಗೆ ಇಳಿದ ಸಿಂಬ!

Nanu Mattu Gunda-2 dog simba dubbing rakesh adiga in main roles

ಬೆಂಗಳೂರು: ನಾನು ಮತ್ತು ಗುಂಡ-2 (Nanu Mattu Gunda-2) ಚಿತ್ರದ ಒಂದು ವಿಡಿಯೋ ಈ ಹಿಂದೆ ರಿಲೀಸ್ ಆಗಿತ್ತು. ಇದು ಚಿತ್ರದ ಟೈಟಲ್ ರಿವೀಲ್ ಮಾಡಿತ್ತು. ಗುಂಡನ ಪಾತ್ರದ ಹೇಗಿರುತ್ತದೆ ಅನ್ನುವುದನ್ನು ತೋರಿಸಿಕೊಟ್ಟಿತ್ತು. ನಾನು ಮತ್ತು ಗುಂಡ ಚಿತ್ರದಲ್ಲಿ ರಾಕೇಶ್ ಅಡಿಗ ಹೀರೋ ಆಗಿದ್ದಾರೆ. ಲವ್ ಮಾಕ್ಟೆಲ್ ಚಿತ್ರದಲ್ಲಿ ನಟಿಸಿದ್ದ ರಚನಾ ಇಂದರ್ ಈ ಚಿತ್ರದ ಹೀರೋಯಿನ್ ಆಗಿದ್ದಾರೆ.ನಾನು ಮತ್ತು ಗುಂಡ’ ಚಿತ್ರದ ಸೀಕ್ವೇಲ್ ಆಗಿ ತೆರೆಗೆ ಬರುತ್ತಿರುವ ನಾನು ಮತ್ತು ಗುಂಡ -‌2 ನಲ್ಲಿ ನಾಯಕ ರಾಕೇಶ್ ಅಡಿಗ ಜೊತೆ ಡಾಗ್ ಸಿಂಬ ಕೂಡ ಪ್ರಮುಖ‌ ಪಾತ್ರದಲ್ಲಿ ಕಾಣಿಸಿಕೊಂಡಿದೆ.

ರಘುಹಾಸನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಡಬ್ಬಿಂಗ್ ಕೆಲಸ ಈಗಷ್ಟೇ ಶುರುವಾಗಿದೆ. ಇಡೀ ಸಿನಿಮಾದಲ್ಲಿ ಎಲ್ಲಾ ರೀತಿಯ ಎಮೋಷನ್ಸ್ ಇದ್ದು, ವಿಶೇಷವಾಗಿ ಡಾಗ್ ಸಿಂಬಾ ರೆಕಾರ್ಡಿಂಗ್ ಸ್ಟುಡೊಯೋಗೆ ಬಂದು ತನ್ನ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಅದರ ಬೊಗಳೋ ಸೌಂಡ್ ರೆಕಾರ್ಡ್ ಮಾಡಲಾಗುತ್ತಿದೆ.

ʻʻಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಸೌಂಡ್ ಇರುತ್ತದೆ. ಹಾಗಾಗಿಯೇ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ.ಡಾಗ್ ಕೈಲಿ ಡಬ್ಬಿಂಗ್ ಮಾಡಿಸುತ್ತಿರುವುದು ನಾವೇ ಮೊದಲೆನ್ನಬಹುದು. ಹಿಂದಿನ ಪಾರ್ಟ್ ಒನ್ ಚಿತ್ರದಲ್ಲೂ ಡಾಗ್‌ನಿಂದಲೇ ಡಬ್ಬಿಂಗ್ ಮಾಡಿಸಿದ್ದೇವೆ. ಆದರೆ, ಅದು ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ ಆಗಿತ್ತು. ಪಾರ್ಟ್-2ನ ಇಡೀ ಸಿನಿಮಾದಲ್ಲಿ ಡಾಗ್ ಸಿಂಬಾನೇ ಡಬ್ ಮಾಡುತ್ತಿದೆ. ಇಂಡಿಯಾದಲ್ಲಿ ಇಲ್ಲಿವರೆಗೂ ಯಾರೂ ಈ ಪ್ರಯತ್ನ ಮಾಡಿಲ್ಲʼʼ ಎಂದು ನಿರ್ದೇಶಕ ರಘು ಹಾಸನ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Kannada New Movie: `ಗೋಪಿಲೋಲ’ ಸಿನಿಮಾದ ಎರಡನೇ ಹಾಡು ರಿಲೀಸ್ !

ದೆ. ಮೊದಲ ಭಾಗದಲ್ಲಿ ಮರಣ ಹೊಂದಿದ್ದ ನಾಯಕ ಶಂಕರ​ನಿಗೆ ಎರಡನೇ ಭಾಗದಲ್ಲಿ ಪುನರ್ಜನ್ಮವಾಗಿರುತ್ತದೆ. ಗೋವಿಂದೇ ಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಚಿತ್ರಕಥೆ ಮುಂದುವರೆಯಲಿದೆ. ಸೋಷಿಯಲ್ ಕನ್ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ರಘು ಹಾಸನ್ ಹೊತ್ತಿದ್ದಾರೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ‘ನಾನು ಮತ್ತು ಗುಂಡ 2’ಗೆ ಆರ್.ಪಿ.ಪಟ್ನಾಯಕ್ ಸಂಗೀತ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ತನ್ವಿಕ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗು ರಾಘು ನೃತ್ಯ ನಿರ್ದೇಶನವಿದೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

Exit mobile version